ಕೆಪಿಎಸ್‌ಸಿ ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಡಿಪಾರ್ಟ್‌ಮೆಂಟ್‌ನ ಲೆಕ್ಕ ಸಹಾಯಕರು ಪೋಸ್ಟ್‌ಗಳನ್ನು ಭರ್ತಿ ಮಾಡಲು ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಲೆಕ್ಕ ಸಹಾಯಕರ 242 ಹುದ್ದೆಗಳಿಗೆ ನೇಮಕಾತಿಗೆ ಆನ್‌ಲೈನ್ (On-line) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಆಯೋಗವು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮಗಳು ಹಾಗೂ ತಿದ್ದುಪಡಿ ನಿಯಮ 2022ರಯ ಈ ಕೆಳಕಂಡ ಉಳಿಕೆ ಮೂಲ ವೃಂದದ ಗ್ರೂಪ್ 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ (On-line) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ
ಇಲಾಖೆ ಹೆಸರು : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ಹುದ್ದೆಯ ಹೆಸರು : ಲೆಕ್ಕ ಸಹಾಯಕರು
ಹುದ್ದೆಗಳ ಸಂಖ್ಯೆ : 242 (ಉಳಿಕೆ ಮೂಲ ವೃಂದ)
ಮಾಸಿಕ ವೇತನ : 27,650-52,650 ರೂ.ಗಳು
ನೇಮಕಾತಿ ವಿಧಾನ : ಗ್ರೂಪ್ ಸಿ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ವಿದ್ಯಾರ್ಹತೆ:ಬಿಕಾಂ / ಬಿಬಿಎಂ / ಬಿಬಿಎ ಡಿಗ್ರಿಯನ್ನು ಕಡ್ಡಾಯ ಪಾಸ್ ಮಾಡಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ (ಜನರಲ್ ಕೆಟಗರಿ) ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 23-03-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 23-04-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 24-04-2023
ವೆಬ್‌ಸೈಟ್ ವಿಳಾಸ-https://www.kpsc.kar.nic.in/index.html
ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಕೆಪಿಎಸ್‌ಸಿ ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ನೋಡಲು ಹಾಗೂ ಹೆಚ್ಚಿನ ಮಾಹಿತಿಗೆ ಇಲ್ಲಿhttps://www.kpsc.kar.nic.in/Account%20Assistant%20242%20RPC.pdf ಕ್ಲಿಕ್ ಮಾಡಿ
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ.ಗಳು,
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 300 ರೂ.ಗಳು., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ 35 ರೂ. ಪಾವತಿಸಬೇಕು.
ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ 3 ಹಂತಗಳು ಇರುತ್ತವೆ.
1ನೇ ಹಂತ : ಪ್ರೊಫೈಲ್ ಕ್ರಿಯೇಟ್ / ಅಪ್‌ಡೇಟ್
2ನೇ ಹಂತ : ಅರ್ಜಿ ಸಲ್ಲಿಕೆ
3ನೇ ಹಂತ : ಅರ್ಜಿಗೆ ಶುಲ್ಕ ಪಾವತಿ ಮಾಡುವುದು.
ನಿಮ್ಮ ಕಾಮೆಂಟ್ ಬರೆಯಿರಿ