5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ಮೌಲ್ಯಾಂಕನ (ಬೋರ್ಡ್‌) ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಪರೀಕ್ಷೆ ಮಾರ್ಚ್‌ 27ರಿಂದ ಏಪ್ರಿಲ್‌ 1ರ ವರೆಗೆ ಪರೀಕ್ಷೆ ನಡೆಯಲಿದೆ.
5ನೇ ತರಗತಿ ಮಕ್ಕಳಿಗೆ ಮಾರ್ಚ್‌ 27ರಿಂದ 30ರ ವರೆಗೆ ನಡೆಯಲಿದೆ ಹಾಗೂ 8ನೇ ತರಗತಿಗೆ ಮಾರ್ಚ್‌ 27ರಿಂದ ಏಪ್ರಿಲ್‌ 1ರ ವರೆಗೆ ನಡೆಯಲಿದೆ.
ಎಲ್ಲ ಪರೀಕ್ಷೆಗಳನ್ನು 40 ಅಂಕಗಳಿಗೆ ನಡೆಸಲಾಗುತ್ತದೆ. ಮಾರ್ಚ್‌ 30ರಂದು ನಡೆಯಲಿರುವ ಗಣಿತ ವಿಷಯದ ಪರೀಕ್ಷೆ ಮಾತ್ರ ಬೆಳಗ್ಗೆ 10:30ರಿಂದ 12:30ರ ವರೆಗೆ ನಡೆಯಲಿದೆ. ಉಳಿದೆಲ್ಲ ಪರೀಕ್ಷೆಗಳು ಮಧ್ಯಾಹ್ನ 2:30ರಿಂದ 4:30ರ ವರೆಗೆ ನಡೆಯಲಿವೆ.
5ನೇ ತರಗತಿ ವೇಳಾಪಟ್ಟಿ
ಮಾ.27 – ಪ್ರಥಮ ಭಾಷೆ
ಮಾ.28 – ದ್ವಿತೀಯ ಭಾಷೆ
ಮಾ.29 – ಪರಿಸರ ಅಧ್ಯಯನ
ಮಾ.30 – ಗಣಿತ

8ನೇ ತರಗತಿ ವೇಳಾಪಟ್ಟಿ
ಮಾ.27 – ಪ್ರಥಮ ಭಾಷೆ
ಮಾ.28 – ದ್ವಿತೀಯ ಭಾಷೆ
ಮಾ.29 – ತೃತೀಯ ಭಾಷೆ
ಮಾ.30 – ಗಣಿತ
ಮಾ.31 – ವಿಜ್ಞಾನ
ಏ.1 – ಸಮಾಜ ವಿಜ್ಞಾನ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುತ್ತಿದ್ದು, ಫಲಿತಾಂಶದ ಗೌಪ್ಯತೆ ಕಾಪಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
40 ಅಂಕಗಳ ಲಿಖಿತ ಮೌಲ್ಯಾಂಕನ ನಡೆಸಲಾಗುತ್ತಿದ್ದು, 28 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು (ಎಂಸಿಕ್ಯು), 2 ಅಂಕಗಳ 5 ಪ್ರಶ್ನೆಗಳು , 3 ಅಂಕಗಳ 2 ಪ್ರಶ್ನೆಗಳು ಹಾಗೂ 4 ಅಂಕಗಳ 1 ವಿವರಣಾತ್ಮಕವಾಗಿ ಉತ್ತರಿಸುವ ಪ್ರಶ್ನೆಗಳಿರುತ್ತವೆ.
ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಮತ್ತು ಮೌಲ್ಯಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement