ಎಎಪಿಯ ಶೆಲ್ಲಿ ಒಬೆರಾಯ್ ದೆಹಲಿಯ ನೂತನ ಮೇಯರ್, ಮೊಹಮ್ಮದ್ ಇಕ್ಬಾಲ್ ಉಪಮೇಯರ್‌

ನವದೆಹಲಿ: ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ ಮೇಯರ್‌ ಚುನಾವಣೆಯಲ್ಲಿ ಮೂರು ವಿಫಲ ಪ್ರಯತ್ನಗಳ ನಂತರ, ಆಮ್ ಆದ್ಮಿ ಪಕ್ಷದ ನಾಯಕಿ ಶೆಲ್ಲಿ ಒಬೆರಾಯ್ ಅವರು 150 ಮತಗಳೊಂದಿಗೆ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಅವರು ಬುಧವಾರ ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸಿದರು.
ಆಮ್ ಆದ್ಮಿ ಪಕ್ಷ (ಎಎಪಿ)ದ ಮೊಹಮ್ಮದ್ ಇಕ್ಬಾಲ್ ಬುಧವಾರ ದೆಹಲಿಯ ನೂತನ ಉಪಮೇಯರ್ ಆಗಿ ಆಯ್ಕೆಯಾದರು.
ಇಕ್ಬಾಲ್ 147 ಮತಗಳನ್ನು ಪಡೆದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಮಲ್ ಬಾಗ್ರಿ 116 ಮತಗಳನ್ನು ಪಡೆದರು ಎಂದು ಹೇಳಲಾಗಿದೆ. ದೆಹಲಿ ಉಪಮೇಯರ್ ಆಯ್ಕೆಗೆ ಒಟ್ಟು 265 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 2 ಮತಗಳು ಅಸಿಂಧು ಎಂದು ಎಣಿಸಲಾಗಿದೆ.
ಗೂಂಡಾಗಳು ಸೋತಿದ್ದಾರೆ ಮತ್ತು ಸಾರ್ವಜನಿಕರು ಗೆದ್ದಿದ್ದಾರೆ ಎಂದು ಹೇಳಿರುವ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶೆಲ್ಲಿ ಒಬೆರಾಯ್ ಅವರನ್ನು ಅಭಿನಂದಿಸಿದರು.
ನಾನು ಈ ಸದನವನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ಸದನದ ಘನತೆಯನ್ನು ಕಾಪಾಡುತ್ತೀರಿ ಮತ್ತು ಅದರ ಸುಗಮ ಕಾರ್ಯನಿರ್ವಹಣೆಗೆ ಸಹಕರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಒಬೆರಾಯ್ ವಿಜಯದ ನಂತರ ಹೇಳಿದರು.
274 ಸದಸ್ಯ ಬಲದ ಎಂಸಿಡಿ ಮೇಯರ್‌ ಚುನಾವಣೆಯಲ್ಲಿ ಎಎಪಿ 150 ಮತಗಳನ್ನು ಗಳಿಸಿತು. ಪದಾಧಿಕಾರಿಗಳು ಅಥವಾ ನಾಮನಿರ್ದೇಶಿತ ಸದಸ್ಯರು ಇಂದು, ಬುಧವಾರ ಮತದಾನ ಮಾಡಲಿಲ್ಲ.
ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಎಎಪಿ ಮೂರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆರನೇ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ.
ಮೇಯರ್‌ ಆಯ್ಕೆಗಾಗಿ ಜನವರಿ 6 ರಂದು ಮೊದಲ ಬಾರಿಗೆ ಚುನಾವಣೆಗೆ ಮುಂದಾದಾಗ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವಿನ ತೀವ್ರ ವಾಗ್ವಾದದ ನಂತರ ಮುಂದೂಡಲಾಯಿತು. ಜನವರಿ 24 ಮತ್ತು ಫೆಬ್ರವರಿ 6 ರಂದು ನಡೆದ ಎರಡನೇ ಮತ್ತು ಮೂರನೇ ಸಭೆಗಳು ಇದೇರೀತಿ ಜಗಳದಲ್ಲಿ ವಿಫಲವಾದವು. ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ನಂತರ ಸುಪ್ರೀಖ ಕೋರ್ಟ್‌ ನಿರ್ದೇಶನದಂತೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಅಧಿಕಾರ ನೀಡದೆ ಚುನಾವಣೆ ನಡೆಸಲಾಯಿತು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement