ಬಾಲ್ಟಿಕ್ ಸಮುದ್ರದಾಳದಲ್ಲಿ 500 ವರ್ಷಗಳಷ್ಟು ಹಳೆಯ ಮಸಾಲೆ ಪದಾರ್ಥಗಳು ಪತ್ತೆ…!

500 ವರ್ಷಗಳ ಹಿಂದೆ ಸ್ವೀಡನ್‌ನ ಬಾಲ್ಟಿಕ್ ಸಮುದ್ರದ ಕರಾವಳಿಯಲ್ಲಿ ಮುಳುಗಿದ ರಾಯಲ್ ಹಡಗಿನ ಪಳೆಯುಳಿಕೆಯಲ್ಲಿ ಕೇಸರಿಯಿಂದ ಹಿಡಿದು ಮೆಣಸು ಮತ್ತು ಶುಂಠಿಯವರೆಗಿನ ಸುಸ್ಥಿಯಲ್ಲಿರುವ ಮಸಾಲೆಗಳ ಅನನ್ಯ ಸಂಗ್ರಹವನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ.
ಡೆನ್ಮಾರ್ಕ್ ಮತ್ತು ನಾರ್ವೆಯ ಕಿಂಗ್ ಹ್ಯಾನ್ಸ್ ಒಡೆತನದ ಗ್ರಿಬ್‌ಶಂಡ್‌ ಹಡಗಿನ ಪಳೆಯುಳಿಕೆಯು 1495 ರಿಂದರೊನ್ನೆಬಿಯ ಕರಾವಳಿಯ ಸಮುದ್ರದಲ್ಲಿ ಮುಳುಗಿಕೊಂಡಿದೆ. ಸ್ವೀಡನ್‌ನಲ್ಲಿ ರಾಜಕೀಯ ಸಭೆಗೆ ಹಾಜರಾಗಲು ಬರುತ್ತಿದ್ದ ರಾಜ ಸಹ ಅದರಲ್ಲಿ ಬರುತ್ತಿದ್ದಾಗ ಬೆಂಕಿ ಬಿದ್ದು ಹಡಗು ಮುಳಗಿದೆ ಎಂದು ಭಾವಿಸಲಾಗಿದೆ.
1960 ರ ದಶಕದಲ್ಲಿ ಕ್ರೀಡಾ ಡೈವರ್‌ಗಳಿಂದ ಇದನ್ನು ಮರುಶೋಧಿಸಲಾಗಿಯಿತು, ಇತ್ತೀಚಿನ ವರ್ಷಗಳಲ್ಲಿ ಹಡಗಿನ ಉತ್ಖನನಗಳು ವಿರಳವಾಗಿ ನಡೆದಿವೆ. ಹಿಂದಿನ ಡೈವ್‌ಗಳು ಫಿಗರ್‌ಹೆಡ್‌ಗಳು ಮತ್ತು ಮರದಂತಹ ದೊಡ್ಡ ವಸ್ತುಗಳನ್ನು ಅಲ್ಲಿ ಪತ್ತೆ ಮಾಡಿದ್ದರು. ಈಗ ಲುಂಡ್ ವಿಶ್ವವಿದ್ಯಾನಿಲಯದ ಪುರಾತತ್ವ ವಿಜ್ಞಾನಿ ಬ್ರೆಂಡನ್ ಫೋಲೆ ನೇತೃತ್ವದಲ್ಲಿ ನಡೆದ ಉತ್ಖನನದ ವೇಳೆ ದೋಣಿಯ ಕೆಸರಿನಲ್ಲಿ ಹುದುಗಿಕೊಂಡಿದ್ದ ಮಸಾಲೆ ಪದಾರ್ಥಗಳ ಸಂಗ್ರಹವನ್ನು ಕಂಡುಹಿಡಿದಿದೆ.

ಬಾಲ್ಟಿಕ್ ಸಮುದ್ರ ವಿಚಿತ್ರವಾಗಿದೆ – ಇದು ಕಡಿಮೆ ಆಮ್ಲಜನಕ, ಕಡಿಮೆ ತಾಪಮಾನ, ಕಡಿಮೆ ಲವಣಾಂಶದಿಂದ ಕೂಡಿದೆ, ಆದ್ದರಿಂದ ಅನೇಕ ಸಾವಯವ ವಸ್ತುಗಳು ಬಾಲ್ಟಿಕ್‌ನಲ್ಲಿ ಚೆನ್ನಾಗಿ ಸಂರಕ್ಷಿಸಲ್ಪಟ್ಟಿರುತ್ತವೆ. ಆದರೆ ಸಾಗರ ಅಥವಾ ಸಮುದ್ರದಲ್ಲಿ ಇಷ್ಟೊಂದು ಉತ್ತಮವಾಗಿ ವಸ್ತುಗಳು ಸಂರಕ್ಷಿಸಲ್ಪಡುವುದಿಲ್ಲ ಎಂದು ಬ್ರೆಂಡನ್ ಫೋಲೆ ಹೇಳಿದರು.
ಮಸಾಲೆಗಳನ್ನು ಉಪಯೋಗಿಸುವುದು ಆಗ ಉನ್ನತ ಸ್ಥಾನಮಾನದ ಸಂಕೇತವಾಗಿದ್ದವು, ಏಕೆಂದರೆ ಶ್ರೀಮಂತರು ಮಾತ್ರ ಯುರೋಪಿನ ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದ್ದ ಕೇಸರಿ ಅಥವಾ ಲವಂಗದಂತಹ ಮಸಾಲೆ ಪದಾರ್ಥಗಳನ್ನು ಖರೀದಿಸುತ್ತಿದ್ದರು.
ಸಂಶೋಧನೆಗಳನ್ನು ಅಧ್ಯಯನ ಮಾಡುತ್ತಿರುವ ಲುಂಡ್ ವಿಶ್ವವಿದ್ಯಾಲಯದ ಸಂಶೋಧಕ ಮೈಕೆಲ್ ಲಾರ್ಸನ್ ಅವರು, ಇದು ಉತ್ಖನನದ ವೇಳೆ ಕೇಸರಿಯನ್ನು ಕಂಡುಕೊಂಡ ಏಕೈಕ ಸಂದರ್ಭವಾಗಿದೆ, ಆದ್ದರಿಂದ ಇದು ತುಂಬಾ ವಿಶಿಷ್ಟವಾಗಿದೆ ಮತ್ತು ಇದು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement