‘ಭಾರತವೇ ನನಗೆ ಸರ್ವಸ್ವ ; ನಾನು ಏನೇ ಗಳಿಸಿದ್ದರೂ ಅದು ಇಲ್ಲಿಂದಲೇ ಬಂದಿದ್ದು: ಕೆನಡಾದ ಪಾಸ್‌ಪೋರ್ಟ್ ತ್ಯಜಿಸುವೆ- ಬಾಲಿವುಡ್‌ ನಟ ಅಕ್ಷಯಕುಮಾರ

ನವದೆಹಲಿ: ಬಾಲಿವುಡ್‌ ನಟ ಅಕ್ಷಯಕುಮಾರ ತಮ್ಮ ಕೆನಡಾದ ಪೌರತ್ವದ ಬಗ್ಗೆ ಯಾವಾಗಲೂ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಮುಂಬರುವ ಚಿತ್ರ ಸೆಲ್ಫಿ ಬಿಡುಗಡೆಗೆ ಸಜ್ಜಾಗುತ್ತಿರುವ ನಟ ತನ್ನ ಪೌರತ್ವದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಕೆನಡಾ ಪಾಸ್‌ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
55 ವರ್ಷ ವಯಸ್ಸಿನ ಬಾಲಿವುಡ್‌ ಆಜ್ ತಕ್‌ನ ಸೀಧಿ ಬಾತ್‌ನ ಹೊಸ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡರು ಮತ್ತು ತಮ್ಮ ಕೆನಡಾದ ಪೌರತ್ವದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದರು. ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದಕ್ಕಾಗಿ ನಿರಂತರವಾಗಿ ಟೀಕೆಗೆ ಒಳಗಾಗಿರುವ ಅವರು, ತನ್ನ ದೇಶವಾದ ಭಾರತದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಕೆನಡಾದ ಪೌರತ್ವವನ್ನು ತ್ಯಜಿಸುವುದಾಗಿ ಹೇಳಿದ್ದಾರೆ.
“ಭಾರತವೇ ನನಗೆ ಎಲ್ಲವೂ- ನಾನು ಏನನ್ನು ಗಳಿಸಿದ್ದೇನೋ, ಅದೆಲ್ಲವೂ ಇಲ್ಲಿಂದಲೇ ಬಂದಿದ್ದು. ಮತ್ತು ನಾನು ಅದನ್ನು ಹಿಂತಿರುಗಿಸಲು ಅವಕಾಶ ಪಡೆದಿರುವುದು ನನ್ನ ಅದೃಷ್ಟ. ಜನರು ಏನನ್ನೂ ತಿಳಿಯದೆ ಮಾತನಾಡಿದಾಗ ನಿಮಗೆ ನೋವಾಗುತ್ತದೆ ಎಂದು ಹೇಳಿದರು.
1990ರ ದಶಕದಲ್ಲಿ ತನ್ನ ಚಲನಚಿತ್ರಗಳ ಕಳಪೆ ಪ್ರದರ್ಶನದಿಂದ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸುವಂತಾಯಿತು ಎಂದು ಅವರು ಹೇಳಿದರು. ನನ್ನ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿಲ್ಲವಾಗಿತ್ತು, ಯಾರೇ ಆದರೂ ಕೆಲಸ ಮಾಡಬೇಕು ಎಂದು ನಾನು ಭಾವಿಸಿದೆ. ನಾನು ಕೆಲಸದ ನಿಮಿತ್ತ ಕೆನಡಾಕ್ಕೆ ಹೋಗಿದ್ದೆ. ನನ್ನ ಸ್ನೇಹಿತ ಕೆನಡಾದಲ್ಲಿದ್ದ ಮತ್ತು ಆತ ‘ಅಲ್ಲಿಗೆ ಬಾ’ ಎಂದು ಹೇಳಿದ. ನಾನು ಅರ್ಜಿ ಸಲ್ಲಿಸಿದೆ ಮತ್ತು ಹೋದೆ. “ಆಗ ಬಿಡುಗಡೆಗೆ ನನ್ನ ಕೇವಲ ಎರಡು ಚಿತ್ರಗಳು ಮಾತ್ರ ಉಳಿದಿತ್ತು, ಆದರೆ ಅವೆರಡೂ ಸೂಪರ್‌ಹಿಟ್ ಆಗಿದ್ದು ಕೇವಲ ಅದೃಷ್ಟ. ‘ಭಾರತಕ್ಕೆ ಹಿಂತಿರುಗು ಮತ್ತೆ ಕೆಲಸ ಆರಂಭಿಸು ಎಂದು ನನ್ನ ಸ್ನೇಹಿತ ಹೇಳಿದ. ನಂತರ ನನಗೆ ಇನ್ನೂ ಕೆಲವು ಚಿತ್ರಗಳು ಸಿಕ್ಕಿತು ಮತ್ತು ನಾನು ಹೆಚ್ಚು ಕೆಲಸ ಮಾಡಿದೆ. ನನ್ನ ಬಳಿ ಪಾಸ್‌ಪೋರ್ಟ್ ಇದೆ ಎಂಬುದೇ ಮರೆತುಹೋಗಿತ್ತು. ನಾನು ಈ ಪಾಸ್‌ಪೋರ್ಟ್ ಅನ್ನು ಬದಲಾಯಿಸಬೇಕು ಎಂದು ಎಂದಿಗೂ ಯೋಚಿಸಲಿಲ್ಲ, ಆದರೆ ಈಗ, ನನ್ನ ಪಾಸ್‌ಪೋರ್ಟ್ ಬದಲಾಯಿಸಲು ನಾನು ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಅಕ್ಷಯಕುಮಾರ ಟೈಗರ್ ಶ್ರಾಫ್ ಜೊತೆಗೆ ಬಡೇ ಮಿಯಾನ್ ಚೋಟೆ ಮಿಯಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ಇದಲ್ಲದೆ, ಅವರು ಓ ಮೈ ಗಾಡ್ 2, ಫಿರ್ ಹೇರಾ ಫೆರಿ 2 ಮತ್ತು ಮತ್ತೆ ಕೆಲವಷ್ಟರಲ್ಲಿ ನಟಿಸುತ್ತಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement