ಬೆಂಗಳೂರು : ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು

ಬೆಂಗಳೂರು: ನಿರ್ಮಾಣ ಹಂತದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಮಗು ಮೃತಪಟ್ಟ ಘಟನೆ ಕೆ.ಆರ್.ಮಾರ್ಕೆಟಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ್ವರಿ (6) ಎಂಬ ಬಾಲಕಿ ಗುಂಡಿಗೆ ಬಿದ್ದು ಮೃತಪಟ್ಟವಳು ಎಂದು ಗುರುತಿಸಲಾಗಿದೆ. ಸುಮಾರು ಐದರಿಂದ ಆರು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದ ಲಿಫ್ಟ್‌ ಅಳವಡಿಸಲು ಗುಂಡಿ ತೆರೆದು ಅದಕ್ಕೆ ನೀರು ತುಂಬಿಸಿದ್ದರು. ಅಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇರಲಿಲ್ಲ. ನೆಲಕ್ಕೆ ಸಮತಟ್ಟಾಗಿ ಗುಂಡಿ ಇದ್ದ ಕಾರಣ ಗುಂಡಿಸರಿಯಾಗಿ ಕಾಣಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕದ ಕಮಲಮ್ಮ ಮತ್ತು ಮಲ್ಲಪ್ಪ ದಂಪತಿ ಕಟ್ಟಡ ನಿರ್ಮಾಣ ನಡೆಯುವ ಸ್ಥಳದಲ್ಲಿದ್ದ ಸಂಬಂಧಿಕರನ್ನು ಭೇಟಿಯಾಗಲು ಮಕ್ಕಳ ಜೊತೆ ಶುಕ್ರವಾರ ರಾತ್ರಿ ಆಗಮಿಸಿದ್ದರು. ಆಗ ಕಟ್ಟಡದ ಮುಂದೆ ಆಟವಾಡುತ್ತಿದ್ದ ಮಗು ಗುಂಡಿಗೆ ಬಿದ್ದು ಮೃತಪಟ್ಟಿದೆ. ಮಗು ನಾಪತ್ತೆಯಾಗಿದ್ದನ್ನು ಕಂಡು ಹುಡುಕಾಟ ನಡೆಸಿದಾಗ ಮಗುವಿನ ಶವ ಗುಂಡಿಯಲ್ಲಿದ್ದ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಸ್ಥಳಕ್ಕೆ ಆಗಮಿಸಿರುವ ಮಾರುಕಟ್ಟೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement