ಹೈದರಾಬಾದ್: ವರ್ಷದ ಆರಂಭದಲ್ಲಿ ಶೀಘ್ರದಲ್ಲೇ ಹೊಸ ಜೀವನ ಆರಂಭಿಸುತ್ತೇವೆ ಎಂದು ಹೇಳಿದ್ದ ತೆಲುಗು ನಟ ನರೇಶ – ಪವಿತ್ರ ಲೋಕೇಶ ಈಗ ಮದುವೆಯಾಗಿದ್ದಾರೆ.
ನರೇಶ್ ಅವರಿಗೆ ಇದು 4ನೇ ಮದುವೆ, ಪವಿತ್ರ ಲೋಕೇಶ ಅವರಿಗೆ ಇದು 3ನೇ ಮದುವೆಯಾಗಿದೆ. ಶುಕ್ರವಾರ, ಆತ್ಮೀಯ ಸಮಾರಂಭದಲ್ಲಿ ಇವರಿಬ್ಬರು ವಿವಾಹವಾದರು ಹಾಗೂ ನರೇಶ ಅವರು ತಮ್ಮ ವಿವಾದ ವೀಡಿಯೊವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. “ನಮಗಾಗಿ ಈ ಹೊಸ ಪ್ರಯಾಣದಲ್ಲಿ ಜೀವನಪೂರ್ತಿ ಶಾಂತಿ ಮತ್ತು ಸಂತೋಷಕ್ಕಾಗಿ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ಅವರು ಬರೆದಿದ್ದಾರೆ.
ವೀಡಿಯೊದಲ್ಲಿ, ನರೇಶ ಮತ್ತು ಪವಿತ್ರಾ ಲೋಕೇಶ ಹಿಂದೂ ಸಂಪ್ರದಾಯದಂತೆ ಮದುವೆಯ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದನ್ನು ಕಾಣಬಹುದು. ವರನನ್ನು ಬಿಳಿ ಧೋತಿಯ ಉಡುಪಿನಲ್ಲಿ ಅಲಂಕರಿಸಿದ್ದರೆ, ವಧು ಸಾಂಪ್ರದಾಯಿಕ ಆಭರಣಗಳೊಂದಿಗೆ ಕೆಂಪು ಸೀರೆ ಧರಿಸಿದ್ದರು.
ನರೇಶ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ದೂರವಾಗಿದ್ದರೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ. ಇಬ್ಬರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ.
ಕಳೆದ ಕೆಲ ಸಮಯದ ಹಿಂದೆ ನರೇಶ ಹಾಗೂ ಪವಿತ್ರ ಮೈಸೂರಿನಲ್ಲಿ ಒಂದೇ ಹೊಟೇಲ್‌ನಲ್ಲಿ ತಂಗಿದ್ದರು. ಇದನ್ನು ಅರಿತ ನರೇಶ ಪತ್ನಿ ರಮ್ಯಾ ಅವರು ಹೊಟೇಲ್ ಗೆ ಹೋಗಿ ರಾದ್ಧಾಂತ ಮಾಡಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ನರೇಶ- ಪವಿತ್ರ ಲೋಕೇಶ ಸಂಬಂಧದ ಬಗ್ಗೆ…
ನರೇಶ ಮತ್ತು ಪವಿತ್ರಾ ಲೋಕೇಶ ಸಮ್ಮೋಹನಂ ಸೆಟ್‌ನಲ್ಲಿ ಭೇಟಿಯಾದರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರು. ಅಂದರು ಬಾಗುಂದಲಿ ಅಂದುಲ ನೆನೆದಲಿ, ಮಿಡಲ್ ಕ್ಲಾಸ್ ಅಬ್ಬಾಯಿ, ಹ್ಯಾಪಿ ವೆಡ್ಡಿಂಗ್ ಮತ್ತು ರಾಮರಾವ್ ಆನ್ ಡ್ಯೂಟಿ ಮುಂತಾದ ಚಿತ್ರಗಳಲ್ಲಿ ಅವರಿಬ್ಬರು ಕೆಲಸ ಮಾಡಿದ್ದಾರೆ.
ನರೇಶ ಅವರಿಗೆ ಇದು ನಾಲ್ಕನೇ ಮದುವೆ. ನರೇಶ ಮೊದಲು ಡ್ಯಾನ್ಸ್ ಮಾಸ್ಟರ್ ಶ್ರೀನು ಅವರ ಮಗಳನ್ನು ಮದುವೆಯಾಗಿದ್ದರು, ವಿಚ್ಛೇದನ ಪಡೆದು ರೇಖಾ ಸುಪ್ರಿಯಾ ಎನ್ನುವವರನ್ನು ಮದುವೆಯಾಗಿ ವಿಚ್ಛೇದನದ ಬಳಿಕ ರಮ್ಯಾ ಅವರನ್ನು ಮದುವೆಯಾಗಿದ್ದರು.
ಪವಿತ್ರಾ ಒಮ್ಮೆ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಅವರು ನಟ ಸುಚೇಂದ್ರ ಪ್ರಸಾದ ಅವರನ್ನು ಮದುವೆಯಾದರು. ಆದಾಗ್ಯೂ, ಅವರು 2018 ರಲ್ಲಿ ಬೇರ್ಪಟ್ಟರು. ನರೇಶ ಅವರು ಮಹೇಶ ಬಾಬು ಅವರ ಮಲ ಸಹೋದರ ಮತ್ತು ವಿಜಯ ನಿರ್ಮಲಾ-ನಟ ಕೃಷ್ಣ ಅವರ ಮಗ.
ಈಗ ನರೇಶ-ಪವಿತ್ರಾ ಲೋಕೇಶ ಮದುವೆಯಾಗಿದ್ದು, ಈ ಕುರಿತ ವೀಡಿಯೊ ಹಂಚಿಕೊಂಡಿದ್ದಾರೆ. ಸಪ್ತಪದಿ ತುಳಿದು, ಹಾರ ಬದಲಾಯಿಸಿಕೊಂಡು, ಹೊಸ ಜೀವನಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನರೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ