ಚಿರತೆ ಸೆರೆ ಹಿಡಿಯಲು ಇರಿಸಿದ್ದ ಕೋಳಿ ಕದಿಯಲು ಹೋಗಿ ಬೋನಿನಲ್ಲಿ ಸಿಕ್ಕಿಬಿದ್ದ ಭೂಪ..| ವೀಕ್ಷಿಸಿ

ಲಕ್ನೋ: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ಚಿರತೆ ಬದಲು ವ್ಯಕ್ತಿಯೊಬ್ಬ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರದಲ್ಲಿ ನಡೆದಿದೆ.
ಅಧಿಕಾರಿಗಳು ಬಹಳ ದಿನದಿಂದ ಕಾಟ ಕೊಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು ಬೋನಿನೊಳಗೆ ಕೋಳಿಯನ್ನು ಕಟ್ಟಿದ್ದರು. ಪಂಜರದಲ್ಲಿ ದೊಡ್ಡ ಬೆಕ್ಕಿನ ಬದಲು ಮನುಷ್ಯ ಸಿಕ್ಕಿಬಿದ್ದಿದ್ದಾನೆ….! ಈತ ಕೋಳಿ ಹಿಡಿಯಲು ಹೋಗಿ ಬೋನಿನೊಳಗೆ ಸಿಲುಕೊಂಡಿದ್ದ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆತನನ್ನು ಬೋನಿನಿಂದ ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ವೀಡಿಯೊದಲ್ಲಿ ಈ ವ್ಯಕ್ತಿ ತನ್ನನ್ನು ಪಂಜರದಿಂದ ಹೊರ ತೆಗೆಯುವಂತೆ ಅರಣ್ಯ ಅಧಿಕಾರಿಗಳನ್ನು ಕೇಳಿಕೊಳ್ಳುವುದನ್ನು ತೋರಿಸುತ್ತದೆ. ಬೋನಿನ ಸರಳುಗಳನ್ನು ಹಿಡಿದುಕೊಂಡು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಬೋನು ಇರಿಸಿದ್ದ ಭಾಗದಲ್ಲಿ ಚಿರತೆ ಓಡಾಡುವುದರ ಬಗ್ಗೆ ಮಾಹಿತಿ ಬಂದಿತ್ತು. ಬೋನು ಇರಿಸುವ ಮೊದಲು ಚಿರತೆಗಾಗಿ ಹುಡುಕಾಟ ನಡೆಸಿದ್ದೆವು, ನಂತರ ಅದನ್ನು ಹಿಡಿಯಲು ಬೋನು ಇರಿಸಿದೆವು. ಅದರೊಳಗೆ ಕೋಳಿಯೊಂದನ್ನು ಕಟ್ಟಲಾಗಿತ್ತು. ಈ ವ್ಯಕ್ತಿ ಕೋಳಿ ಕದಿಯಲು ಅದರೊಳಗೆ ಪ್ರವೇಶಿಸಿದ್ದಾನೆ. ಆತ ಒಳಗೆ ಪ್ರವೇಶಿಸಿದ ತಕ್ಷಣ ಬೋನಿನ ಬಾಗಿಲು ಲಾಕ್‌ ಆಗಿದೆ. ಈತ ಒಳಗೆ ಸಿಲುಕಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಅಗಾಟಾ ಪೊಲೀಸ್‌ ಠಾಣೆಯ ವ್ಯಾಪ್ತಿಯ ಬಸೆಂಡುವಾ ಗ್ರಾಮದಲ್ಲಿ ನಡೆದಿದ ..

ಹಳ್ಳಿಗಳು ಮತ್ತು ನಗರಗಳಿಗೆ ಚಿರತೆಗಳು ದಾರಿ ತಪ್ಪಿ ಬರುವುದು ಈಗ ಸಾಮಾನ್ಯವಾಗಿದೆ. ಇತ್ತೀಚಿನ ಘಟನೆಯೊಂದರಲ್ಲಿ, ಚಿರತೆ ಉತ್ತರ ಪ್ರದೇಶದ ಗಜಿಯಾಬಾದ್‌ನಲ್ಲಿ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿತ್ತು. ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಚಿರತೆ ನಂತರ ಸೆರೆ ಹಿಡಿಯಲಾಗಿತ್ತು.

ಇಂದಿನ ಪ್ರಮುಖ ಸುದ್ದಿ :-   ಕ್ರಿಕೆಟ್‌ನಲ್ಲಿ ಈ ತರಹದ ಬ್ಯಾಟಿಂಗ್‌ ನೋಡಿದ್ದೀರಾ..? | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement