ಬೆಂಗಳೂರು: ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಈಗ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ(LR Shivarame Gowda) ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಬೆಂಗಳೂರಿನ ನಾಗಮಂಗಲ ನಿವಾಸಿಗಳ ಸಮಾವೇಶದಲ್ಲಿ ಸಚಿವ ಮುನಿರತ್ನ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯವಾಗಿ ಬೇಕು. ಬಿಜೆಪಿ ಪಕ್ಷ ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೇಕು. ಯಡಿಯೂರಪ್ಪ ಮುಖ್ಯಮಂತ್ರಿಗಳಿದ್ದಾಗ ಇದ್ದಾಗ ನನಗೆ ಲೋಕಸಭೆಗೆ ಬಿ ಫಾರಂ ಕೊಟ್ಟಿದ್ದರು. 1.67 ಮತ ಪಡೆದು ಆಗ ನಾನು ಸೋತೆ. ಬಳಿಕ ನಾನು ಜೆಡಿಎಸ್ಗೆ ಬಂದೆ. ಜೆಡಿಎಸ್ ನಲ್ಲಿ ನನ್ನನ್ನು ಬಳಸಿಕೊಂಡರು ಎಂದು ಶಿವರಾಮೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಬೇರೂರಬೇಕು. ಮಂಡ್ಯದಲ್ಲಿ ಕಮಲ ಅರಳಿಸಬೇಕು. ನನ್ನನ್ನೂ ಬಿಜೆಪಿಯಿಂದ ಆಹ್ವಾನಿಸಲಾಗಿದೆ. ನಾನು ಶೀಘ್ರವೇ ಬಿಜೆಪಿ ಸೇರುತ್ತೇನೆ ಎಂದು ಶಿವರಾಮೇಗೌಡ ಘೋಷಿಸಿದರು
ಸುಮಲತಾ ಅವರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾಗಮಂಗಲ ಸೇರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸ್ತೇವೆ. ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಆಳ್ವಿಕೆ ನೋಡಿದವನು. ನಾಗಮಂಗಲದ ಜನರ ಮತ ಕೇಳುವ ಹಕ್ಕು ಚೆಲುವರಾಯಸ್ವಾಮಿ, ಸುರೇಶ್ ಗೌಡರಿಗೆ ಇಲ್ಲ ಎಂದರು.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದರು. ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ