ಕಾಂಗ್ರೆಸ್‌ ಸೇರಿದ ಬಾಬುರಾವ್ ಚಿಂಚನಸೂರು

posted in: ರಾಜ್ಯ | 1

ಬೆಂಗಳೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿ ವಿಧಾನ ಪರಿಷತ್‌ ಸ್ಥಾನಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದ್ದು, ಇಂದು, ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಸಮ್ಮುಖದಲ್ಲಿ ಬಾಬುರಾವ್ ಚಿಂಚನಸೂರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಾಬುರಾವ್ ಚಿಂಚನಸೂರ್’ ಗುರುಮಿಠಕಲ್ ಕ್ಷೇತ್ರದ ಚುನಾವಣಾ ಟಿಕೆಟ್ ಕೇಳಿದ್ದರು. ಆದರೆ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ಕೊಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಪರಿಷತ್ ಸದಸ್ಯಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಬಾಬುರಾವ್ ಚಿಂಚನಸೂರ ‘ ನಾನು ಅವಕಾಶವಾದಿ ರಾಜಕಾರಣಿಯಲ್ಲ, 2023 ರಲ್ಲಿ ಚಿಂಚನಸೂರ ಸಾಮರ್ಥ್ಯ ಏನೆಂದು ಗೊತ್ತಾಗಲಿದೆ ಎದು ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಶಾಕ್ : ಜೂನ್‌1 ರಿಂದಲೇ ವಿದ್ಯುತ್ ದರ ಹೆಚ್ಚಳ...!

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

  1. ಸುರಾಹು

    ಒಳ್ಳೆಯ ಕೆಲಸ ಮಾಡಿದ್ದರೆ ಅವರು ಪ್ರತಿನಿಧಿಸುವ ಕೋಳಿ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸುವೆ ವೆಂದು ಅವರನ್ನು ಬಿಜೆಪಿ ಯವರು ಪುಸಲಾಯಿಸಿ ಕರೆದುಕೊಂಡು ಹೊಗಿದ್ದರು ೫ವರ್ಷ. ಸರ್ಕಾರದ ಅವಧಿ ಮುಗಿದೇ ಹಿಯಿತು ಆದರೂಸಹ ಅವರ ಸಮಾಜವನ್ನು ಎಸ್ಣಿ ಗೆ ಸೇರಿಸಲಿಲ್ಲ , ಈ ವಿಷಯದ ಕುರಿತು ಬಾಬುರಾವ ಚಿಂಚನಸೂರ ಅವರು ಬಿಜೆಪಿ ಯವರನ್ನು ಕೇಳಿದಾಗ ವಯಕ್ತಿಕವಾಗಿ ನಿನಗೆ ಎಮ್ ಎಲ್ ಸಿ ಮಾಡಿದೇವೆ ನಿನ್ನ ಮನೆಯವರಿಗೆ ಸೆಂಟ್ರಲ್ ಫೂಡ್ ಬೋರ್ಡ್ ಮೆಂಬರ ಮಾಡಿದೇವೆ ಈಗ ನಿನಗೇಕೆ ನಿನ್ನ ಸಮಾಜವರ ಉಸಾಬರಿ ಸುಮ್ಮನೆ ಸಿಕ್ಕ ಅಧಿಕಾರವನ್ನು ಮಾಜಾ ಮಡಿ ಎಂದು ವರಿಷ್ಟರು ಹೇಳಿದರು ಆದರೆ ಚಿಂಚನಸೂರ್ ಸಾಹೇಬರು ನಾನು ಬಂದಿದ್ದೆ ನನ್ನ ಸಮಾಜಕ್ಕಾಗಿ ನನ್ನ ಸಮಾಜದ ಒಳಿತಾಗೋದಿಲ್ಲ ಅಂದ್ರೆ ನಾನು ಈ ಕೂಡಲೆ ನನ್ನ ಮತ್ತು ನನ್ನ ಮಡದಿಯ ಎಲ್ಲ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಸಮಾಜದ ಒಳಿತಿಗಾಗಿ ಹೊರಾಡುವ ಜನನಾಯಕ ನೆಂದು ಮತ್ತೊಮ್ಮೆ ಸಾಬೀತು ಪಡಿಅಇದ್ದಾರೆ. ಅವರಿಗೆ ಅಭಿನಂದನೆಗಳು.

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement