ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಬಳಿ ಇಂದು, ಶುಕ್ರವಾರ (ಫೆ.24) ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಭಟ್ಕಳ:ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಎನ್ನುವ ಗ್ರಾಮದಲ್ಲಿ ಬರ್ಬರ ಹತ್ಯೆ ನಡೆದ ಘಟನೆ ಶುಕ್ರವಾರ ನಡೆದಿದೆ. ನಾಲ್ವರನ್ನು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ತಾಲೂಕಿನ ಹಾಡುವಳ್ಳಿ ಒಣಿಬಾಗಲು ನಿವಾಸಿಗಳಾದ ಶಂಭು ಭಟ್ (70), ಮಾದೇವಿ ಭಟ್ (60), ರಾಘು ಭಟ್ (40), ಕುಸುಮಾ ಭಟ್ ( 35) ಕೊಲೆಯಾದ ವ್ಯಕ್ತಿಗಳಾಗಿದ್ದಾರೆ. ಮಧ್ಯಾಹ್ನ ಹಾಡುವಳ್ಳಿಯ ತಮ್ಮ ಮನೆಯ ಸಮೀಪವೇ ನಾಲ್ವರು ಕೊಲೆಯಾಗಿ ಬಿದ್ದಿದ್ದು ನಾಲ್ವರಿಗೂ ಕೂಡಾ ಮುಖ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಕತ್ತಿ ಅಥವಾ ತಲವಾರಿನಿಂದ ತೀವ್ರವಾಗಿ ಕಡಿದ ಗಾಯಗಳಾಗಿವೆ.
ಇವರದ್ದೇ ಸಂಬಂಧಿಯಾದ   ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಅನಾರೋಗ್ಯ ಮೃತಪಟ್ಟಿದ್ದರು. ಶ್ರೀಧರ ಭಟ್ ಸಾವಿನ ಬಳಿಕ ಅವರ ಪತ್ನಿ ವಿದ್ಯಾ ಭಟ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಇದಾದ ಬಳಿಕ ಶಂಭು ಭಟ್ ಅವರು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಈ ಆಸ್ತಿಯನ್ನು ನೋಡಿಕೊಳ್ಳುತ್ತಿದ್  ಕುಟುಂಬದ ಸಂಬಂಧಿ ವಿನಯ್‌ ಶ್ರೀಧರ್‌ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾನೆ  ಎಂದು ಅನುಮಾನಿಸಲಾಗಿದೆ. ವಿದ್ಯಾಳ ಸಹೋದರನ ಮೇಲೆ   ಪ್ರಾಥಮಿಕ ತನಿಖೆಯಿಂದ ಸಂಶಯ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೃಷ್ಟವಶಾತ್ ಕುಸುಮಾ ದಂಪತಿಯ ಇಬ್ಬರು ಮಕ್ಕಳು ಬಚಾವ್‌ ಆಗಿದ್ದಾರೆ. ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ನಿರ್ನಾಮ ಮಾಡಲು ಬಂದಿದ್ದ ಆಗಂತುಕನ ಕೈಯಿಂದ ಎರಡು ಪುಟ್ಟ ಕಂದಮ್ಮಗಳು ಬಚಾವ್ ಆಗಿವೆ. ಕೃತ್ಯ ನಡೆಯುವ ವೇಳೆ ಹತ್ತು ವರ್ಷದ ಮಗು ಪಕ್ಕದ ಮನೆಯಲ್ಲಿತ್ತು‌. ನಾಲ್ಕು ವರ್ಷದ ಇನ್ನೊಂದು ಮಗು ಮಲಗಿತ್ತು‌. ಹೀಗಾಗಿ ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement