ಜಲಂಧರ್‌ನಲ್ಲಿ ಪೊಲೀಸರಿಗೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ, ಚಾಲಕ

ನವದೆಹಲಿ: ತೀವ್ರಗಾಮಿ ಬೋಧಕ ಮತ್ತು ಖಾಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ ಮತ್ತು ಚಾಲಕ ಜಲಂಧರ್‌ನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಪೋಲೀಸ್ ಸೋಮವಾರ ತಿಳಿಸಿದ್ದಾರೆ.
ಅಮೃತಪಾಲ್ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಚಾಲಕ ಹರ್‌ಪ್ರೀತ್ ಸಿಂಗ್ ಭಾನುವಾರ ತಡರಾತ್ರಿ ಮೆಹತ್‌ಪುರ ಪ್ರದೇಶದ ಗುರುದ್ವಾರದ ಬಳಿ ಶರಣಾಗಿದ್ದಾರೆ ಎಂದು ಜಲಂಧರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸ್ವರದೀಪ್ ಸಿಂಗ್ ಹೇಳಿದ್ದಾರೆ. ಅಮೃತಪಾಲ್‌ ಸಿಂಗ್‌ ಇನ್ನೂ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಸರ್ಕಾರವು ಶನಿವಾರ ಅಮೃತಪಾಲ್ ಮತ್ತು ಆತನ ಗುಂಪಿನ ‘ವಾರಿಸ್ ಪಂಜಾಬ್ ದೇ’ ವಿರುದ್ಧ ದೊಡ್ಡ ದಮನ ಕಾರ್ಯಾಚರಣೆ ಪ್ರಾರಂಭಿಸಿತು, ಶನಿವಾರ ಪೊಲೀಸರು 78 ಸದಸ್ಯರನ್ನು ಬಂಧಿಸಿದರು. ಆದಾಗ್ಯೂ, ಜಲಂಧರ್ ಜಿಲ್ಲೆಯಲ್ಲಿ ಆತನ ಕಾರನ್ನು ತಡೆದ ನಂತರ ಆತ ಕಾರು ಬಿಟ್ಟು ಪರಾರಿಯಾಗಿದ್ದಾನೆ.
ಅಮೃತಪಾಲ್ ಸಿಂಗ್ ಹುಡುಕಾಟದಲ್ಲಿ ಪೊಲೀಸರು ಭಾನುವಾರ ಪಂಜಾಬ್‌ನಾದ್ಯಂತ ಧ್ವಜ ಮೆರವಣಿಗೆ ಮತ್ತು ಹುಡುಕಾಟಗಳನ್ನು ನಡೆಸಿದರು, ಇನ್ನೂ 34 ಬೆಂಬಲಿಗರನ್ನು ಬಂಧಿಸಿದ್ದಾರೆ ಮತ್ತು ನಾಲ್ವರನ್ನು ದೂರದ ಅಸ್ಸಾಂನ ಜೈಲಿಗೆ ವರ್ಗಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ಅಮೃತ್‌ಪಾಲ್ ಮತ್ತು ಆತನ ಬೆಂಬಲಿಗರು ಬಂಧನಕ್ಕೊಳಗಾದ ವ್ಯಕ್ತಿಯನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ ವಾರಗಳ ನಂತರ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥನ ವಿರುದ್ಧದ ಪೊಲೀಸ್‌ ಕಾರ್ಯಾಚರಣೆ ಬಂದಿದೆ.
ಅಮೃತಪಾಲ್‌ ಸಿಂಗ್‌ ಮತ್ತು ಆತನ ಬೆಂಬಲಿಗರು ಅಶಾಂತಿ ಹರಡುವಿಕೆ, ಕೊಲೆಗೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಜ್ನಾಲಾದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಏತನ್ಮಧ್ಯೆ, ಭಗವಂತ್ ಮಾನ್ ಸರ್ಕಾರವು ಭಾನುವಾರ ಪಂಜಾಬ್‌ನಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ಸ್ಥಗಿತವನ್ನು ಸೋಮವಾರ ಮಧ್ಯಾಹ್ನದವರೆಗೆ ವಿಸ್ತರಿಸಿದೆ.
ಬ್ಯಾಂಕಿಂಗ್ ಸೇವೆಗಳಿಗೆ ವಿನಾಯಿತಿ ನೀಡಿದ ಅಧಿಕೃತ ಆದೇಶವು “ಯಾವುದೇ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಭಂಗವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement