ನವದೆಹಲಿ: ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ ಯಾದವ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಹಗರಣವು ಭಾರತೀಯ ರೈಲ್ವೇಯಲ್ಲಿ ಭೂಮಿಗೆ ಬದಲಾಗಿ ಉದ್ಯೋಗಗಳನ್ನು ಒದಗಿಸಿದೆ ಎಂದು ಆರೋಪಿಸಲಾಗಿದೆ. ದೆಹಲಿ ಕೋರ್ಟ್ ಮಾರ್ಚ್ 15 ರಂದು ಅವರ ಪುತ್ರಿ ಮಿಸಾ ಭಾರತಿ ಸೇರಿದಂತೆ 14 ಆರೋಪಿಗಳಿಗೆ ಸಮನ್ಸ್ ನೀಡಿತ್ತು.
ಲಾಲು ಪ್ರಸಾದ ಯಾದವ ಅವರು ಇತ್ತೀಚೆಗೆ ಸಿಂಗಾಪುರದಿಂದ ಮೂತ್ರಪಿಂಡ ಕಸಿ ಮಾಡಿಸಿಕೊಂಡ ನಂತರ ಮನೆಗೆ ಮರಳಿದ್ದಾರೆ.
ಭಾರತೀಯ ರೈಲ್ವೇಯಲ್ಲಿ ಉದ್ಯೋಗದ ಬದಲಿಗೆ ಜಮೀನು ಸ್ವೀಕರಿಸಿದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಒಟ್ಟು 14 ಜನರಿಗೆ ಸಮನ್ಸ್ ಕಳುಹಿಸಿದೆ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಿದ ನಂತರ ಮಾರ್ಚ್ 15 ರಂದು ಆರೋಪಗಳನ್ನು ರೂಪಿಸಲಾಗುತ್ತದೆ.
ರೈಲ್ವೇ ನೇಮಕಾತಿ ಹಗರಣ ಪ್ರಕರಣದಲ್ಲಿ ಲಾಲು ಯಾದವ ಅವರ ಆಪ್ತ ಹಾಗೂ ಮಾಜಿ ಶಾಸಕ ಭೋಲಾ ಯಾದವ ಮತ್ತು ಹೃದಯಾನಂದ್ ಚೌಧರಿ ಕೂಡ ಆರೋಪಿಗಳಾಗಿದ್ದಾರೆ. ಆರ್‌ಜೆಡಿ ನಾಯಕ ಭೋಲಾ ಯಾದವ ಅವರನ್ನು ಜುಲೈ 27 ರಂದು ಸಿಬಿಐ ಬಂಧಿಸಿತ್ತು. ಭೋಲಾ ಅವರು 2004 ಮತ್ತು 2009 ರ ನಡುವೆ ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿ (OSD) ಆಗಿದ್ದರು.
ಸಿಬಿಐನ ಆರೋಪಗಳ ಪ್ರಕಾರ, ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯದ ಮೂಲಕ ಅನರ್ಹ ಅಭ್ಯರ್ಥಿಗಳನ್ನು ನೇಮಿಸಿ ಆರೋಪಿಗಳು ಅದರ ಬದಲಿಗೆ ಕಡಿಮೆ ಬೆಲೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
2004-2009ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ ಯಾದವ ಅವರು ರೈಲ್ವೆಯ ವಿವಿಧ ವಲಯಗಳಲ್ಲಿ “ಡಿ” ಗ್ರೂಪ್ ಹುದ್ದೆ ಬದಲಿ ನೇಮಕಾತಿಗೆ ಪ್ರತಿಯಾಗಿ ತಮ್ಮ ಕುಟುಂಬ ಸದಸ್ಯರ ಹೆಸರಿಗೆ ಭೂಮಿಯನ್ನು ವರ್ಗಾಯಿಸುವ ರೂಪದಲ್ಲಿ ಹಣದ ಅನುಕೂಲಗಳನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ