ಪ್ರಧಾನಿ ಮೋದಿಗೆ ಜೈ ಎಂದ ಸಂಸದೆ ಸುಮಲತಾ : ಅಧಿಕೃವಾಗಿ ಬಿಜೆಪಿಗೆ ಬೆಂಬಲ ಘೋಷಣೆ

ಮಂಡ್ಯ : ಸಂಸದೆ ಸುಮಲತಾ ಅಂಬರೀಶ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಇಂದು, ಶುಕ್ರವಾರ ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷೇತರ ಸಂಸದೆಯಾದ ಸುಮಲತಾ ಅವರು, ಮಂಡ್ಯ ಅಭಿವೃದ್ದಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಕಾಳಜಿ ಇದೆ. ಹೀಗಾಗಿ ನನ್ನ ಸಂಪೂರ್ಣ ಬೆಂಬಲ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ ಎಂದು ಹೇಳಿದರು.
ಅಂಬಿ ಕುಟುಂಬ ದ್ವೇಷದ ರಾಜಕಾರಣ ಮಾಡುವುದಿಲ್ಲ. ಪಕ್ಷೇತರ ಸಂಸದೆಯಾದರೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹೆಚ್ಚು ಅನುದಾನ ನೀಡಿದ್ದಾರೆ. ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ಬಿಜೆಪಿ ಸೇರ್ಪಡೆಗೆ ಸ್ವಕ್ಷೇತ್ರ ಸಂಸದೆಯಾಗಿರುವ ನನಗೆ ಒಂದಷ್ಟು ಕಾನೂನಾತ್ಮಕ ಅಡ್ಡಿಗಳಿವೆ. ಪಕ್ಷೇತರ ಸಂಸದರು ಆಯ್ಕೆಯಾದ ೬ ತಿಂಗಳ ಒಳಗೆ ಯಾವುದಾದರು ಪಕ್ಷ ಸೇರ್ಪಡೆಯಾಗಲು ಅವಕಾಶವಿದೆ. ಈಗ ೪ ವರ್ಷವಾಗಿದೆ. ಹಾಗಾಗಿ, ಸೇರ್ಪಡೆ ಸಾಧ್ಯವಿಲ್ಲ. ಹೀಗಾಗಿ ಬೆಂಬಲ ಘೋಷಣೆ ಮಾಡಿದ್ದೇನೆ ಎಂದರು.
ಬಿಜೆಪಿಗೆ ಬೆಂಬಲ ಘೋಷಿಸಿರುವ ತೀರ್ಮಾನದ ಹಿಂದೆ ನನ್ನ ಸ್ವಾರ್ಥವನ್ನಾಗಲಿ, ನನ್ನ ರಾಜಕೀಯ ಭವಿಷ್ಯವನ್ನಾಗಲಿ ನಾನು ನೋಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ತೀರ್ಮಾನ ಮಾಡಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಬೆಂಬಲಿಸಲು ತೀರ್ಮಾನ ಮಾಡಿದ್ದೇನೆ. ವಿಶ್ವದಲ್ಲಿ ಭಾರತೀಯರು ತಲೆ ಎತ್ತಿ ನಡೆಯುವಂತೆ ಮಾಡಿರುವ ನರೇಂದ್ರ ಮೋದಿ. ಎಲ್ಲವನ್ನೂ ಅಳೆದು ತೂಗಿ ಬೆಂಬಲ ನೀಡುವ ತೀರ್ಮಾನ ಮಾಡಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ನಾನು ರಾಜಕಾರಣದಲ್ಲಿರುವವರೆಗೂ ನನ್ನ ಪುತ್ರ ರಾಜಕೀಯಕ್ಕೆ ಬರಲ್ಲ….
ನನ್ನ ಮಗ ಅಭೀಷೇಕಗಾಗಿ ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ. ಆತನಿಗಾಗಿ ವಿಧಾನಸಭಾ ಟಿಕೆಟ್ ಕೇಳಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದೆಲ್ಲ ನಿರಾಧಾರ. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡುತ್ತೇನೆ. ನನಗೆ ಅಂಬರೀಶ ಹೆಸರೂ ಉಳಿಯಬೇಕು. ಹೀಗಾಗಿ ನಾನು ರಾಜಕಾರಣದಲ್ಲಿರುವವರೆಗೂ ನನ್ನ ಮಗ ಅಭಿಷೇಕ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಅಭಿಷೇಕನನ್ನು ಸಿನಿಮಾ ರಂಗಕ್ಕೂ ಲಾಂಚ್‌ ಮಾಡಿಲ್ಲ, ಕೆಲವು ನಿರ್ಮಾಪಕರು ಬಂದು ಒತ್ತಾಯಿಸಿ ಆತನ ಸಿನಿಮಾ ಮಾಡಿದರು. ಆತ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾನೆ. ನಾನು ರಾಜಕಾರಣದಲ್ಲಿರುವವರೆಗೂ ಆತ ರಾಜಕೀಯಕ್ಕೆ ಬರುವುದಿಲ್ಲ ಎಂದರು.
ಎರಡೂ ರಾಜಕೀಯ ಪಕ್ಷಗಳು ಅಭಿಷೇಕಗೆ ವಿಧಾನಸಭಾ ಚುನಾವಣೆ ಟಿಕೆಟ್ ನೀಡುವುದಾಗಿ ಆಹ್ವಾನ ನೀಡಿದ್ದವು. ಆದರೆ ಆತ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ನಾನು ಸಹ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ, ನಾನು ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತೇನೆ ಎಂಬ ವರದಿಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement