ಮಾರ್ಚ್‌ 26ರಂದು ಮೈಸೂರಿನಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾರೋಪ

ಮೈಸೂರು: ಜೆಡಿಎಸ್‌ನ ಪಂಚರತ್ನ  ಯಾತ್ರೆಯ ಸಮಾರೋಪ ಸಮಾರಂಭ ಮಾರ್ಚ್‌ 26ರಂದು ಮೈಸೂರಿನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನತೆಯ ಬೆಂಬಲವನ್ನು ನಾನು ಕಳೆದ 3 ತಿಂಗಳ ರಥಯಾತ್ರೆಯಲ್ಲಿ ಕಂಡಿದ್ದೇನೆ. ಅದು ಅಂತಿಮವಾಗಿ ಮೈಸೂರು ನಗರದಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಸಮಾವೇಶವಾಗಲಿದೆ ಎಂದರು.
ಮಾರ್ಚ್‌ 26ರ ಆಸುಪಾಸಿನಲ್ಲಿ ಅಥವಾ ಏಪ್ರಿಲ್ ಮೊದಲನೇ ವಾರದಲ್ಲಿ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಬಹುದೆಂದು ನಿರೀಕ್ಷೆ ಇದೆ. ಅದರ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಎಂದು ಹೇಳಿದರು.
ನಾಡಿನ ಜನತೆಯ ನಿತ್ಯದ ಸಮಸ್ಯೆಗಳನ್ನು ಗಮನಿಸಿ ಐದು ಕಾರ್ಯಕ್ರಮವನ್ನು ರಚನೆ ಮಾಡಿದ್ದೇನೆ. ಈ ಕಾರ್ಯಕ್ರಮಗಳು ಹೊಸ ಕಾರ್ಯಕ್ರಮಗಳೇನಲ್ಲ ಎಂದು ಹೇಳುತ್ತಾರೆ. ನಾನು ಕಾಂಗ್ರೆಸ್ ನೀಡುವ ಗ್ಯಾರಂಟಿ ಕಾರ್ಡ್‍ನ ಕಾರ್ಯಕ್ರಮಗಳಾಗಲಿ, ಬಿಜೆಪಿ ಸರ್ಕಾರದಲ್ಲಿ ಅವರು ಕೊಟ್ಟಂತಹ ಕಾರ್ಯಕ್ರಮಗಳ ಕುರಿತು ಮಾತನಾಡುವುದಿಲ್ಲ.
ನನ್ನ ಕಾರ್ಯಕ್ರಮದಲ್ಲಿ ಜನತೆಯ ಮುಂದೆ ಈಗಾಗಲೇ ಸುಮಾರು 86 ವಿಧಾನಸಭಾ ಕ್ಷೇತ್ರಗಳ ತಲಾ 50-60 ಹಳ್ಳಿಗಳಿಗೆ ಭೇಟಿ ಕೊಟ್ಟು ದಿನಕ್ಕೆ 50ರಿಂದ 100 ಕಿ.ಮೀ ಪ್ರವಾಸ ಮಾಡಿದ್ದೇನೆ. ನನ್ನ ಕಾರ್ಯಕ್ರಮ ಅನುಷ್ಠಾನಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement