ಉದ್ಯೋಗಕ್ಕಾಗಿ ಭೂಮಿ ಹಗರಣ: ಪಾಟ್ನಾ ನಿವಾಸದಲ್ಲಿ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರನ್ನು ಪ್ರಶ್ನಿಸುತ್ತಿರುವ ಸಿಬಿಐ

ನವದೆಹಲಿ: ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದು, ಇದು ದಾಳಿ ಅಥವಾ ಶೋಧವಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ
ವಿವರಗಳ ಪ್ರಕಾರ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರಾಬ್ರಿ ದೇವಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಲಾಲು ಪ್ರಸಾದ ಯಾದವ ಅವರು 2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಅವರ ಕುಟುಂಬಕ್ಕೆ ಉಡುಗೊರೆಯಾಗಿ ಅಥವಾ ಅವರ ಕುಟುಂಬಕ್ಕೆ ಅಭ್ಯರ್ಥಿಗಳು ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೇಯಲ್ಲಿ ಅವರಿಗೆ ಉದ್ಯೋಗ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪಾಟ್ನಾ ನಿವಾಸದಲ್ಲಿ ವಿಚಾರಣೆಯ ನಂತರ, ಹೆಚ್ಚಿನ ವಿಚಾರಣೆಗಾಗಿ ರಾಬ್ರಿ ದೇವಿ ಅವರನ್ನು ಸಿಬಿಐ ಕಚೇರಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಮತ್ತು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ ಯಾದವ ಕೂಡ ಸಿಬಿಐ ವಿಚಾರಣೆ ರಾಬ್ರಿ ದೇವಿ ಅವರ ನಿವಾಸದಲ್ಲಿ ಹಾಜರಿದ್ದರು. ಅಲ್ಲದೆ, ರಾಬ್ರಿ ದೇವಿ ನಿವಾಸದಲ್ಲಿ ಯಾದವ ಕುಟುಂಬದ ವಕೀಲರು ಕೂಡ ಹಾಜರಿದ್ದರು

ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಫೆಬ್ರವರಿ 27 ರಂದು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ, ಅವರ ಪತ್ನಿ ರಾಬ್ರಿ ದೇವಿ ಮತ್ತು ಇತರ 14 ಜನರಿಗೆ ಸಮನ್ಸ್ ನೀಡಿತ್ತು. ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ಆರೋಪಿಗಳಿಗೆ ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಸ್ತುತ ಜಾಮೀನಿನಲ್ಲಿರುವ ಒಬ್ಬರನ್ನು ಹೊರತುಪಡಿಸಿ ಆರೋಪಿಗಳಿಗೆ ಸಂಬಂಧಿಸಿದಂತೆ ಬಂಧನವಿಲ್ಲದೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ನ್ಯಾಯಾಧೀಶರು ಗಮನಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ ಅವರು ರೈಲ್ವೆ ಸಚಿವರಾಗಿದ್ದಾಗ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿ (OSD) ಆಗಿದ್ದ ಭೋಲಾ ಯಾದವ ಅವರನ್ನು ಸಿಬಿಐ ಜುಲೈ 2022 ರಲ್ಲಿ ಬಂಧಿಸಿತು. ಕಳೆದ ವರ್ಷ ಅಕ್ಟೋಬರ್ 10 ರಂದು 16 ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಅಪರಾಧಗಳಿಗಾಗಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಅಂತಿಮ ವರದಿಯಲ್ಲಿ ಲಾಲು ಪ್ರಸಾದ ಅವರ ಪುತ್ರಿ ಮಿಸಾ ಭಾರತಿ, ಕೇಂದ್ರ ರೈಲ್ವೆಯ ಮಾಜಿ ಪ್ರಧಾನ ವ್ಯವಸ್ಥಾಪಕಿ ಸೌಮ್ಯ ರಾಘವನ್, ಮಾಜಿ ಸಿಪಿಒ ಕಮಲ್ ದೀಪ್ ಮೈನ್‌ರಾಯ್, ಬದಲಿಯಾಗಿ ನೇಮಕಗೊಂಡ ಏಳು ಆಕಾಂಕ್ಷಿಗಳು ಮತ್ತು ನಾಲ್ವರು ಖಾಸಗಿ ವ್ಯಕ್ತಿಗಳನ್ನು ಹೆಸರಿಸಲಾಗಿದೆ.

ಪ್ರಮುಖ ಸುದ್ದಿ :-   ಇತ್ತೀಚಿನ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಎನ್‌ಡಿಎಗೆ ಕೇವಲ 3 ಸ್ಥಾನದ ಕೊರತೆ

ಚಾರ್ಜ್ ಶೀಟ್ ಪ್ರಕಾರ, ಲಾಲು ಪ್ರಸಾದ ಮತ್ತು ಇತರರ ವಿರುದ್ಧ ಪ್ರಾಥಮಿಕ ತನಿಖೆಯ ಫಲಿತಾಂಶದ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ, ಬಿಹಾರದ ಪಾಟ್ನಾ ನಿವಾಸಿಗಳಾಗಿದ್ದರೂ, ಮುಂಬೈ, ಜಬಲ್‌ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ರೈಲ್ವೆಯ ವಿವಿಧ ವಲಯಗಳಲ್ಲಿ 2004-2009ರ ಅವಧಿಯಲ್ಲಿ ಗ್ರೂಪ್-ಡಿ ಹುದ್ದೆಗಳಲ್ಲಿ ಕೆಲವು ವ್ಯಕ್ತಿಗಳನ್ನು ಬದಲಿಯಾಗಿ ನೇಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತು ಅದರ ಬದಲಾಗಿ, ವ್ಯಕ್ತಿಗಳು ಅಥವಾ ಅವರ ಕುಟುಂಬದ ಸದಸ್ಯರು ತಮ್ಮ ಭೂಮಿಯನ್ನು ಲಾಲುಪ್ರಸಾದ ಅವರ ಕುಟುಂಬದ ಸದಸ್ಯರ ಹೆಸರಿಗೆ ಅಥವಾ ಕಂಪನಿ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿಗೆ ವರ್ಗಾಯಿಸಿದರು. ನಂತರ ಈ ಕಂಪನಿಯನ್ನು ಪ್ರಸಾದ್ ಅವರ ಕುಟುಂಬದ ಸದಸ್ಯರು ಖರೀದಿ ಮಾಡಿದರು.
ಬಿಜೆಪಿಯ ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಎಂಟು ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒಂದು ದಿನದ ನಂತರ ರಾಬ್ರಿದೇವಿ ಅವರ ಮನೆಗೆ ತೆರಳಿದ ಸಿಬಿಐ ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಿದೆ.
ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಮಾಡಿದವರಲ್ಲಿ ರಾಬ್ರಿದೇವಿ ಅವರ ಪುತ್ರ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಬಾಂಗ್ಲಾದೇಶ : ಬಹುಮಹಡಿ ಕಟ್ಟದಲ್ಲಿ ಅಗ್ನಿ ಅನಾಹುತ ; 43 ಮಂದಿ ಸಾವು, ಅನೇಕರಿಗೆ ಗಾಯ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement