ಮಂಗಳೂರು ಪೊಲೀಸ್‌ ಆಯುಕ್ತ ಸೇರಿ 7 ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಡಿಐಜಿ ರೈಲ್ವೆ ಹುದ್ದೆಗೆ ನಿಯೋಜಿಸಲಾಗಿದೆ. ಅವರ ಸ್ಥಾನಕ್ಕೆ ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಿಸಿದೆ.
ಬೆಂಗಳೂರು ನಗರಕ್ಕೆ ಹೊಸದಾಗಿ ದಕ್ಷಿಣ (ಸಂಚಾರ) ವಿಭಾಗವನ್ನು ಸೃಜಿಸಿದ್ದು, ಅದಕ್ಕೆ ಮಹಮ್ಮದ್ ಸುಜೀತಾ ನೇಮಕ ಮಾಡಲಾಗಿದೆ. ದೆಕ್ಕಾ ಕಿಶೋರ್ ಬಾಬು- ಎಸ್‌ಪಿ ರಾಜ್ಯ ಗುಪ್ತದಳ, ಡಾ.ಕೋನಾ ವಂಶಿಕೃಷ್ಣ- ಎಸ್‌ಪಿ ವೈರ್‌ಲೆಸ್, ಅರುಣಾಂಗ್ಷು ಗಿರಿ- ಡಿಸಿಪಿ ಸಿಎಆರ್ (ಕೇಂದ್ರ) ಬೆಂಗಳೂರು, ಯಶೋಧ ವಂಟಗೋಡಿ- ಎಸ್‌ಪಿ ಕೊಪ್ಪಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

ನಿಮ್ಮ ಕಾಮೆಂಟ್ ಬರೆಯಿರಿ

advertisement