ಶಿವಸೇನೆಯ ಹೆಸರು, ಚಿಹ್ನೆ ಪಡೆಯಲು 2,000-ಕೋಟಿ ಡೀಲ್ ನಡೆದಿದೆ : ಸಂಜಯ ರಾವತ್‌ ಗಂಭೀರ ಆರೋಪ

ಮುಂಬೈ: ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು “₹ 2000 ಕೋಟಿಗಳ ಅವ್ಯವಹಾರ ನಡೆದಿದೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ ರಾವತ್ ಅವರು ಭಾನುವಾರ ಆರೋಪಿಸಿದ್ದಾರೆ.
ಸಂಜಯ ರಾವತ್‌ ಅವರು ತಮ್ಮ ಟ್ವೀಟ್‌ನಲ್ಲಿ ₹ 2,000 ಕೋಟಿ ಎಂಬುದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು ಇದು 100 ಪ್ರತಿಶತ ಸತ್ಯ ಎಂದು ಹೇಳಿದ್ದಾರೆ. ಆಡಳಿತ ಪಕ್ಷಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯಸಭಾ ಸದಸ್ಯ ರಾವತ್‌ ತಮ್ಮ ಈ ಹೇಳಿಕೆಗೆ ಪುರಾವೆ ಇದೆ ಹಾಗೂ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಶಿವಸೇನೆ ಹೆಸರನ್ನು ಖರೀದಿಸಲು ₹ 2,000 ಕೋಟಿ ಸಣ್ಣ ಮೊತ್ತವಲ್ಲ. ಚುನಾವಣಾ ಆಯೋಗದ ನಿರ್ಧಾರವು ಒಂದು ಒಪ್ಪಂದವಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಶಿವಸೇನೆ ಹೆಸರು ಮತ್ತು ಅದರ ಚಿಹ್ನೆಯನ್ನು ಪಡೆಯಲು ₹ 2000 ಕೋಟಿ ಡೀಲ್ ನಡೆದಿರುವ ಬಗ್ಗೆ ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು 100 ಪ್ರತಿಶತ ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿಲ್ಲ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : ಡಬ್ಲ್ಯೂ ಎಫ್‌ ಐ ಮಾಜಿ ಮುಖ್ಯಸ್ಥನ ವಿರುದ್ಧ ದೋಷಾರೋಪಣೆ ರೂಪಿಸಲು ಕೋರ್ಟ್‌ ಆದೇಶ

ಚುನಾವಣಾ ಆಯೋಗವು ಶುಕ್ರವಾರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿದೆ ಮತ್ತು ಅದಕ್ಕೆ ‘ಬಿಲ್ಲು ಮತ್ತು ಬಾಣ’ ಚುನಾವಣಾ ಚಿಹ್ನೆಯನ್ನು ಅದಕ್ಕೆ ನೀಡಲು ಆದೇಶಿಸಿದೆ.
ಸಂಘಟನೆಯ ನಿಯಂತ್ರಣಕ್ಕಾಗಿ ಸುದೀರ್ಘ ಹೋರಾಟದ ಕುರಿತು 78 ಪುಟಗಳ ಆದೇಶದಲ್ಲಿ, ಉದ್ಧವ್ ಠಾಕ್ರೆ ಬಣವು ರಾಜ್ಯದಲ್ಲಿ ವಿಧಾನಸಭೆ ಉಪಚುನಾವಣೆ ಪೂರ್ಣಗೊಳ್ಳುವವರೆಗೆ ತನಗೆ ನಿಗದಿಪಡಿಸಿದ “ಜ್ಯೋತಿ” ಚುನಾವಣಾ ಚಿಹ್ನೆಯನ್ನು ಇಟ್ಟುಕೊಳ್ಳಲು ಚುನಾವಣಾ ಆಯೋಗ ಅನುಮತಿಸಿದೆ.

ಶಿವಸೇನೆಯ ಏಕನಾಥ ಶಿಂಧೆ ಬಂಡಾಯವೆದ್ದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚಿಸಿದ್ದ ಉದ್ಧವ್‌ ಠಾಕ್ರೆ ನೇತೃತ್ವದ ಉದ್ಧವ್ ಠಾಕ್ರೆ ಮಹಾ ವಿಕಾಸ್ ಅಘಾಡಿ (MVA) ಸರ್ಕಾರ ಪತನವಾಯಿತು. ನಂತರ ಏಕನಾಥ ಶಿಂಧೆ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು.

ಪ್ರಮುಖ ಸುದ್ದಿ :-   ಮಧ್ಯಂತರ ಜಾಮೀನು ಸಿಕ್ಕರೂ ಕೇಜ್ರಿವಾಲ್‌ ದೆಹಲಿ ಸಿಎಂ ಕಚೇರಿಗೆ ಹೋಗುವಂತಿಲ್ಲ...

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement