ಸಿಬ್ಬಂದಿ ನೇಮಕಾತಿ ಆಯೋಗವು ಸೆಲೆಕ್ಷನ್ ಪೋಸ್ಟ್ ಫೇಸ್ 11 ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ಇಲಾಖೆ / ಸಂಸ್ಥೆ / ಸಚಿವಾಲಯ / ಕಚೇರಿಗಳಲ್ಲಿ ಒಟ್ಟು 5369 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಸಂಸ್ಥೆ : ಸಿಬ್ಬಂದಿ ನೇಮಕಾತಿ ಆಯೋಗ
ಪರೀಕ್ಷೆ ಹೆಸರು : ಸೆಲೆಕ್ಷನ್ ಪೋಸ್ಟ್ ಫೇಸ್ 11
ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ : 5369
ಮೂರು ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
.ಹುದ್ದೆಗಳು : ಮಲ್ಟಿಟಾಸ್ಕಿಂಗ್ ಸ್ಟಾಫ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡಂಟ್, ಅಕೌಂಟಂಟ್, ಹೆಡ್ ಕ್ಲರ್ಕ್, ಜೂನಿಯರ್ ಸೀಡ್ ಅನಾಲಿಸ್ಟ್, ಗರ್ಲ್ಸ್ ಕೆಡೆಟ್ ಇನ್‌ಸ್ಟ್ರಕ್ಟರ್, ಮೆಕಾನಿಕಲ್ ವಿಭಾಗ ಚಾರ್ಜ್‌ಮನ್, ಸೈಂಟಿಫಿಕ್ ಅಸಿಸ್ಟಂಟ್, ರಿಹ್ಯಾಬಿಲಿಟೇಶನ್ ಕೌನ್ಸೆಲರ್ , ಕನ್ಸರ್ವೇಶನ್ ಅಸಿಸ್ಟಂಟ್, ಟೆಕ್ನಿಕಲ್ ಅಸಿಸ್ಟಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ್ ಆಪರೇಟರ್, ಸಬ್ ಎಡಿಟರ್ (ಹಿಂದಿ), ಸಬ್ ಎಡಿಟರ್ (ಇಂಗ್ಲಿಷ್), ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ (ಬಯೋಲಜಿ) ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತಿದೆ. ಅಲ್ಲದೆ, ಇನ್ನೂ ಕೆಲವು ಹುದ್ದೆಗಳು ಸೇರಿದಂತೆ ಒಟ್ಟು 5369 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿನ ಪರೀಕ್ಷೆ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 06-03-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 27-03-2023
ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 28-03-2023
ಆಫ್‌ಲೈನ್ ಚಲನ್ ಜೆನೆರೇಟ್ ಮಾಡಲು ಕೊನೆಯ ದಿನಾಂಕ : 28-03-2023
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ: 29-03-2023
ಅಪ್ಲಿಕೇಶನ್ ತಿದ್ದುಪಡಿಗೆ ದಿನಾಂಕಗಳು : ಏಪ್ರಿಲ್ 03 ರಿಂದ 05, 2023
ಕಂಪ್ಯೂಟರ್ ಆಧಾರಿತ ಪರೀಕ್ಷೆ : ಜೂನ್ / ಜುಲೈ 2023ನಲ್ಲಿ ನಡೆಯಲಿದೆ.
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ: 10ನೇ ತರಗತಿ, 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ, ಬಿಇ,
ವೆಬ್‌ಸೈಟ್ ವಿಳಾಸ-https://ssc.nic.in/
ಸ್ಥಳ: ಅಖಿಲ ಭಾರತ ಮಟ್ಟದಲ್ಲಿ
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ವ್ಯಾಪಾರ/ ಕೌಶಲ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ
ವಯೋಮಿತಿ: ಎಸ್ಎಸ್ಸಿ ಸೆಲೆಕ್ಷನ್ ಪೋಸ್ಟ್ ಹಂತ 11 ನೇಮಕಾತಿ 2023 ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿ 18 ರಿಂದ 30 ವರ್ಷಗಳು ಆಗಿದೆ.
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
ಪಿಡಬ್ಲ್ಯುಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 100 ರೂ.ಗಳು, ಎಸ್‌ಸಿ/ಎಸ್‌ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ
ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅಭ್ಯರ್ಥಿಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು
ಅರ್ಜಿ ಸಲ್ಲಿಸುವವರು ಇಲ್ಲಿ ಕ್ಲಿಕ್ ಮಾಡಿ–https://ssc.nic.in/Registration/Home
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ–https://ssc.nic.in/SSCFileServer/PortalManagement/UploadedFiles/notice_rhq_06032023.pdf
Varalakshmi
ವಯಸ್ಸಿನ ವಯೋಮಿತಿ ಹೆಚ್ಚು ಇರಲಿ ನಿರುದ್ಯೋಗ ಸಮಸ್ಯೆ ತುಂಬಾ ಇದೆ ಮೂವತ್ತು ವಯಸ್ಸಿಗೆ ಸೀಮಿತಗೊಳಿಸಿದರೆ ಗತಿ ಏನು ನಲವತ್ತಾದರೂ ಸರ್ಕಾರಿ ಕೆಲಸಕ್ಕೆ ಅರ್ಜಿಗಳನ್ನು ಹಾಕಿ ಪ್ರಯತ್ನ ಮಾಡುತ್ತಲೇ ಇರುತ್ತೇವೆ ಅಂತವರಿಗೂ ಬೆಲೆ ಇರಬೇಕಲ್ಲವೇ ದಯವಿಟ್ಟು ವಯಸ್ಸಿನ ವಯೋಮಿತಿ ಹೆಚ್ಚು ಮಾಡಿ