75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ…: ಕೇಂದ್ರವು ದೆಹಲಿ ಬಜೆಟ್ ಮಂಡನೆ ತಡೆಹಿಡಿದ ನಂತರ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಅನುಮೋದನೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೇಶದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಬಜೆಟ್ ಮಂಡನೆಯನ್ನು ತಡೆಹಿಡಿಯಲಾಗಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನೀವು ದೆಹಲಿಯ ನಿವಾಸಿಗಳನ್ನು ದ್ವೇಷಿಸುತ್ತೀರಾ ಎಂದು ಪ್ರಧಾನಿಯನ್ನು ಕೇಳಿರುವ ಅವರು, ಬಜೆಟ್ ಮಂಡನೆಗೆ ಸಮ್ಮತಿ ಕೊಡುವ ಮೊದಲು ಮೂಲಸೌಕರ್ಯಕ್ಕಿಂತ ಜಾಹಿರಾತುಗಳ ಮೇಲಿನ ವೆಚ್ಚ ಏಕೆ ಹೆಚ್ಚಿದೆ ಎಂಬುದರ ಕುರಿತು ಕೇಂದ್ರವು ದೆಹಲಿ ಸರ್ಕಾರದಿಂದ ಸ್ಪಷ್ಟೀಕರಣ ಕೋರಿದ ಒಂದು ದಿನದ ನಂತರ ಈ ಪತ್ರ ಬಂದಿದೆ. ಇಂದು ಮಂಗಳವಾರ (ಮಾರ್ಚ್ 21) ದೆಹಲಿ ಬಜೆಟ್ ಮಂಡನೆಯಾಗಬೇಕಿತ್ತು.
“ನೀವು ದೆಹಲಿಯವರಾದ ನಮ್ಮ ಮೇಲೆ ಏಕೆ ಕೋಪಗೊಂಡಿದ್ದೀರಿ?” ದೆಹಲಿಯ ಜನರು ತಮ್ಮ ಬಜೆಟ್ ಅನ್ನು ಅಂಗೀಕರಿಸಲು ಕೈ ಜೋಡಿಸಿ ಪ್ರಧಾನಿಯನ್ನು ವಿನಂತಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 18 ಕಾರ್ಯಕ್ರಮವೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಮಾತನಾಡಿರುವ ವಿಡಿಯೋವನ್ನು ಆಪ್ ಸೋಮವಾರ ಹಂಚಿಕೊಂಡಿದೆ. ಮಂಗಳವಾರ (ಮಾರ್ಚ್ 21) ದೆಹಲಿ ಬಜೆಟ್ ಮಂಡನೆಯಾಗುವುದಿಲ್ಲ ಎಂದು ಅದರಲ್ಲಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ಗುಂಡಾಗಿರಿಯನ್ನು ಆಶ್ರಯಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದರು ಮತ್ತು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಬಜೆಟ್ ಅನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.
ದೆಹಲಿ ಸರ್ಕಾರವು ಸ್ಪಷ್ಟೀಕರಣವನ್ನು ನೀಡದಿರುವವರೆಗೆ, ಬಜೆಟ್‌ಗೆ ಅನುಮೋದನೆ ಗೃಹ ಸಚಿವಾಲಯದ ಮುಂದೆ (MHA) ಮುಂದೆ ಬಾಕಿ ಉಳಿಯಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement