ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರು ಬದಲಾವಣೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರನ್ನು ಬದಲಾಯಿಸಿ ಸರ್ಕಾರ ಆದೇಶಿಸಿದ್ದು ಅದಕ್ಕೆ ಶಾಲಾ ಶಿಕ್ಷಣ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲ ಕ್ಷೇತ್ರ ಕಚೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ, ಕ್ಲಸ್ಟರ್ ಶಾಲೆಗಳು ಮತ್ತು ಕಚೇರಿಗಳ ನಾಮಫಲಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಾಲಾ ಶಿಕ್ಷಣ ಇಲಾಖೆ ಎಂದು ಹೆಸರು ಬದಲಾಯಿಸುವಂತೆ ಸೂಚಿಸಿದ್ದಾರೆ.
ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಹುದ್ದೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಎಂಬುದಾಗಿಯೂ ಬದಲಾಯಿಸಲಾಗಿದೆ.
ಅಲ್ಲದೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾ ಶಿಕ್ಷಣ ಎಂದು ಬದಲಾಯಿಸಲು ಸೂಚಿಸಲಾಗಿದೆ. ಹಾಗೂ ಶಾಲಾ ಶಿಕ್ಷಣ ಇಲಾಖೆ ಎಂಬ ಪದನಾಮವನ್ನು ಸಂಬಂಧಿಸಿದ ಎಲ್ಲಾ ಕಚೇರಿ, ಶಾಲೆಗಳ ಎಲ್ಲಾ ನಾಮಫಲಕಗಳಲ್ಲಿ ಬರೆಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಶೇರ್ ಮಾಡಿ :

  1. Dr SADANANDA HEGGADAL MATH

    ಈ ಆದೇಶದಿಂದ ಸಾರ್ವಜನಿಕರಿಗೇನು ಲಾಭ? ಸರಕಾರಕ್ಕೆ ಎಷ್ಟು ಹಣ ಉಳಿತಾಯವಾಗುತ್ತದೆ? ಹೆಸರು ಬದಲಾವಣೆಯಿಂದ ಆಗುವ ಖರ್ಚುವೆಚ್ಚಗಳೆಷ್ಟು!?
    ದಯಮಾಡಿ ಸಂಬಂಧಿಸಿದ ಇಲಾಖೆಯಿಂದ ಸ್ಪಷ್ಟೀಕರಣ ನೀಡುವಂತೆ ಸಂಬಂಧಿಸಿದ ಇಲಾಖಾ ಮುಖ್ಯಸ್ತರಿಗೆ ಆದೇಶ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಸರಕಾರದ ಪ್ರಧಾನ ಕಾರ್ಯದರ್ಶಿಗಳನ್ನು email ಮುಖಾಂತರ ಪ್ರಶ್ನಿಸಿರುವೆ. ಜೊತೆಗೆ Accountant General ಗೂ ಪತ್ರ ಬ್ರೆಯುವೆ.
    ಸರಕಾರದ ಗಣ ಮನಬಂದಂತೆ ವೆಚ್ಚಮಾಡಲು ಅಲ್ಲ! ಹೇಳುವವರೂ ಕೇಳುವವರೂ ಯಾರೂ ಇಲ್ಲವೇ!?

ನಿಮ್ಮ ಕಾಮೆಂಟ್ ಬರೆಯಿರಿ

advertisement