ಆಶಾ ಕಾರ್ಯಕರ್ತರಿಗೆ ವಿದೇಶಿ ಹಣ ಹಂಚಿದ ಶಾಸಕ ಜಮೀರ್: ಚರ್ಚೆಗೆ ಗ್ರಾಸ

posted in: ರಾಜ್ಯ | 0

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇದೀಗ ಬೆಂಗಳೂರಿ ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಶಾ ಕಾರ್ಯಕರ್ತರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ವಿದೇಶಿ ನೋಟುಗಳನ್ನ ಹಂಚಿದ್ದಾರೆ ಎಂಬ ವಿಷಯ ಭಾರೀ ಸುದ್ದಿಯಾಗಿದೆ.
ಪಾದರಾಯನಪುರದ ವಾರ್ಡ್ 135, ಜೆಜೆಆರ್ ನಗರದ ವಾರ್ಡ್ 136 ಹಾಗೂ ರಾಯಪುರಂನ ವಾರ್ಡ್-127ರ ಆಶಾ ಕಾರ್ಯಕರ್ತರಿಗೆ ಸೌದಿ ಅರೇಬಿಯಾದ 500 ರಿಯಾಲ್‌ ಮುಖಬೆಲೆಯ ನೋಟುಗಳನ್ನ ಜಮೀರ್‌ ಅಹಮ್ಮದ್‌ ಹಂಚಿಕೆ ಮಾಡಿದ್ದಾರೆ ಎಂಬ ಸಂಗತಿ ಈಗ ಚರ್ಚೆಗೆ ಕಾರಣವಾಗಿದ್ದು, ವಿದೇಶಿ ಹಣ ಹಂಚಿದ್ದು ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿದೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್‌ಗಳನ್ನೂ ಹಂಚಿದ್ದಾರೆ. ಈ ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೌದಿ ಅರೇಬಿಯಾದ 500 ರಿಯಾಲ್‌ ಮುಖಬೆಲೆಗೆ ಭಾರತದಲ್ಲಿ ಈಗಿನ ಸುಮಾರು 11,000 ರೂ. ಮೌಲ್ಯ ಆಗುತ್ತದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ರಾಜ್ಯದಲ್ಲಿ 9 ನೂತನ ವಿಶ್ವ ವಿದ್ಯಾಲಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement