ರಟ್ಟಿಹಳ್ಳಿ: ಮೆರವಣಿಗೆ ವೇಳೆ ಕಲ್ಲು ತೂರಾಟ, 15 ಮಂದಿ ಪೊಲೀಸ್ ವಶಕ್ಕೆ

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದ ಮೆರವಣಿಗೆಯ ವೇಳೆ ನಿರ್ದಿಷ್ಟ ಸಮುದಾಯದ ಮನೆಗಳು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಅದು ಮಂಗಳವಾರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಇಂದು ಮಂಗಳವಾರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯೊಂದಿಗೆ ಹಿಂದೂ ಸಂಘಟನೆಗಳ ಸದಸ್ಯರು ಬೈಕ್ ರ್ಯಾಲಿ ನಡೆಸುತ್ತಿದ್ದರು. ಮೆರವಣಿಗೆಯು ಮುಸ್ಲಿಂ ಸಮುದಾಯದವರು ಇರುವ ಪ್ರದೇಶ ದಾಟುತ್ತಿದ್ದಾಗ, ಕೆಲವು ಕಿಡಿಗೇಡಿಗಳು ಅಲ್ಲಿದ್ದ ಮನೆ ಮತ್ತು ಪ್ರಾರ್ಥನಾ ಸ್ಥಳದ ಮೇಲೆ ಕಲ್ಲು ತೂರಿದ ಘಟನೆ ವರದಿಯಾಗಿದೆ. ಬೈಕ್, ಆಟೋ ಜಖಂ ಆಗಿದೆ. ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ಇತ್ತು ಮತ್ತು ಪೊಲೀಸರು ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಮಾರ್ಚ್‌ 9 ರಂದು ರಾಯಣ್ಣನ ಪ್ರತಿಮೆ ಮೆರವಣಿಗೆ ವೇಳೆ ಮುಸ್ಲಿಮರ ಅಡ್ಡಿಪಡಿಸಿದ್ದರು ಎಂಬ ಆರೋಪವೂ ಇದೆ. ಅದು ಜನರನ್ನು ಪ್ರಚೋದಿಸಿರಬಹುದೇ ಎಂಬ ಮಾತುಗಳೂ ಕೇಳಿಬರುತ್ತಿವೆ.

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement