ದೆಹಲಿ ಸಾರಾಯಿ ನೀತಿ ಹಗರಣ: 8 ಗಂಟೆಗಳ ವಿಚಾರಣೆ ಬಳಿಕ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧಿಸಿದ ಸಿಬಿಐ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ.
ಉಪಮುಖ್ಯಮಂತ್ರಿ ಸದ್ಯಕ್ಕೆ ಸಿಬಿಐ ಕೇಂದ್ರ ಕಚೇರಿಯಲ್ಲಿ ಇರಲಿದ್ದಾರೆ. ರಾಷ್ಟ್ರ ರಾಜಧಾನಿಯ ಹೊಸ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಅವರಿಗೆ ಸಮನ್ಸ್ ನೀಡಿತ್ತು. ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನನ್ನು ಬಂಧಿಸಲಾಯಿತು.
ಸಿಬಿಐ ಕಚೇರಿಗೆ ತೆರಳುವ ಮುನ್ನ ಸಿಸೋಡಿಯಾ ತನ್ನನ್ನು ಬಂಧಿಸುವ ಆತಂಕ ವ್ಯಕ್ತಪಡಿಸಿದ್ದರು. ಹಾಗೂ ಕೆಲವು ತಿಂಗಳು ಜೈಲಿನಲ್ಲಿ ಇರಲು ಸಿದ್ಧ ಎಂದು ಸಿಸೋಡಿಯಾ ಸಿಬಿಐ ವಿಚಾರಣೆಗೆ ಬರುವ ಮುನ್ನ ಹೇಳಿದ್ದರು. ತಮ್ಮ ಕ್ಯಾಬಿನೆಟ್ ಸಚಿವರಿಗೆ ಬೆಂಬಲ ಸೂಚಿಸಿದ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು “ದೇವರು ನಿಮ್ಮೊಂದಿಗಿದ್ದಾನೆ ಮನೀಷ. ಲಕ್ಷಾಂತರ ಮಕ್ಕಳು ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮೊಂದಿಗಿದೆ. ನೀವು ದೇಶ ಮತ್ತು ಸಮಾಜಕ್ಕಾಗಿ ದುಡಿದ ನೀವು ಜೈಲಿಗೆ ಹೋಗುವುದು ಶಾಪವಲ್ಲ, ಮಹಿಮೆ. ನೀವು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಕ್ಕಳು, ಪೋಷಕರು ಮತ್ತು ದೆಹಲಿಯ ನಾವೆಲ್ಲರೂ ನಿಮಗಾಗಿ ಕಾಯುತ್ತೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಎಎಪಿಯ ದೆಹಲಿ ಅಬಕಾರಿ ನೀತಿ 2021-22 ಅನ್ನು ಜುಲೈ 31, 2022 ರಂದು ರದ್ದುಪಡಿಸಿದಾಗಿನಿಂದ, ಅನೇಕ ಹಿರಿಯ ಎಎಪಿ ನಾಯಕರು ಮತ್ತು ಅವರ ನಿಕಟ ಸಹಚರರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐನ ಬಿಸಿಯನ್ನು ಎದುರಿಸುತ್ತಿದ್ದಾರೆ.
ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ ಸರ್ಕಾರವು ನವೆಂಬರ್ 17, 2020 ರ ಮೊದಲು ಜಾರಿಯಲ್ಲಿದ್ದ ‘ಹಳೆಯ ಅಬಕಾರಿ ಆಡಳಿತ’ವನ್ನು ಮರಳಿ ತರಲು ನಿರ್ಧರಿಸಿತು.

ಎಎಪಿಯ ಕ್ರಮದ ನಂತರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ದೋಷಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು.
ಸಿಬಿಐನಿಂದ ಆರೋಪಿ ಎಂದು ಹೆಸರಿಸದ ಉಪ ಮುಖ್ಯಮಂತ್ರಿಯವರ ಮನೆ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಹಲವು ಬಾರಿ ಶೋಧ ನಡೆಸಿವೆ. ಆಪಾದಿತ ಹಗರಣದ ಬಗ್ಗೆ ಎಎಪಿ ಮತ್ತು ಬಿಜೆಪಿ ಕೂಡ ಕಿತ್ತಾಡಿಕೊಂಡಿವೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement