ಕಾಂಗ್ರೆಸ್‌ಗೆ ಆಘಾತ : ಭಾರತದ ಮೊದಲ ಗವರ್ನರ್-ಜನರಲ್ ರಾಜಗೋಪಾಲಾಚಾರಿ ಮರಿಮೊಮ್ಮಗ ಕೇಶವನ್ ಕಾಂಗ್ರೆಸ್‌ಗೆ ರಾಜೀನಾಮೆ

ನವದೆಹಲಿ: ಭಾರತದ ಮೊದಲ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಸಿ.ಆರ್. ಕೇಶವನ್ ಅವರು ಗುರುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸಿ.ಆರ್. ಕೇಶವನ್ ಅವರು ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿಯಲು ಕಾರಣವಾದ ಯಾವುದೇ “ಮೌಲ್ಯದ ಕುರುಹು” ವನ್ನು ಈಗ ನಾನು ಪಕ್ಷದಲ್ಲಿ ನೋಡುತ್ತಿಲ್ಲ ಎಂದು ಹೇಳಿದ್ದಾರೆ. “ಪಕ್ಷವು ಪ್ರಸ್ತುತವಾಗಿ ಏನನ್ನು ಸಂಕೇತಿಸುತ್ತದೆಯೋ ಅದನ್ನು ನಾನು ಒಪ್ಪುತ್ತೇನೆ ಎಂದು ನಾನು ಇನ್ನು ಮುಂದೆ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳಲಾರೆ …” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ, “ಇದಕ್ಕಾಗಿಯೇ ನಾನು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಜವಾಬ್ದಾರಿಯನ್ನು ನಿರಾಕರಿಸಿದ್ದೇನೆ ಮತ್ತು ಭಾರತ ಜೋಡೋ ಯಾತ್ರೆಯಿಂದ ದೂರವಿದ್ದೇನೆ ಎಂದು ಅವರು ಹೇಳಿದ್ದಾರೆ.
“ನಾನು ಹೊಸ ಮಾರ್ಗವನ್ನು ರೂಪಿಸುವ ಸಮಯ ಬಂದಿದೆ ಮತ್ತು ಆದ್ದರಿಂದ ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೇರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರುವ ಸಾಧ್ಯತೆ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕಿದ ಸಿ.ಆರ್. ಕೇಶವನ್, ಮುಂದೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. “ನಾನು ಯಾರೊಂದಿಗೂ ಮಾತನಾಡಿಲ್ಲ ಮತ್ತು ಮುಂದೆ ಏನಾಗುತ್ತದೆ ಎಂದು ಪ್ರಾಮಾಣಿಕವಾಗಿ ತಿಳಿದಿಲ್ಲ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ತಮ್ಮ ರಾಜೀನಾಮೆ ಪತ್ರದಲ್ಲಿ, ಸಿ.ಆರ್. ಕೇಶವನ್ ಅವರು “ಎಲ್ಲರನ್ನು ಒಳಗೊಂಡಿರುವ ಮತ್ತು ಹೆಚ್ಚುತ್ತಿರುವ ರಾಷ್ಟ್ರೀಯ ಪರಿವರ್ತನೆಯ ಗುರಿಗೆ ಬದ್ಧವಾಗಿರುವ” ಸಿದ್ಧಾಂತದಿಂದ ನಡೆಸಲ್ಪಡುವ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಭಾರತಕ್ಕೆ ಮರಳಿದ್ದೆ ಎಂದು ಹೇಳಿದ್ದಾರೆ.
2001ರಿಂದ ಕಾಂಗ್ರೆಸ್‌ನಲ್ಲಿನ ತಮ್ಮ ಪ್ರಯಾಣದ ಬಗ್ಗೆ ವಿವರಿಸಿದ ಕೇಶವನ್, ಶ್ರೀಪೆರಂಬದೂರಿನ ರಾಜೀವ್ ಗಾಂಧಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೂತ್ ಡೆವಲಪ್‌ಮೆಂಟ್‌ನ ಉಪಾಧ್ಯಕ್ಷರಾಗಿ, ಪ್ರಸಾರ ಭಾರತಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ. ಮತ್ತು ಈ ಅವಕಾಶಗಳಿಗಾಗಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜಕೀಯ ವೇದಿಕೆಯ ಮೂಲಕ ನಮ್ಮ ದೇಶಕ್ಕೆ ದೃಢವಾಗಿ ಸೇವೆ ಸಲ್ಲಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ರಾಜೀನಾಮೆಗೆ ಸಿ.ಆರ್. ಕೇಶವನ್ ಯಾವುದೇ ನಿರ್ದಿಷ್ಟ ಕಾರಣವನ್ನು ನಿರ್ದಿಷ್ಟಪಡಿಸಲಿಲ್ಲ. ಆದರೆ ಪಕ್ಷದ ಮೇಲಿನ ಭ್ರಮನಿರಸನದಿಂದಾಗಿ ತಾವು ರಾಹುಲ್ ಗಾಂಧಿ ನೇತೃತ್ವದ ಕನ್ಯಾಕುಮಾರಿ ಟು ಕಾಶ್ಮೀರ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಪಕ್ಷದಿಂದ ನಿರ್ಗಮಿಸಿದ ಒಂದು ತಿಂಗಳೊಳಗೆ ಸಿ.ಆರ್. ಕೇಶವನ್ ರಾಜೀನಾಮೆ ನೀಡಿದ್ದಾರೆ. ಅನಿಲ್ ಅವರು ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರಧಾನಿ ಮೋದಿ ಪರವಾಗಿ ಮತ್ತು ಬಿಬಿಸಿ ವಿರುದ್ಧವಾಗಿ ವ್ಯಕ್ತಪಡಿಸಿದ ನಂತರ ಕಾಂಗ್ರೆಸ್‌ ತೊರೆಯಬೇಕಾಯಿತು.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement