ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಈಗ ಒಡೆದ ಮನೆ..? ಎಎಪಿ, ಟಿಎಂಸಿ ನಂತ್ರ ಈಗ ಪ್ಲಗ್‌ ಎಳೆಯಲು ನಿತೀಶಕುಮಾರ ತಯಾರಿ..?!

ನವದೆಹಲಿ /ಪಾಟ್ನಾ: ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿಮಾಡಿಕೊಳ್ಳಲು ಒಪ್ಪದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣದಲ್ಲಿ ಚುನಾವಣೆ ಮೊದಲೇ ಅಲುಗಾಟ ಶುರುವಾಗಿದೆ. ಇಂದು, ಗುರುವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಮಾರ್ಚ್ 30 ರಂದು ಭಾರತ ಜೋಡಿ … Continued

ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಕುಟುಂಬದ ಆಪ್ತನನ್ನು ಬಂಧಿಸಿದ ಇ.ಡಿ.

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರ ಸಹಚರನನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ (ನವೆಂಬರ್ 11) ತಿಳಿಸಿವೆ. ‘ಸಹವರ್ತಿ’ ಅಮಿತ್ ಕತ್ಯಾಲ್ ಅವರನ್ನು ಶುಕ್ರವಾರ ಕೇಂದ್ರೀಯ … Continued

ದೇಶದ ಪ್ರಧಾನಿ ಆಗುವವರಿಗೆ ಪತ್ನಿ ಇರಬೇಕು, ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿರುವುದು ತಪ್ಪು : ಹೀಗಂತಾರೆ ಲಾಲು ಪ್ರಸಾದ ಯಾದವ್‌

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗುವಂತೆ ಸಲಹೆ ನೀಡಿದ ಕೆಲವೇ ದಿನಗಳಲ್ಲಿ, ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಗುರುವಾರ ಯಾರೇ ಪ್ರಧಾನಿಯಾಗಲಿ ಅವರಿಗೆ ಹೆಂಡತಿ ಇರಬೇಕು ಎಂದು ಹೇಳಿದ್ದಾರೆ. ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿ ಉಳಿದುಕೊಳ್ಳುವುದು ತಪ್ಪು ಎಂದು ಹೇಳಿದ್ದಾರೆ. … Continued

ಐಆರ್‌ ಸಿಟಿಸಿ ಹಗರಣ: ಲಾಲು ಪ್ರಸಾದ ಯಾದವ, ರಾಬ್ರಿ ದೇವಿಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ನವದೆಹಲಿ: ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ ಯಾದವ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ಹಗರಣವು ಭಾರತೀಯ ರೈಲ್ವೇಯಲ್ಲಿ ಭೂಮಿಗೆ ಬದಲಾಗಿ ಉದ್ಯೋಗಗಳನ್ನು ಒದಗಿಸಿದೆ ಎಂದು … Continued

‘ಉದ್ಯೋಗ ಪಡೆಯಲು ಭೂಮಿʼ ಹಗರಣದಲ್ಲಿ ಲಾಲು ಪ್ರಸಾದ, ಮಗಳು ಮಿಸಾ ಭಾರತಿಗೆ ಸೇರಿದ 17 ಸ್ಥಳಗಳ ಮೇಲೆ ಸಿಬಿಐ ದಾಳಿ

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪುತ್ರಿ ಮಿಸಾ ಭಾರ್ತಿ ಅವರಿಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ದಾಳಿ ನಡೆಸಿದೆ. ಲಾಲು ಪ್ರಸಾದ ಯಾದವ, ಅವರ ಪತ್ನಿ ರಾಬ್ರಿದೇವಿ ಮತ್ತು ಮಗಳು ಮಿಸಾ ಅವರಿಗೆ ಸಂಬಂಧಿಸಿದ ಸ್ಥಳಗಳು … Continued

ಠೇವಣಿ ಕಳೆದುಕೊಳ್ಳಲು ನಿಮಗೆ ಸ್ಥಾನ ನೀಡಬೇಕೇ: ಕಾಂಗ್ರೆಸ್ ವಿರುದ್ಧ ಲಾಲೂ ಗರಂ

ಪಾಟ್ನಾ: ಪ್ರಮುಖ ಮಿತ್ರಪಕ್ಷ ಕಾಂಗ್ರೆಸ್ಸಿನ ಬಲವನ್ನೇ ಪ್ರಶ್ನಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, “ನಿಮಗೆ ಸೋಲಲು ಅಥವಾ ಠೇವಣಿ ಕಳೆದುಕೊಳ್ಳಲು ವಿಧಾನಸಭೆ ಸ್ಥಾನಗಳನ್ನು ಬಿಟ್ಟುಕೊಡಬೇಕೇ” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಬಿಹಾರದ ಎಐಸಿಸಿ ಉಸ್ತುವಾರಿ ಭಕ್ತ ಚರಣ್ ದಾಸ್ ಅವರನ್ನು ಅವಿವೇಕಿ ಎಂದು ಲಾಲೂ ಕರೆದಿರುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ ಎನ್‌ಡಿಎ ಒಕ್ಕೂಟದಿಂದಲೂ … Continued