ಅಮೆರಿಕದ ಜಿಮ್‌ನಲ್ಲಿ ಪಂಜಾಬ್‌ ನಟನ ಮೇಲೆ ಚಾಕುವಿನಿಂದ ಹಲ್ಲೆ : ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ : ಅಮೆರಿಕದ ಜಿಮ್‌ನಲ್ಲಿ ಪಂಜಾಬಿ ನಟ ಅಮನ್ ಧಲಿವಾಲ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಚಾಕು ದಾಳಿಯಲ್ಲಿ ನಟ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿ ಆತನನ್ನು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಟ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, ದಾಳಿಕೋರನು ಜಿಮ್‌ಗೆ ನುಗ್ಗಿ ‘ಏಕ್ ಕುಡಿ ಪಂಜಾಬ್ ದಿ’ ತಾರೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ದಾಳಿ ಮಾಡಿದ್ದಾನೆ. ದಾಳಿಕೋರ, ಚಾಕುವನ್ನು ಝಳಪಿಸುತ್ತಾ, ಜಿಮ್‌ಗೆ ಹೋಗುವವರಿಗೆ ಬೆದರಿಕೆ ಹಾಕುತ್ತಿದ್ದನು ಎಂದು ವರದಿಯಾಗಿದೆ.
ದಾಳಿಯಲ್ಲಿ ನಟ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೀಡಿಯೊದಲ್ಲಿ, ನಟನಿಗೆ ಹಲವಾರು ಗಾಯಗಳು ಮತ್ತು ಮುಖ ಮೇಲೆ ರಕ್ತ ಮೆತ್ತಿಕೊಂಡಿರುವುದನ್ನು ಕಾಣಬಹುದು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟನನ್ನು ದಾಳಿಕೋರ ಹಿಡಿದುಕೊಂಡಿರುವುದು ಕಾಣಿಸುತ್ತಿದೆ ಹಾಗೂ ಆತನ ಕೈಯಲ್ಲಿ ಚಾಕುವಿದೆ. ನಂತರ ಆತ ಜಿಮ್ಮರ್‌ಗಳಿಂದ ನೀರನ್ನು ಕೇಳುತ್ತಾನೆ ಮತ್ತು ನಟನ ಮೇಲೆ ಮತ್ತಷ್ಟು ದಾಳಿ ಮಾಡುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾನೆ.

ಇಂದಿನ ಪ್ರಮುಖ ಸುದ್ದಿ :-   ಭಾರತದ ಧ್ವನಿಗಾಗಿ ಹೋರಾಡ್ತೇನೆ, ಅದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ: ಅನರ್ಹಗೊಂಡ ನಂತರ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

ಅರ್ಮಾನ್ ಗಂಭೀರವಾಗಿ ಗಾಯಗೊಂಡಿದ್ದರೂ, ಸಮಯ ಸಿಕ್ಕ ತಕ್ಷಣವೇ ದಾಳಿಕೋರನನ್ನು ನೆಲ ಮೇಲೆ ಕೆಡವಿದ್ದಾನೆ. ಕೂಡಲೇ ಜಿಮ್‌ನಲ್ಲಿದ್ದವರು ಧಾವಿಸಿ ಬಂದು ದಾಳಿಕೋರನನ್ನು ಬಿಗಿಯಾಗಿ ಹಿಡಿದರು.
ನಂತರ ದಾಳಿಕೋರನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ವರದಿಗಳ ಪ್ರಕಾರ, ಅಮೆರಿಕದ ಗ್ರ್ಯಾಂಡ್ ಓಕ್ಸ್‌ನ ಪ್ಲಾನೆಟ್ ಫಿಟ್‌ನೆಸ್ ಜಿಮ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9.20 ಕ್ಕೆ ದಾಳಿ ನಡೆದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ದೇಶದಲ್ಲಿದ್ದ 'ಗ್ರಹಿಕೆ ರಾಜಕಾರಣ'ವನ್ನು ʼಕಾರ್ಯನಿರ್ವಹಣೆ ರಾಜಕಾರಣʼವನ್ನಾಗಿ ಬದಲಾಯಿಸಿದ್ದು ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ ಪ್ರತಿಪಾದನೆ

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement