ದೆಹಲಿ ಮದ್ಯ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಪ್ರಶ್ನಿಸಿದ ಇ.ಡಿ.

ನವದೆಹಲಿ: ದೆಹಲಿ ಮದ್ಯ ನೀತಿಯ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವಕುಮಾರ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಮನ್ಸ್ ನೀಡಿದೆ. ಅವರು ಇ.ಡಿ. ಮುಂದೆ ಹಾಜರಾಗಿದ್ದರು ಮತ್ತು ಅವರ ಹೇಳಿಕೆಗಳನ್ನುಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಇಡಿ ಚಾರ್ಜ್ ಶೀಟ್‌ನಲ್ಲಿ ಕೇಜ್ರಿವಾಲ್ ಹೆಸರನ್ನು ಉಲ್ಲೇಖಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಚಾರ್ಜ್ ಶೀಟ್ ಪ್ರಕಾರ, ಮದ್ಯದ ಉದ್ಯಮಿ ಮತ್ತು ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿ ಸಮೀರ್ ಮಹೇಂದ್ರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಎಎಪಿಯ ಸಂವಹನ ಉಸ್ತುವಾರಿ ವಿಜಯ ನಾಯರ್ ಅವರನ್ನು ನಂಬುವಂತೆ ಕೇಜ್ರಿವಾಲ್ ಸಮೀರ್ ಅವರನ್ನು ಕೇಳಿಕೊಂಡಿದ್ದಾರೆ ಎಂದು ಇ.ಡಿ. ತಿಳಿಸಿದೆ.
ನಾಯರ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರು. ತನಿಖಾ ಸಂಸ್ಥೆ ಪ್ರಕಾರ, ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಮೀರ್ ಮಹೇಂದ್ರು ಮತ್ತು ವಿಜಯ ನಾಯರ್ ಇತರರೊಂದಿಗೆ ಪಿತೂರಿ ನಡೆಸಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ವಿಭವಕುಮಾರ್ ಸೇರಿದಂತೆ ಕನಿಷ್ಠ 36 ಆರೋಪಿಗಳು ಈ ಆಪಾದಿತ ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ “ಕಿಕ್‌ಬ್ಯಾಕ್” ಸಾಕ್ಷ್ಯವನ್ನು ಮರೆಮಾಚಲು 170 ಫೋನ್‌ಗಳನ್ನು “ನಾಶಗೊಳಿಸಿದ್ದಾರೆ ಅಥವಾ ಬಳಸಿದ್ದಾರೆ” ಎಂಬ ಇ.ಡಿ. ಆರೋಪಗಳಿಗೆ ಬಿಭವ್ ಕುಮಾರ್ ಅವರ ವಿಚಾರಣೆಯು ಸಂಬಂಧಿಸಿದೆ ಎಂದು ವರದಿ ಹೇಳಿದೆ.
ಇದುವರೆಗೆ ಈ ಪ್ರಕರಣದಲ್ಲಿ ಇಡಿ ಎರಡು ಚಾರ್ಜ್ ಶೀಟ್ ಸಲ್ಲಿಸಿದ್ದು, ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಿದೆ.
ಈ ತಿಂಗಳ ಆರಂಭದಲ್ಲಿ, ಆಮ್ ಆದ್ಮಿ ಪಕ್ಷವು 2022 ರಲ್ಲಿ ಗೋವಾದಲ್ಲಿ ಚುನಾವಣಾ ಪ್ರಚಾರಕ್ಕಾಗಿ ದೆಹಲಿ ಮದ್ಯದ ಹಗರಣದಿಂದ ಗಳಿಸಿದ ಹಣವನ್ನು ಬಳಸಿದೆ ಎಂದು ಇ.ಡಿ. ಹೇಳಿದೆ. “ಇದುವರೆಗಿನ ಈ ಕಿಕ್‌ಬ್ಯಾಕ್‌ನ ಜಾಡುಗಳ ತನಿಖೆಯು ಈ ನಿಧಿಯಲ್ಲಿ ಒಂದು ಭಾಗವನ್ನು ಎಎಪಿಯ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ಬಹಿರಂಗಪಡಿಸಿದೆ ಎಂದು ಇ.ಡಿ. ಈ ಪ್ರಕರಣದ ಆರೋಪಪಟ್ಟಿಯಲ್ಲಿ ಹೇಳಿದೆ.
ದೆಹಲಿ ಮದ್ಯ ನೀತಿಯನ್ನು ಆಗಸ್ಟ್, 2022 ರಲ್ಲಿ ರದ್ದುಗೊಳಿಸಲಾಯಿತು ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು, ನಂತರ ಆಪಾದಿತ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಗೆ ಕೇಳಿದರು. ಇ.ಡಿ.ಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯು ಸಿಬಿಐ ಎಫ್ಐಆರ್‌ನಿಂದ ಜನಿಸಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement