ಮತ್ತೆ 9000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಅಮೆಜಾನ್

ಅಮೆಜಾನ್ 9,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ ಸಿಇಒ ಆಂಡಿ ಜಾಸ್ಸಿ ಉದ್ಯೋಗಿಗಳಿಗೆ ಈ ಬಗ್ಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಅಮೆಜಾನ್ ಕಷ್ಟದ ಸಮಯವನ್ನು ಎದುರಿಸುತ್ತಿದೆ ಮತ್ತು ವೆಚ್ಚವನ್ನು ಉಳಿಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇ-ಕಾಮರ್ಸ್ ದೈತ್ಯ ಈ ವರ್ಷದ ಜನವರಿಯಲ್ಲಿ ಸುಮಾರು 18,000 ಕಾರ್ಮಿಕರನ್ನು ವಜಾಗೊಳಿಸಿತ್ತು. ಈಗ 9,000 ಉದ್ಯೋಗಿಗಳ ವಜಾ ಸೇರಿ ಅಮೆಜಾನ್ ಒಟ್ಟು 27,000 ಜನರನ್ನು ವಜಾ ಮಾಡಿದಂತಾಗುತ್ತದೆ.
ಮುಂದಿನ ಕೆಲವು ವಾರಗಳಲ್ಲಿ ಸುಮಾರು 9,000 ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲು ನಾವು ಉದ್ದೇಶಿಸಿದ್ದೇವೆ-ಹೆಚ್ಚಾಗಿ AWS, PXT, ಜಾಹೀರಾತು ಮತ್ತು ಟ್ವಿಚ್‌ ವಿಭಾಗದಲ್ಲಿ ಇದು ನಡೆಯುತ್ತದೆ. ಇದು ಕಠಿಣ ನಿರ್ಧಾರವಾಗಿತ್ತು, ಆದರೆ ದೀರ್ಘಾವಧಿಯಲ್ಲಿ ಕಂಪನಿಗೆ ಉತ್ತಮವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಜಾಸ್ಸಿ ಹೇಳಿದ್ದಾರೆ.
ಅನಿಶ್ಚಿತ ಆರ್ಥಿಕತೆ ಮತ್ತು ಮುಂದಿನ ದಿನಗಳಲ್ಲಿ ಇರುವ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಆಯ್ಕೆ ಮಾಡಿಕೊಂಡಿದ್ದೇವೆ. ಕಂಪನಿಯು ಏಕಕಾಲದಲ್ಲಿ ಎರಡೂ ವಜಾಗಳನ್ನು ಘೋಷಿಸಲಿಲ್ಲ. ಏಕೆಂದರೆ ಶರತ್ಕಾಲದ ಕೊನೆಯಲ್ಲಿ ಎಲ್ಲಾ ತಂಡಗಳು ಈ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಪೂರ್ಣ ಮಾಡಿರಲಿಲ್ಲ ಮತ್ತು ಆದ್ದರಿಂದ ಎರಡನೇ ಸುತ್ತಿನ ವಜಾಗೊಳಿಸುವಿಕೆಗಳು ಈಗ ನಡೆಯುತ್ತಿವೆ ಎಂದು ಜಾಸ್ಸಿ ಹೇಳಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement