ಕೇರಳದಲ್ಲಿ ಹಿಂದಿ ಪರೀಕ್ಷೆ ಬರೆದ ಇಟಾಲಿಯನ್ ದಂಪತಿ…!

ಕೇರಳದಲ್ಲಿ ಹೋಟೆಲ್ ಹೊಂದಿರುವ ಇಟಾಲಿಯನ್ ದಂಪತಿ ಕೇವಲ ಮೂರೂವರೆ ತಿಂಗಳು ಹಿಂದಿ ಕಲಿತು ಹಿಂದಿ ಪರೀಕ್ಷೆ ಬರೆದಿದ್ದಾರೆ…!ದಂಪತಿ ಆರಂಭದಲ್ಲಿ ತಮ್ಮ ಹೋಟೆಲ್‌ಗೆ ಬರುವ ಅತಿಥಿಗಳೊಂದಿಗೆ ಸಂವಹನ ನಡೆಸಲು ಸ್ಪೋಕನ್ ಹಿಂದಿ ತರಗತಿಗಳನ್ನು ಹೋಗಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.
ದಂಪತಿಗೆ ಮಾತನಾಡಲು ಕಲಿತ ನಂತರ ಭಾಷೆಯ ಮೇಲಿನ ಪ್ರೀತಿ ಬೆಳೆಯಿತು, ಮಾತನಾಡುವ ಹಿಂದಿಯಲ್ಲಿ ಮುಂದುವರೆದ ನಂತರ ಇಬ್ಬರೂ ಶನಿವಾರದಂದು ಹಿಂದಿ ಕಲಿಕಾ ತರಗತಿಗೆ ಹೋಗಲು ಪ್ರಾರಂಭಿಸಿದರು. ಮೂರೂವರೆ ತಿಂಗಳ ಕಾಲ ಕಲಿತ ನಂತರ ದಂಪತಿ ಕಾಟನ್ ಹಿಲ್ ಶಾಲೆಯಲ್ಲಿ ಹಿಂದಿ ಪ್ರಧಮ ಕೋರ್ಸ್ ಪರೀಕ್ಷೆ ಬರೆದಿದ್ದಾರೆ ಎಂದು ವರದಿಯಾಗಿದೆ.
ಮೌರೊ ಸರಂಡ್ರಿಯಾ ಮತ್ತು ಮರೀನಾ ಮಟಿಯೊಲಿ ದಂಪತಿ ಕೇರಳದ ಕೋವಲಂನಲ್ಲಿರುವ ಪರದೇಶ ಇನ್ ಎಂಬ ಹೋಟೆಲ್ ಅನ್ನು ನಡೆಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೌರೊ, ಹಿಂದಿ ಕಲಿಕೆಯ ಅನುಭವ ಮತ್ತು ಸ್ಫೂರ್ತಿಯನ್ನು ಹಂಚಿಕೊಂಡರು. ಭಾರತದ ಮೇಲಿನ ಪ್ರೀತಿಯು ದೇಶದ ಧಾರ್ಮಿಕ ಪಠ್ಯಗಳಿಂದ ಬಂದಿದೆ ಎಂದು ಹೇಳಿದರು. ನನ್ನ ಪತ್ನಿ ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಅವರು ಈ ಹಿಂದೆ 1978 ರಿಂದ 1988 ರವರೆಗೆ 18 ನೇ ವಯಸ್ಸಿನಲ್ಲಿ ಆಶ್ರಮಕ್ಕೆ ಭೇಟಿ ನೀಡಿ ವಾಸವಾಗಿದ್ದ ಕಾರಣ ಅವರು ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎಂದು ತಿಳಿಸಿದರು.
ಭಾರತದೊಂದಿಗೆ ಸಂಪರ್ಕ ಹೊಂದಿದ್ದರೂ, ಭಾಷೆಯನ್ನು ಕಲಿಯಲು ನಮಗೆ ಎಂದಿಗೂ ಅವಕಾಶ ಸಿಗಲಿಲ್ಲ, ವಯಸ್ಸಾಗುತ್ತಿದ್ದು, ಈಗ ಕಲಿಯುತ್ತಿರುವುದಾಗಿ ಹೇಳಿದರು. ದಂಪತಿ ಭಾರತವನ್ನು ಪ್ರೀತಿಸುವುದನ್ನು ಹೊರತುಪಡಿಸಿ, ಶ್ರೀಕೃಷ್ಣನ ಆರಾಧಕರಾಗಿದ್ದಾರೆ.18 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾರೆ.
ಇಟಾಲಿಯನ್ ದಂಪತಿ ಹಿಂದಿ ಪರೀಕ್ಷೆಯನ್ನು ತೆಗೆದುಕೊಂಡ ನಂತರ, ಹಿಂದಿ ಪ್ರಚಾರ ಸಭಾದ ತಿರುವನಂತಪುರದ ಕಾರ್ಯದರ್ಶಿ ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೌರೊ ಮತ್ತು ಮರೀನಾ ರಾಜ್ಯದಲ್ಲಿ ಹಿಂದಿ ಪರೀಕ್ಷೆಯನ್ನು ತೆಗೆದುಕೊಂಡ ಮೊದಲ ವಿದೇಶಿಯರಾಗಿದ್ದಾರೆ ಎಂದು ಹೇಳಿದರು. ಕೋವಲಂನಲ್ಲಿ ಹೋಟೆಲ್ ನಡೆಸುತ್ತಿರುವ ದಂಪತಿ ಭವಿಷ್ಯದಲ್ಲಿ ಭಾರತೀಯ ಪೌರತ್ವ ಪಡೆಯುವ ಹಂಬಲದಲ್ಲಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement