ಕರ್ನಾಟಕ ಬಜೆಟ್‌ 2023-24 : ₹3.1 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಬೊಮ್ಮಾಯಿ, ಕೃಷಿ, ಜಲಸಂಪನ್ಮೂಲ, ಕೃಷಿ, ಮಹಿಳೆಯರಿಗೆ ಆದ್ಯತೆ

ಬೆಂಗಳೂರು: ಚುನಾವಣೆಗೂ ಮುನ್ನ 2023-24ನೇ ಸಾಲಿನ ಬಜೆಟ್‌ ಮಂಡಿಸಿರುವ ಬಸವರಾಜ ಬೊಮ್ಮಾಯಿ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಗಾತ್ರದ ಭಾರೀ ಆಯವ್ಯಯವನ್ನು ಮಂಡಿಸಿದ್ದಾರೆ. ಇದರಲ್ಲಿ 77,750 ಕೋಟಿ ರೂ. ಸಾಲವನ್ನು ಪಡೆಯಲಿರುವುದಾಗಿ ತಿಳಿಸಿದ್ದಾರೆ.ಸಾಲಿನಲ್ಲಿ ಒಟ್ಟು 3,03,910 ಕೋಟಿ ರೂ. ಹಣ ಜಮೆಯಾಗಲಿದೆ ಎಂದು ಅಂದಾಜು ಮಾಡಿದ್ದು, 3,09,182 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈ ಮೂಲಕ ಕರ್ನಾಟಕ ಬಜೆಟ್‌ ಗಾತ್ರ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.
ಬಜೆಟ್‌ ಅಂಕಿ-ಅಂಶಗಳ ಪ್ರಕಾರ, ಬಹಿರಂಗ ಮಾರುಕಟ್ಟೆಯಿಂದ 70,295 ಕೋಟಿ ರೂ. ಸಾಲ ಪಡೆಯುವುದಾಗಿ ಬಸವರಾಜ ಬೊಮ್ಮಾಯಿ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಕೇಂದ್ರದಿಂದ 6,254 ಕೋಟಿ ರೂ. ಸಾಲ ಪಡೆಯಲಿದ್ದರೆ, ಎನ್‌ಎಸ್‌ಎಸ್‌ಎಸ್‌ಎಫ್‌, ಎನ್‌ಸಿಡಿಸಿ ಮತ್ತು ಆರ್‌ಐಡಿಎಫ್‌ಗಳಿಂದ 1,201 ಕೋಟಿ ರೂ. ಸಾಲ ಪಡೆಯುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಒಟ್ಟಾರೆ 77,750 ಕೋಟಿ ರೂ. ಸಾಲ ಪಡೆಯಲಿರುವುದಾಗಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರದ ವೆಚ್ಚಗಳು…
ಬಂಡವಾಳ ವೆಚ್ಚವಾಗಿ 58,327.84 ಕೋಟಿ ರೂ. ಖರ್ಚು ಮಾಡುವ ಅಂದಾಜನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಕೇಂದ್ರ ಸರ್ಕಾರದ ಸಾಲಗಳ ಮರುಪಾವತಿಗೆ 1,666.05 ಕೋಟಿ ರೂ. ಮೀಸಲಿಟ್ಟಿದೆ. ಮಾರುಕಟ್ಟೆ ಸಾಲಗಳ ಮರುಪಾವತಿಗೆ 17,997.7.33 ಕೋಟಿ ರೂ.ಗಳನ್ನು ಸರಕಾರ ವೆಚ್ಚ ಮಾಡಲಿದೆ.
ಅಲ್ಲದೆ, ಎಲ್‌ಐಸಿ, ಜಿಐಸಿ, ಎನ್‌ಎಸ್‌ಎಸ್‌ಎಫ್‌, ಎನ್‌ಸಿಡಿಸಿ ಮತ್ತು ಆರ್‌ಐಡಿಎಫ್‌ ಸಾಲಗಳ ಮರು ಸಂದಾಯಕ್ಕೆ 2,777.22 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಮೀಸಲಿರಿಸಿದ್ದರೆ, ಸಾಲಗಳು ಮತ್ತು ಮುಂಗಡಗಳ ಬಟವಾಡೆಗೆ 2,905.69 ಕೋಟಿ ರೂ. ತೆಗೆದಿರಿಸಲಾಗಿದೆ. ಈ ಮೂಲಕ ಒಟ್ಟು ಸಾಲಗಳ ಮರುಪಾವತಿಗೆ 25,346.29 ಹಣ ತೆಗೆದಿಟ್ಟಿದೆ.
5.65 ಲಕ್ಷ ಕೋಟಿ ರೂ.ಗೆ ಸಾಲ ಏರಿಕೆ
2023-24ರ ಕೊನೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ 5.64,896 ಕೋಟಿ ರೂ.ಗಳಾಗುತ್ತವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದು, ಇದು ಜಿಎಸ್‌ಡಿಪಿಯ ಶೇ. 24.20ಯಷ್ಟಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜಸ್ವ ಲೆಕ್ಕಗಳನ್ನು ನೋಡುವುದಾದರೆ ರಾಜ್ಯ ತೆರಿಗೆಯಿಂದ 1,64,652.60 ಕೋಟಿ ರೂ. ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು 37,252.21 ಕೋಟಿ ರೂ., ಕೇಂದ್ರ ಸರ್ಕಾರದ ಅನುದಾನಗಳ ರೂಪದಲ್ಲಿ 13,005 ಕೋಟಿ ರೂ., ತೆರಿಗೆಯೇತರ ರಾಜಸ್ವ 11,000 ಕೋಟಿ ರೂ. ಬರಲಿದೆ ಎಂದು ಅಂದಾಜು ಮಾಡಲಾಗಿದ್ದು, ಒಟ್ಟು 2,25,909.81 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಸಾಮಾಜಿಕ ಸೇವೆಗಳಿಗೆ 81,084.12 ಕೋಟಿ ರೂ., ಆರ್ಥಿಕ ಸೇವೆಗಳಿಗೆ 55,787.26 ಕೋಟಿ ರೂ., ಸಾಮಾನ್ಯ ಸೇವೆಗಳಿಗೆ 81,820.26 ಕೋಟಿ ರೂ., ಸಹಾಯಾನುದಾನವಾಗಿ 6,815.75 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.
ಶಿಕ್ಷಣ: 37,960 ಕೋಟಿ
ಜಲಸಂಪನ್ಮೂಲ 22,854 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20,494 ಕೋಟಿ
ನಗರಾಭಿವೃದ್ಧಿ: 17,938 ಕೋಟಿ
ಕಂದಾಯ: 15,943 ಕೋಟಿ
ಒಳಾಡಳಿತ ಮತ್ತು ಸಾರಿಗೆ: 14509 ಕೋಟಿ
ಇಂಧನ: 13,803 ಕೋಟಿ
ಸಮಾಜ ಕಲ್ಯಾಣ: 11,163 ಕೋಟಿ
ಲೋಕೋಪಯೋಗಿ: 10,741 ಕೋಟಿ
ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5,676 ಕೋಟಿ
ಆಹಾರ ಮತ್ತು ನಾಗರೀಕ ಸರಬರಾಜು: 4,600 ಕೋಟಿ ವಸತಿ: 3,787 ಕೋಟಿ ಇತರೆ: 1,16,968 ಕೋಟಿ…
* ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023 24ನೇ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂ ಅನುದಾನ ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆಗೆ ಕಳೆದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರದ ತಲಾ 4822 ಕೋಟಿ ರೂ ನಂತೆ ಒಟ್ಟಾರೆ 15,752 ಕೋಟಿ ರೂಗಳನ್ನು ರೈತರ ಖಾತೆಗೆ ನೇರ ಜಮೆ.
*ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 6 ನಿಗಮಗಳಿಗೆ 2023-24 ಸಾಲಿನಲ್ಲಿ 1842 ಕೋಟಿ ವಿವಿಧ ಯೋಜನೆಗಳ ಅನುಷ್ಠಾನ
*ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆ ಅಡಿ 2023 24ನೇ ಸಾಲಿನಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡಲು ನಿರ್ಧಾರ. ಇದರಿಂದ ಸುಮಾರು 50 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರೈತರ ಬಡ್ಡಿ ರಹಿತ ಸಾಲದ ಮಿತಿಯನ್ನು ಮೂರು ಲಕ್ಷ ರೂ ನಿಂದ 5 ಲಕ್ಷ ರೂ.ಗಳಿಗೆ ಏರಿಕೆ.
* ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25000 ಕೋಟಿ ರೂಗಳಷ್ಟು ಸಾಲ ವಿತರಿಸುವ ಗುರಿ ನಿಗದಿ.
* 2022-23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2031 ಕೋಟಿ ರೂಗಳನ್ನು ಎರಡು ತಿಂಗಳ ಅವಧಿಯೊಳಗೆ ಜಮೆ.
*ಬೀದರ್ ಕಲಬುರ್ಗಿ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಹೆಕ್ಟೇರಿಗೆ 10,000 ರೂ.ಗಳಂತೆ 223 ಕೋಟಿ ರೂ ಪರಿಹಾರ.
* ರಾಜ್ಯದ 3.6 ಲಕ್ಷ ರೈತರ ಅನುಕೂಲಕ್ಕೆ 2022 23ನೇ ಸಾಲಿನಲ್ಲಿ ಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಪ್ರತಿ ಕ್ವಿಂಟಲ್ ಗೆ 3578 ರೂ.ಗಳಂತೆ 1879 ಕೋಟಿ ರೂ.ಗಳು ವೆಚ್ಚ. 75,000 ರೈತರಿಂದ ಭತ್ತ ಹಾಗೂ 40,000 ರೈತರಿಂದ ಬಿಳಿ ಜೋಳ ಖರೀದಿಗೆ 1072 ಕೋಟಿ ರೂಪಾಯಿ ಮೀಸಲು.
*ಈ ಸಾರಿ ಕುಚಲಕ್ಕಿ ಖರೀದಿಗೂ ಸಹ ಪ್ರೋತ್ಸಾಹ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ರಾಗಿ ಜೋಳ ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿ.
* ಬೆಳೆಗಳ ಸಂರಕ್ಷಣೆ ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ರೂ ನೆರವು
* ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕೆ 545 ಕೋಟಿ ರೂ ವೆಚ್ಚ
* ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 725 ಕೋಟಿ ರೂ ನೀಡಿಕೆ
* ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ರೂ.962 ಕೋಟಿ ವೆಚ್ಚ.
* ನೀರಾವರಿ ಪಂಪ್ಸೆಟ್‌ಗೆ 52,590 ಕೋಟಿ ರೂ ವಿದ್ಯುತ್ ಸಹಾಯಧನ
* ಫಸಲ್ ಭೀಮಾ ಯೋಜನೆ ಅಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ರೂ.4,900 ಕೋಟಿ ಪಾವತಿ
* ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ
* ಕೃಷಿಯಂತ್ರೀಕರಣ ಉತ್ತೇಜನಕ್ಕೆ 2037 ಕೋಟಿ ರೂ.ಗಳು ನೀಡಿಕೆ, ಕೃಷಿ ಮತ್ತು ತೋಟಗಾರಿಕೆ ಹನಿ ನೀರಾವರಿಗೆ 2900 ಕೋಟಿ ರೂ.ಗಳ ಮಾರುಕಟ್ಟೆ ನೆರವು
* ಹಿಂದುಳಿದ ವರ್ಗಗಳ‌ 11 ನಿಗಮಗಳ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 16000 ಕೋಟಿ ಮೀಸಲು
* ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಗಳ ಜಾರಿಗೆ 2023 – 24 ಸಾಲಿನಲ್ಲಿ 306 ಕೋಟಿ ಮೀಸಲು
* ಪ್ರತಿ ವರ್ಷ 2000 ಕೆರೆಗಳ ಅಭಿವೃದ್ದಿಗೆ 200 ಕೋಟಿ
* ಗ್ರಾಮ‌ ಪಂಚಾಯತ ಅನುದಾನ 22 ರಿಂದ 60 ಲಕ್ಷಗಳಿಗೆ ಏರಿಕೆ
* ನರೇಗಾಕ್ಕೆ 1800 ಕೋಟಿ

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement