ನ್ಯೂಜಿಲೆಂಡ್ ಶ್ರೀಲಂಕಾವನ್ನು ಸೋಲಿಸಿದ ನಂತ ಸತತ 2ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದ ಭಾರತ

ನವದೆಹಲಿ: ವಾರದ ಸಸ್ಪೆನ್ಸ್ ಸೋಮವಾರ, ಮಾರ್ಚ್ 13 ರಂದು ಕೊನೆಗೊಂಡಿತು. ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಅಂತ್ಯಗೊಳ್ಳುವ ಮೊದಲೇ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಳಿಸಿತು.
ಸೋಮವಾರ ನಡೆದ ನ್ಯೂಜಿಲೆಂಡ್‌ನಲ್ಲಿ ನಡೆದ 2-ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾ ಸೋಲನುಭವಿಸಿದ ನಂತರ ಭಾರತ ಫೈನಲ್‌ಗೆ ಪ್ರವೇಶಿಸಿತು.
ಭಾರತವು ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್‌ನಲ್ಲಿ ಡಬ್ಲ್ಯುಟಿಸಿ (WTC)ಯ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಈ ಟೆಸ್ಟ್‌ ಸರಣಿಯಲ್ಲಿ ಇಂದೋರ್‌ನಲ್ಲಿ ಭಾರತದ ವಿರುದ್ಧ 3 ನೇ ಟೆಸ್ಟ್ ಗೆದ್ದ ನಂತರ ಆಸ್ಟ್ರೇಲಿಯಾ ಫೈನಲ್‌ಗೆ ಅರ್ಹತೆ ಗಳಿಸಿತು.
ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾದ ಸೋಲಿನ ನಂತರ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್‌ನ 5 ನೇ ದಿನದ ಆಟ ಮುಕ್ತಾಯವಾಗುವ ಮೊದಲೇ ಭಾರತವು ಲಂಡನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತವು 2021 ರಲ್ಲಿ ಡಬ್ಲ್ಯುಟಿಸಿ (WTC) ಫೈನಲ್‌ಗೆ ಅರ್ಹತೆ ಗಳಿಸಿತ್ತು. ನಂತರ ಭಾರತ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಗಮನಾರ್ಹವಾಗಿ, ಇದು 2023 ರಲ್ಲಿ ಭಾರತಕ್ಕೆ ಎರಡನೇ ಪ್ರಮುಖ ಐಸಿಸಿ ಫೈನಲ್‌ ಆಗಿರುತ್ತದೆ. ಏಕದಿನದ ಪಂದ್ಯದ ವಿಶ್ವಕಪ್ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯಲಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಶ್ರೀಲಂಕಾದ ಸೋಲು, ಭಾರತಕ್ಕೆ ಲಾಭ
ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 355 ರನ್ ಗಳಿಸಿತು ಆದರೆ ಡ್ಯಾರಿಲ್ ಮಿಚೆಲ್ ಅವರ ಅದ್ಭುತ ಶತಕವು ನ್ಯೂಜಿಲೆಂಡ್‌ಗೆ 18 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 4 ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಾಗ ತೊಂದರೆಗೊಳಗಾಗಿತ್ತು ಆದರೆ ಹಿರಿಯ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಉತ್ತಮವಾಗಿ ಬ್ಯಾಟ್‌ ಮಾಡಿ ಶ್ರೀಲಂಕಾವು ನ್ಯೂಜಿಲ್ಯಾಂಡ್‌ಗೆ 285 ರನ್‌ಗಳ ಗುರಿ ನೀಡಲು ನೆರವಾದರು. ಆದರೆ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ನಡುವೆ 142 ರನ್ ಜೊತೆಯಾಟದ ನೆರವಿನಿಂದ ನ್ಯೂಜಿಲ್ಯಾಂಡ್‌ ನಿಗದಿತ ಗುರಿ ತಲುಪಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement