ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆಯಾದ ಉದ್ಧವ್ ಠಾಕ್ರೆ ಆಪ್ತ ದೀಪಕ ಸಾವಂತ್

ಮುಂಬೈ: ಶಿವಸೇನಾ (ಯುಬಿಟಿ) ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತದಲ್ಲಿ, ರಾಜ್ಯದ ಮಾಜಿ ಆರೋಗ್ಯ ಸಚಿವ ಮತ್ತು ಠಾಕ್ರೆ ಅವರ ವಿಶ್ವಾಸಾರ್ಹ ಸಹಾಯಕ ದೀಪಕ ಸಾವಂತ್ ಅವರು ಪಕ್ಷದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಸೇರಿದ್ದಾರೆ ಎಂದು ವರದಿಯಾಗಿದೆ.
ನಾನು ಡಾ. ದೀಪಕ ಸಾವಂತ್ ಅವರನ್ನು ನಮ್ಮ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಅವರ ಅನುಭವದಿಂದ ನಾವು ಪ್ರಯೋಜನ ಪಡೆಯುತ್ತೇವೆ ”ಎಂದು ಸಾವಂತ್ ಅವರ ಸೇರ್ಪಡೆ ಸಮಾರಂಭದಲ್ಲಿ ಮುಖ್ಯಮಂತ್ರಿ ಶಿಂಧೆ ಹೇಳಿದರು.
ಸಾವಂತ್ ಅವರು ಶಿವಸೇನೆಯಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದರು ಮತ್ತು ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಸರ್ಕಾರದಲ್ಲಿ 2014 ರಿಂದ 2018 ರ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ಕ್ಯಾಬಿನೆಟ್ ಸಚಿವರಾಗಿದ್ದರು. 2018 ರಲ್ಲಿ ಶಿವಸೇನೆಯಿಂದ ವಿಧಾನ ಪರಿಷತ್ತಿನ ಟಿಕೆಟ್ ನಿರಾಕರಿಸಿದ ನಂತರ ಅವರನ್ನು ಸಂಪುಟದಿಂದ ಕೈಬಿಡಲಾಯಿತು.
ಮೊನ್ನೆ ಸೋಮವಾರ ಸುಭಾಷ ದೇಸಾಯಿ ಅವರ ಪುತ್ರ ಕೂಡ ಶಿಂಧೆ ಶಿಬಿರಕ್ಕೆ ಸೇರಿದ್ದರು. ದೇಸಾಯಿ ಅವರು ಮಹಾರಾಷ್ಟ್ರದ ಮಾಜಿ ಕೈಗಾರಿಕಾ ಸಚಿವರಾಗಿದ್ದರು. ಠಾಕ್ರೆ ಅವರ ಆಪ್ತ ವಲಯದ ನಿರ್ಣಾಯಕ ಸದಸ್ಯರಾದ ದೇಸಾಯಿ, ಪಕ್ಷದ ಪ್ರಮುಖ ಮುಖವೆಂದು ಪರಿಗಣಿಸಲ್ಪಟ್ಟಿದ್ದರು, ಶಿವಸೇನೆಯ ಮುಖವಾಣಿ ‘ಸಾಮ್ನಾ’ವನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ ಠಾಕ್ರೆ, “ಸುಭಾಷ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಯುಬಿಟಿ (ಬಣ) ದ ಸಕ್ರಿಯ ಸದಸ್ಯರಲ್ಲ ಆದರೆ ಅವರ ತಂದೆ ಸುಭಾಷ್ ದೇಸಾಯಿ ಹಲವು ವರ್ಷಗಳಿಂದ ನಮ್ಮೊಂದಿಗಿದ್ದಾರೆ. ವಾಷಿಂಗ್ ಮೆಷಿನ್‌ಗೆ ಹಾರಲು ಬಯಸುವ ಯಾರಾದರೂ ಜಿಗಿಯಬಹುದು ಎಂದು ಹೇಳಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಭಾರತದ ನೀತು ಘಂಘಾಸ್, ಸವೀಟಿ ಬೂರಾ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement