ಕುಮಟಾ: ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ-ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಉತ್ಸವದ ಅಂಗವಾಗಿ ಕುಮಟಾದ ಉಗಾದಿ ಉತ್ಸವ ಸಮಿತಿಯಿಂದ ಇಲ್ಲಿನ ನೆಲ್ಲೆಕೇರಿ ಮಹಾಸತಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಭಜನಾ ಸ್ಪರ್ಧೆಗಳು ನಡೆದವು.
ಉತ್ತರ ಕನ್ನಡ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಂಡಿತ ಗೌರೀಶ ಯಾಜಿ ಕೂಜಳ್ಳಿ ಅವರ ಸಂಯೋಜಿತ ಕುಮಟಾದ ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆಯಿತು. ಕುಮಟಾದ ಶಾಂತೇರಿ ಕಾಮಾಕ್ಷಿ ಭಜನಾ ತಂಡ ಹಾಗೂ ಪಂಡಿತ ಗೌರೀಶ ಯಾಜಿ ಸಂಯೋಜಿತ ಕುಮಟಾದ ಗಂಧರ್ವ ಕಲಾ ಕೇಂದ್ರ ಭಜನಾ ತಂಡ ಎರಡನೇ ಸ್ಥಾನ ಹಂಚಿಕೊಂಡವು. ತೃತೀಯ ಸ್ಥಾನವನ್ನು ಮಂಕಿಯ ಸರ್ವೇಶ್ವರಿ ಭಜನಾ ತಂಡ ಪಡೆಯಿತು. ಧಾರವಾಡದ ವಿದುಷಿ ರಾಧಾ ದೇಸಾಯಿ ಅವರು ಭಜನಾ ಸ್ಪರ್ಧೆ ಉದ್ಘಾಟಿಸಿದರು. ಧಾರವಾಡದ ವಿದುಷಿ ರಾಜಾ ದೇಸಾಯಿ, ಅಂಕೋಲಾದ ವಿದ್ವಾನ್‌ ಮಹೇಶ ಮಹಾಲೆ ಹಾಗೂ ಮಲ್ಲಾಪುರದ ಅರುಣ ಉಭಯಕರ ಅವರು ಭಜನಾ ಸ್ಪರ್ಧೆಯ ನಿರ್ಣಾಯಕರಾಗಿದ್ದರು.
ತಾಲೂಕು ಮಟ್ಟದ ಭಜನಾ ಸ್ಪರ್ಧೆಯಲ್ಲಿ ಗೌರೀಶ ಯಾಜಿ ಸಂಯೋಜಿತ ಕುಮಟಾದ ಷಡಕ್ಷರಿ ಗವಾಯಿ ಅಕಾಡೆಮಿ ತಂಡವು ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ದ್ವಿತೀಯ ಬಹುಮಾನವನ್ನು ಕುಮಟಾದ ಶಾಂತೇರಿ ಕಾಮಾಕ್ಷಿ ಭಜನಾ ತಂಡ ಹಾಗೂ ತೃತೀಯ ಬಹುಮಾನವನ್ನು ಕುಮಟಾದ ಗಂಧರ್ವ ಕಲಾ ಕೇಂದ್ರವು ಪಡೆಯಿತು. ತಾಲೂಕು ಮಟ್ಟದ ಭಜನಾ ಸ್ಪರ್ಧೆಯನ್ನು ಕುಮಟಾದ ಮಹಾಲಸಾ ದೇವಸ್ಥಾನದ ಧರ್ಮದರ್ಶಿ ಎಂ.ಬಿ.ಪೈ ಅವರು ಉದ್ಘಾಟಿಸಿದರು. ನಿರ್ಣಾಯಕರಾಗಿ ಕುಮಟಾದ ಶ್ರೀಧರ ಪ್ರಭು, ಭಟ್ಕಳದ ಉದಯ ಪ್ರಭು ಹಾಗೂ ಕವಲಕ್ಕಿಯ ಶಾರದಾ ಹೆಗಡೆ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕುಮಟಾದ ಯುಗಾದಿ ಉತ್ಸವ ಸಮಿತಿಯ ಮುರಳೀಧರ ಪ್ರಭು, ಡಾ.ಸುರೇಶ ಹೆಗಡೆ, ಎಸ್‌.ಜಿ.ನಾಯ್ಕ, ಜಿ.ಎಸ್‌.ಹೆಗಡೆ, ಪ್ರೊ. ಆನಂದ ನಾಯ್ಕ, ಸುಧಾ ಶಾನಭಾಗ ಹಾಗೂ ಸಮಿತಿಯ ಇತರ ಸದಸ್ಯರು ಇದ್ದರು. ಅರುಣ ಮಣಕಿಕರ ಹಾಗೂ ಜಯಾ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement