ಮಹಿಳಾ ಕೃಷಿ ಕಾರ್ಮಿಕರ ಸಹಾಯಧನ ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಬಜೆಟ್ ನಲ್ಲಿ 500 ರೂ. ಸಹಾಯಧನ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಸಹಾಯಧನವನ್ನು 1000 ರೂ.ಗಳಿಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಭೂರಹಿತ ದುಡಿಯುವ ಮಹಿಳಾ ಕೃಷಿಕಾರ್ಮಿಕರಿಗೆ 1000 ರೂ.ಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಬಜೆಟ್ ಅಂದರೆ ರಾಜ್ಯದ ಜನರ ಆಶೋತ್ತರ ಈಡೇರಿಸುವ ಗುರಿಯಾಗಿರುತ್ತದೆ. ಬಜೆಟ್‌ನಿಂದ ಜನಕಲ್ಯಾಣವೂ ಆಗಬೇಕು. ಆಗ ಅದಕ್ಕೆ ಅರ್ಥ ಬರುತ್ತದೆ. ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡನೆ ಮಾಡಿದ್ದೇನೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನೀಡುವ ಪ್ರಯತ್ನ ನನ್ನದಾಗಿತ್ತು. ನಾವು ಸಂಪೂರ್ಣ ಭ್ರಷ್ಟಾಚಾರ ತೆಗೆದಿದ್ದೇವೆ ಎಂದು ಹೇಳಲಾರೆ. ಆದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಮದ್ಯವರ್ತಿಗಳ ಕೈಬಿಸಿ ಮಾಡುವುದನ್ನು ತಪ್ಪಿಸಿದ್ದೇನೆ. ಇದಕ್ಕಾಗಿ ಇನ್ನಷ್ಟು ಗ್ರಾಮ ಒನ್ ಕೇಂದ್ರ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡಿದೆ. ರಾಜ್ಯದ ಆರ್ಥಿಕತೆ ಶ. 14ರಷ್ಟು ಹೆಚ್ಚಳವಾಗಿದೆ. 2023-24ರಲ್ಲಿ ಆರ್ಥಿಕ ನಿರ್ವಹಣೆ, ಬಜೆಟ್ ನಲ್ಲಿ ಶಿಸ್ತು ಕಾಪಾಡಲಾಗಿದೆ. ಅಭಿವೃದ್ದಿಗೆ ಯಾವುದೇ ತೊಂದರೆಯಾಗಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement