ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ತನ್ನ ಕಾರ್ಯಾಚರಣೆ ನಿಲ್ಲಿಸಿದ ಉಪಗ್ರಹವನ್ನು ಯಶಸ್ವಿಯಾಗಿ ಡಿ-ಆರ್ಬಿಟ್ (ಪರಿಭ್ರಮಿಸಿದ ಕ್ಷಕೆಯಿಂದ ಕೆಳಕ್ಕೆ ಇಳಿಸಬೇಕು) ಮಾಡಿದೆ. ಮೇಘಾ ಟ್ರೋಪಿಕ್ಸ್-1 ಅನ್ನು ಪೆಸಿಫಿಕ್ ಮಹಾಸಾಗರದ ಮೇಲಿರುವ ಆಕಾಶದಲ್ಲಿ ವಿಘಟಿಸಿದ ನಂತರ ಸುಟ್ಟುಹೋದ ಕಾರಣ ಅದರ ಕಕ್ಷೆಯಿಂದ ಕೆಳಕ್ಕೆ ತರಲಾಯಿತು.
ಇಸ್ರೋ ಈ ಬಗ್ಗೆ ಟ್ವೀಟ್ ಮಾಡಿದ್ದು, “ಕಾರ್ಯಾಚರಣೆ ಮುಕ್ತಾಯಗೊಂಡ ಮೇಘಾ-ಟ್ರೋಪಿಕ್ಸ್-1 (MT-1) ಗಾಗಿ ನಿಯಂತ್ರಿತ ಮರು-ಪ್ರವೇಶ ಪ್ರಯೋಗವನ್ನು ಮಾರ್ಚ್ 7ರಂದು ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದೆ.
ಉಷ್ಣವಲಯದ ಹವಾಮಾನ ಅಧ್ಯಯನಕ್ಕಾಗಿ ಇಸ್ರೋ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್ (CNES) ಅಭಿವೃದ್ಧಿಪಡಿಸಿದ ಜಂಟಿ ಕಾರ್ಯಾಚರಣೆಯಾಗಿ ಮೇಘಾ-ಟ್ರೋಪಿಕ್ಸ್-1 ಅನ್ನು ಅಕ್ಟೋಬರ್ 12, 2011 ರಂದು ಲೋ ಅರ್ಥ್ ಆರ್ಬಿಟ್ (LEO) ಗೆ ಉಡಾವಣೆ ಮಾಡಲಾಗಿತ್ತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಮಿಷನ್ ಆರಂಭದಲ್ಲಿ ಮೂರು ವರ್ಷಗಳ ವರೆಗೆ ಕಾರ್ಯನಿರ್ವಹಿಸಲು ಯೋಜಿಸಲಾಗಿತ್ತು, ಆದರೆ ಒಂದು ದಶಕದಿಂದ ಹವಾಮಾನದ ಬಗ್ಗೆ ಪ್ರಮುಖ ಡೇಟಾವನ್ನು ನೀಡುವುದನ್ನು ಮುಂದುವರೆಸಿದ ನಂತರ ಅದನ್ನು ವಿಸ್ತರಿಸಲಾಯಿತು.
ಮಿಷನ್ ಅವಧಿಯ ಮುಕ್ತಾಯದ ನಂತರ ವಿಶ್ವಸಂಸ್ಥೆಯ ಇಂಟರ್-ಏಜೆನ್ಸಿ ಬಾಹ್ಯಾಕಾಶ ಶಿಲಾಖಂಡರಾಶಿಗಳ ಸಮನ್ವಯ ಸಮಿತಿಗೆ (UNIADC) ತನ್ನ ಬದ್ಧತೆಯ ಭಾಗವಾಗಿ ಇಸ್ರೋ ಉಪಗ್ರಹವನ್ನು ವಿಘಟಿಸಿತು.
ವಿಶ್ವಸಂಸ್ಥೆ ಮಾರ್ಗಸೂಚಿಗಳು ಉಪಗ್ರಹದ ಜೀವಿತಾವಧಿಯಲ್ಲಿ ಅದನ್ನು ಕಕ್ಷೆಗೆ ಇಳಿಸಬೇಕು. ಮೇಲಾಗಿ ಸುರಕ್ಷಿತ ಪರಿಣಾಮ ವಲಯಕ್ಕೆ ನಿಯಂತ್ರಿತ ಮರು-ಪ್ರವೇಶದ ಮೂಲಕ ತರಬೇಕು ಎಂದು ಸೂಚಿಸಲಾಗಿದೆ.
Megha-Tropiques-1 ಇನ್ನೂ ಸುಮಾರು 125 ಕೆಜಿ ಆನ್‌ಬೋರ್ಡ್ ಇಂಧನವನ್ನು ಹೊಂದಿದ್ದು, ಸಂಪೂರ್ಣ ನಿಯಂತ್ರಿತ ವಾತಾವರಣದ ಮರು-ಪ್ರವೇಶವನ್ನು ಸಾಧಿಸಲು ಇದು ಸಾಕಾಗುತ್ತದೆ ಎಂದು ಇಸ್ರೋ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ