ಇನ್ನು ಹುಬ್ಬಳ್ಳಿಯಿಂದ ಪುಣೆಗೆ ಪ್ರತಿದಿನ ವಿಮಾನ ಸಂಚಾರ ಆರಂಭ

ಹುಬ್ಬಳ್ಳಿ: ಪುಣೆಗೆ ಹುಬ್ಬಳ್ಳಿಯಿಂದ ಪ್ರತಿ ದಿನ ವಿಮಾನ ಸೇವೆ ಪ್ರಾರಂಭವಾಗಲಿದ್ದು, ಇದರಿಂದ ವಾಣಿಜ್ಯ ನಗರಿಯ ವಿಮಾನಯಾನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆ ಮಾರ್ಚ್ 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ಪ್ರತಿ ದಿನ ವಿಮಾನಯಾನ ಸೇವೆ ಪ್ರಾರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ದಿನ 6E 7727 ಹುಬ್ಬಳ್ಳಿಯಿಂದ 18:30ಕ್ಕೆ ಬಿಡಲಿದ್ದು, 19:35ಕ್ಕೆ ಪುಣೆ ತಲುಪಲಿದೆ. ಹಾಗೂ ಪ್ರತಿ ದಿನ 6E 7716 ಪುಣೆಯಿಂದ 20:00ಕ್ಕೆ ಬಿಡಲಿದ್ದು ಹುಬ್ಬಳ್ಳಿಯನ್ನು 21:05ಕ್ಕೆ ತಲುಪಲಿದೆ.
ಮಾರ್ಚ್ 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ಪ್ರತಿ ನಿತ್ಯ ವಿಮಾನ ಸೇವೆ ಕಲ್ಪಿಸಲು ನೆರವು ನೀಡಿದ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರಹ್ಲಾದ ಜೋಶಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement