ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಕೋರ್ಟ್ ರಿಲೀಫ್: ನಾಳೆ ವರೆಗೆ ಬಂಧನವಿಲ್ಲ

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವ ಕಾರ್ಯಾಚರಣೆಯನ್ನು ನಾಳೆ (ಮಾರ್ಚ್‌ ೧೬) ಬೆಳಗ್ಗೆ 10 ಗಂಟೆಯವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್ ನ್ಯಾಯಾಲಯ ಪಾಕಿಸ್ತಾನ ಪೊಲೀಸರಿಗೆ ಆದೇಶಿಸಿದೆ. ಪೊಲೀಸರು ಇಂದು, ಬುಧವಾರ ಲಾಹೋರ್‌ನಲ್ಲಿರುವ ಅವರ ಮನೆಯ ಹೊರಗೆ ಖಾನ್ ಅವರ ಬೆಂಬಲಿಗರೊಂದಿಗೆ ಜನಸಮೂಹದೊಂದಿಗೆ ಸಂಘರ್ಷ ನಡೆಸಿದರು. ಇಮ್ರಾನ್‌ ಖಾನ್‌ ಬೆಂಬಲಿಗರು ಪೊಲೀಸರತ್ತ ಕಲ್ಲುಗಳನ್ನು ಎಸೆದರು. ಪೊಲೀಸರು ಅವರನ್ನು ಚದುರಿಸಲು ಅಶ್ರುವಾಯು ಸಿಡಿಸಬೇಕಾಯಿತು.
ಗಲಭೆ ನಿಗ್ರಹ ಪೊಲೀಸರ ತಂಡಗಳು ಖಾನ್ ಅವರ ಬೆಂಬಲಿಗರನ್ನು ಖಾನ್‌ ಮನೆಯಿಂದ ದೂರ ತಳ್ಳುವ ಪ್ರಯತ್ನದಲ್ಲಿ ಅವರ ಬೆಂಬಲಿಗರ ಮೇಲೆ ಜಲ ಫಿರಂಗಿಗಳು ಮತ್ತು ಅಶ್ರುವಾಯು ಸಿಡಿಸುವುದನ್ನು ದೂರದರ್ಶನ ದೃಶ್ಯಾವಳಿಗಳು ತೋರಿಸಿವೆ.
ಮತ್ತೊಂದು ವೀಡಿಯೊದಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಭೇಟಿಯಾಗಲು ಮಾಸ್ಕ್‌ ಧರಿಸಿ ತಮ್ಮ ನಿವಾಸದಿಂದ ಹೊರಬಂದಿದ್ದಾರೆ.
ಇಮ್ರಾನ್‌ ಖಾನ್‌ ಅವರು, ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಭಷ್ಟಾಚಾರ ಎದುರಿಸುತ್ತಿದ್ದಾರೆ. ಕಳೆದ ವರ್ಷ, ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಿ ಗಣ್ಯರಿಂದ ಪಡೆದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಸಾಬೀತಾಗಿತ್ತು. ಸಮನ್ಸ್ ತಪ್ಪಿಸಿದ ನಂತ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಯಿತು.
ಈ ತಿಂಗಳ ಆರಂಭದಲ್ಲಿ ಪೊಲೀಸರು ಲಾಹೋರ್‌ನಲ್ಲಿರುವ ಇಮ್ರಾನ್‌ ಅವರ ಖಾಸಗಿ ನಿವಾಸವನ್ನು ಸುತ್ತುವರೆದಿದ್ದರು. ವಾರಂಟ್ ಕೈಯಲ್ಲಿದ್ದರೂ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ.
ತನ್ನನ್ನು ಬಂಧಿಸುವ ಕ್ರಮವು “ಲಂಡನ್ ಯೋಜನೆ”ಯ ಭಾಗವಾಗಿದೆ ಮತ್ತು ಮುಂಚಿನ ಚುನಾವಣೆಗಳ ತನ್ನ ಬಾಯ್ಮುಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಖಾನ್ ಆರೋಪಿಸಿದ್ದಾರೆ.
ಕಳೆದ ವರ್ಷ ಪ್ರಧಾನಿ ಹುದ್ದೆಯಿಂದ ವಜಾಗೊಂಡ ನಂತರ, ಇಮ್ರಾನ್ ಖಾನ್ ಕ್ಷಿಪ್ರ ಚುನಾವಣೆಗೆ ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆಯನ್ನು ಪ್ರಧಾನಿ ಶೆಹಬಾಜ್ ಷರೀಫ್ ತಿರಸ್ಕರಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement