ಜಿಯೋ ಪ್ಲಸ್ ಪ್ಲಾನ್ ಒಂದು ತಿಂಗಳು ಉಚಿತ ಟ್ರಯಲ್‌ ನೊಂದಿಗೆ ಜಿಯೋದಿಂದ ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ ಆರಂಭ

posted in: ರಾಜ್ಯ | 0

ನವದೆಹಲಿ : ರಿಲಯನ್ಸ್ ಜಿಯೋದಿಂದ ಹೊಸದಾಗಿ ಇಡೀ ಕುಟುಂಬಕ್ಕಾಗಿ ಪೋಸ್ಟ್‌ಪೇಯ್ಡ್ ಯೋಜನೆ ಪ್ರಾರಂಭಿಸಲಾಗಿದೆ. ‘ಜಿಯೋ ಪ್ಲಸ್’ ಇದನ್ನು ಒಂದು ತಿಂಗಳು ಉಚಿತ ಪ್ರಯೋಗದೊಂದಿಗೆ ಬಿಡುಗಡೆಗೊಳಿಸಿದೆ.
ಜಿಯೋ ಪ್ಲಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ ಸಂಪರ್ಕ ಪಡೆಯುವುದಕ್ಕೆ ಬಯಸುವ ಗ್ರಾಹಕರು 399 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಈ ಯೋಜನೆಗೆ 3 ಹೆಚ್ಚುವರಿ ಸಂಪರ್ಕಗಳನ್ನು ಸೇರ್ಪಡೆ ಮಾಡಬಹುದು. ಪ್ರತಿ ಹೆಚ್ಚುವರಿ ಸಂಪರ್ಕಕ್ಕೆ 99 ರೂಪಾಯಿ ಪಾವತಿಸಬೇಕಾಗುತ್ತದೆ.
ಜಿಯೋ ಪ್ಲಸ್ ನಲ್ಲಿ 4 ಸಂಪರ್ಕಗಳಿಗೆ ತಿಂಗಳಿಗೆ ರೂ. 696 (399+99+99+99) ಪಾವತಿಸಬೇಕಾಗುತ್ತದೆ. ಈ ಯೋಜನೆಯೊಂದಿಗೆ 75 ಜಿಬಿ ಡೇಟಾ ಲಭ್ಯ ಇರುತ್ತದೆ. 4 ಸಂಪರ್ಕಗಳನ್ನು ಹೊಂದಿರುವ ಕುಟುಂಬ ಯೋಜನೆಯಲ್ಲಿ ಒಂದೇ ಸಿಮ್‌ಗೆ ತಿಂಗಳಿಗೆ ಸರಾಸರಿ 174 ರೂಪಾಯಿ ಆಗುತ್ತದೆ.
ಅಲ್ಲದೆ, ಹೆಚ್ಚಿನ ಡೇಟಾ ಬಳಕೆಯನ್ನು ಹೊಂದಿರುವ ಗ್ರಾಹಕರು ತಿಂಗಳಿಗೆ 100 ಜಿಬಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಮೊದಲ ಸಂಪರ್ಕಕ್ಕೆ 699 ರೂ. ಮತ್ತು ಹೆಚ್ಚುವರಿ ಸಂಪರ್ಕಕ್ಕೆ 99 ರೂ. ಪಾವತಿಸಬೇಕಾಗುತ್ತದೆ. ಒಟ್ಟು 3 ಹೆಚ್ಚುವರಿ ಸಂಪರ್ಕಗಳನ್ನು ಮಾತ್ರ ತೆಗೆದುಕೊಳ್ಳಬಹುದು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇದೇ ವೇಳೆ ಕೆಲವು ವೈಯಕ್ತಿಕ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. 299 ರೂ.ಗಳಿಗೆ 30 ಜಿಬಿ ಪ್ಲಾನ್ ಇದೆ. ಅಲ್ಲದೆ, ಅನಿಯಮಿತ ಡೇಟಾ ಪ್ಲಾನ್ ಸಹ ಇದೆ. ಇದಕ್ಕಾಗಿ ಗ್ರಾಹಕರು 599 ರೂ. ಪಾವತಿಸಬೇಕಾಗುತ್ತದೆ.
ಕಂಪನಿಯು ಹೊಸದಾಗಿ ಈ ಕುಟುಂಬ ಯೋಜನೆಯನ್ನು ಜಿಯೋ ಪ್ಲಸ್‌ನೊಂದಿಗೆ ಉಡುಗೊರೆಗಳ ಗುಚ್ಛದೊಂದಿಗೆ ಪ್ರಾರಂಭಿಸಿದೆ. ಜಿಯೋ ಟ್ರೂ 5ಜಿ ವೆಲ್ಕಮ್ ಆಫರ್‌ನೊಂದಿಗೆ ಅನಿಯಮಿತ 5ಜಿ ಡೇಟಾ ಲಭ್ಯವಿರುತ್ತದೆ, ಜೊತೆಗೆ ಇದನ್ನು ಇಡೀ ಕುಟುಂಬವು ಬಳಸಲು ಸಾಧ್ಯವಾಗುತ್ತದೆ. ಇದರಲ್ಲಿ ಡೇಟಾದ ದೈನಂದಿನ ಮಿತಿಯೂ ಇಲ್ಲ. ಅಂದರೆ ಗ್ರಾಹಕರು ತಮಗೆ ಬೇಕಾದಷ್ಟು ಡೇಟಾವನ್ನು ಪಡೆಯುತ್ತಾರೆ.
ಗ್ರಾಹಕರು ಲಭ್ಯವಿರುವ ಸಂಖ್ಯೆಗಳಿಂದ ತಮಗೆ ಬೇಕಾದ ಸಂಖ್ಯೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ನೆಟ್‌ಫ್ಲಿಕ್ಸ್, ಅಮೆಜಾನ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಒಂದೇ ಬಿಲ್ಲಿಂಗ್, ಡೇಟಾ ಹಂಚಿಕೆ ಮತ್ತು ಮನರಂಜನೆಯ ಪ್ರೀಮಿಯಂ ಕಂಟೆಂಟ್ ಅಪ್ಲಿಕೇಷನ್‌ಗಳು ಸಹ ಲಭ್ಯ ಇರುತ್ತವೆ.
ಜಿಯೋ ಫೈಬರ್ ಬಳಕೆದಾರರು, ಕಾರ್ಪೊರೇಟ್ ಉದ್ಯೋಗಿಗಳು ಇತರ ಆಪರೇಟರ್‌ಗಳ ಅಸ್ತಿತ್ವದಲ್ಲಿರುವ ಪೋಸ್ಟ್‌ಪೇಯ್ಡ್ ಬಳಕೆದಾರರು ಮತ್ತು ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಯಾವುದೇ ಭದ್ರತಾ ಠೇವಣಿ ಪಾವತಿಸಬೇಕಾಗಿಲ್ಲ.ಜಿಯೋ ಪ್ಲಸ್ ಪ್ಲಾನ್ 22ನೇ ಮಾರ್ಚ್ 2023 ರಿಂದ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿ ಮತ್ತು ಹೋಮ್ ಡೆಲಿವರಿ ಆಯ್ಕೆಯ ಮೂಲಕ ಲಭ್ಯವಿರುತ್ತದೆ. ಈ ಪ್ಲಾನ್ ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.jio.com/jioplus ಗೆ ಭೇಟಿ ನೀಡಬಹುದಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ ಒಂದೇ ದಿನ 100ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲು: ರಾಜ್ಯದಲ್ಲಿ ಏರಿಕೆಯತ್ತ ಕೊರೊನಾ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement