ಸೆಲ್ಫಿ ವಿವಾದ: ಜಾಮೀನಿನ ನಂತರ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸಿದ ಸಪ್ನಾ ಗಿಲ್

ಮುಂಬೈ: ಸೋಷಿಯಲ್ ಮೀಡಿಯಾದ ಪ್ರಭಾವಿ ಸಪ್ನಾ ಗಿಲ್ ಮತ್ತು ಕ್ರಿಕೆಟಿಗ ಪೃಥ್ವಿ ಶಾ ಒಳಗೊಂಡ ವಿವಾದ ಇನ್ನೂ ಅಂತ್ಯ ಕಾಣುತ್ತಿಲ್ಲ. ಸೋಮವಾರ, 23 ವರ್ಷದ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್ ವಿರುದ್ಧ ಮುಂಬೈ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಸಪ್ನಾ ಗಿಲ್ ದೂರು ನೀಡಿದ್ದಾರೆ.
ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ ಬಳಿಕ ಸಪ್ನಾ ಗಿಲ್ ಮುಂಬೈ ಪೊಲೀಸ್ ಕಸ್ಟಡಿಯಿಂದ ಹೊರನಡೆದ ನಂತರ ಇದು ನಡೆದಿದೆ. ಪೃಥ್ವಿ ಶಾ ಅವರ ಸ್ನೇಹಿತನ ಕಾರನ್ನು ಧ್ವಂಸಗೊಳಿಸಿದ್ದಕ್ಕಾಗಿ ಓಶಿವಾರ ಪೊಲೀಸರು ಪ್ರಕರಣ ದಾಖಲಿಸಿರುವ ಎಂಟು ಮಂದಿಯಲ್ಲಿ ಒಬ್ಬರಾದ ಸಪ್ನಾ ಗಿಲ್, ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ತಮ್ಮನ್ನು ಮೊದಲು ಪ್ರಚೋದಿಸಿದರು ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ. ಮುಂಬೈನ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಪೃಥ್ವಿ ಶಾ ಅವರು ಸಪ್ನಾ ಗಿಲ್ ಹಾಗೂ ಇತತರಿಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ ನಂತರ ಈ ಗಲಾಟೆ ನಡೆದಿದೆ.
ಸಪ್ನಾ ಗಿಲ್ ಅವರ ದೂರನ್ನು ಸೆಕ್ಷನ್ 34 (ಸಾಮಾನ್ಯ ಉದ್ದೇಶದಿಂದ ಕ್ರಿಮಿನಲ್ ಆಕ್ಟ್), 120 ಬಿ (ಕ್ರಿಮಿನಲ್ ಪಿತೂರಿ), 146 (ಗಲಭೆ), 148 (ಶಸ್ತ್ರಾಸ್ತ್ರಗಳೊಂದಿಗೆ ಗಲಭೆ), 149, ಭಾರತೀಯ ದಂಡ ಸಂಹಿತೆಯ 324, 323, 351, 354 ಹಾಗೂ 509ರ ಅಡಿಯಲ್ಲಿ ದಾಖಲಿಸಲಾಗಿದೆ.
ಫೆಬ್ರವರಿ 15 ರಂದು ತಾನು ಕ್ಲಬ್‌ಗೆ ಹೋಗಿದ್ದೆ ಎಂದು ಸಪ್ನಾ ಗಿಲ್ ಹೇಳಿದ್ದಾರೆ, ತನ್ನ ಸ್ನೇಹಿತ ಶೋಭಿತ್ ಠಾಕೂರ್ ಎಂಬವರು ಸೆಲ್ಫಿಗಾಗಿ ಶಾ ಅವರನ್ನು ಕೇಳಿದರು. ಶಾ ಅವರು “ಬಲವಂತವಾಗಿ ತನ್ನ ಸ್ನೇಹಿತನ ಫೋನ್ ತೆಗೆದುಕೊಂಡು ಅದನ್ನು ನೆಲದ ಮೇಲೆ ಎಸೆದು ಹಾನಿಗೊಳಿಸಿದರು” ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ.
ತಾನು ಕಟ್ಟಾ ಕ್ರಿಕೆಟ್ ಅಭಿಮಾನಿಯಲ್ಲ ಎಂದು ಹೇಳಿರುವ ಸಪ್ನಾ ಗಿಲ್, ಶಾ ಯಾರೆಂದು ತನಗೆ ತಿಳಿದಿಲ್ಲ ಆದರೆ ಅವರೆಲ್ಲರೂ ಶೋಭಿತ ಠಾಕೂರ್ ಅವರನ್ನು “ಹೊಡೆದಿದ್ದಾರೆ”, ತಾನು ಮಧ್ಯಪ್ರವೇಶಿಸಿ ತನ್ನ ಸ್ನೇಹಿತನ ಮೇಲೆ ಹಲ್ಲೆ ಮಾಡದಂತೆ ಅವರನ್ನು ಬೇಡಿಕೊಂಡೆ ಎಂದು ಹೇಳಿದ್ದಾರೆ.
ಆ ಸಮಯದಲ್ಲಿ, ಪೃಥ್ವಿ ಶಾ ಅವರು ತನ್ನ ಜೊತೆ ಅನುಚಿತವಾಗಿ ವರ್ತಿಸಿದರು ಮತ್ತು ತಳ್ಳಿದರು ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ. ಹಾಗೂ ಪೊಲೀಸರಿಗೆ ದೂರು ನೀಡುವುದಾಗಿ ಕ್ರಿಕೆಟಿಗ ಮತ್ತು ಅವನ ಸ್ನೇಹಿತರಿಗೆ ಹೇಳಿದೆ. ಮತ್ತು ಆಗ ಅವರು ದೂರು ನೀಡದಂತೆ ವಿನಂತಿಸಿದರು. ಅವರ ಮನವಿಯ ಕಾರಣದಿಂದಾಗಿ ಆ ಸಮಯದಲ್ಲಿ ಪ್ರಕರಣವನ್ನು ದಾಖಲಿಸಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈ ನಡುವೆ ಪೃಥ್ವಿ ಶಾ ಅವರು ಸಪ್ನಾ ಗಿಲ್ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ಪೃಥ್ವಿ ಶಾ ಅವರ ಸ್ನೇಹಿತ ಯಾದವ್ ಅವರು ಪ್ರಕರಣವನ್ನು ದಾಖಲಿಸಿದ ನಂತರ, ಫೆಬ್ರವರಿ 17 ರಂದು ಗಿಲ್ ಅವರನ್ನು ಬಂಧಿಸಲಾಯಿತು ಮತ್ತು ಈ ಬೆಳವಣಿಗೆಗಳಿಂದಾಗಿ ತಾನು ದೂರು ನೀಡಲು ವಿಳಂಬವಾಯಿತು ಎಂದು ಸಪ್ನಾ ಗಿಲ್ ಅವರ ದೂರಿನಲ್ಲಿ ಹೇಳಿದ್ದಾರೆ. ಮುಂಬೈ ವಿಮಾನ ನಿಲ್ದಾಣ ಪೊಲೀಸ್ ಠಾಣೆಯು ಸಪ್ನಾ ಗಿಲ್ ಅವರ ದೂರನ್ನು ಇನ್ನೂ ಎಫ್‌ಐಆರ್ ಆಗಿ ಪರಿವರ್ತಿಸಿಲ್ಲ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಪೊಲೀಸ್ ಕಸ್ಟಡಿಯಲ್ಲಿದ್ದ ಭಗವಾನ್‌ ಹನುಮಾನ 29 ವರ್ಷಗಳ ನಂತರ ಬಿಡುಗಡೆ: ದೇವಸ್ಥಾನದಲ್ಲಿ ಮರು ಪ್ರತಿಷ್ಠಾಪನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement