ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಮತದಿಂದ ಗೆದ್ದ ಭಾರತದ ದಾಖಲೆ ನಿರ್ಮಿಸಿದ್ದ ಧ್ರುವನಾರಾಯಣ

ಬೆಂಗಳೂರು: ಹೃದಯಾಘಾತದಿಂದ ಇಂದು ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು 2004ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಮತದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಭಾರತದ ಇತಿಹಾಸದಲ್ಲೇವಿಧಾನಸಭೆ ಹಾಗೂ ಲೋಕಸಭೆ ಚುನಾವಣೆವರೆಗೂ ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿರುವ ದಾಖಲೆ ಅವರ ಹೆಸರಿನಲ್ಲೇ ಇದೆ. ಚಾಮರಾಜನಗರ ಜಿಲ್ಲೆ ಸಂತೆಮಾರನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಸಿದ್ದ ಧ್ರುವನಾರಾಯಣ ಅವರು ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಒಂದು ಮತದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
2004ರಲ್ಲಿ ಬ್ಯಾಲೆಟ್ ಮತದಾನದ ಪದ್ಧತಿ ಇತ್ತು. ಮತ ಎಣಿಕೆ ಕೊನೆಯ ಸುತ್ತಿನ ಮನ ಎಣಿಕೆ ಮುಗಿದಾಗ ಒಂದು ಮತದ ಅಂತರದಲ್ಲಿ ಗೆದ್ದು ವಿಜಯದ ನಗೆ ಬೀರಿದ್ದರು.ಒಂದು ಮತದಿಂದ ಗೆದ್ದಾಗ ಎದುರಾಳಿ ಕೃಷ್ಣಮೂರ್ತಿ ಅವರು ಮತ್ತೆ ಮರು ಎಣಿಕೆ ಮತದಾನ ನಡೆಯಬೇಕೆಂದು ಮನವಿ ಮಾಡಿದ್ದರು. ಚುನಾವಣಾ ಆಯೋಗ ಮರು ಎಣಿಕೆಗೆ ಸೂಚನೆ ನೀಡಿತ್ತು. ಆಗಲೂ ಕೂಡ ಧ್ರುವನಾರಾಯಣ ಒಂದೇ ಮತದಲ್ಲಿ ಗೆಲುವು ಸಾಧಿಸಿದ್ದರು. 2006ರ ನಂತರ ಕ್ಷೇತ್ರ ಪುನರ್‌ವಿಂಗಡಣೆಯಾದ ನಂತರ ಸಂತೆಮಾರನಹಳ್ಳಿ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶಗಳು ಕೊಳ್ಳೆಗಾಲ ಕ್ಷೇತ್ರದಲ್ಲಿ ಸೇರ್ಪಡೆಯಾಯಿತು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement