ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆ ಕುಸಿದುಬಿದ್ದು ಸಾವು : ಅತಿಯಾದ ಡಿಜೆ ಶಬ್ದಕ್ಕೆ ಮೆದುಳು ಸ್ಟ್ರೋಕ್ ಆಯ್ತೆ..?

ತೆಲಂಗಾಣದ ಖಮ್ಮಂ ಜಿಲ್ಲೆಯ ಅಲ್ಲೀಪುರಂ ಪಟ್ಟಣದಲ್ಲಿ ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮಾರ್ಚ್ 16, ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಮ್ಮಂ ಜಿಲ್ಲೆಯ ರಘುನಾಥಪಾಲೆಂ ಮಂಡಲದ ವಿ ವೆಂಕಟಾಯಪಾಲೆಂ ನಿವಾಸಿಯಾಗಿದ್ದ ರಾಣಿ ಎಂಬ ಮಹಿಳೆ ಸಂಬಂಧಿಕರೊಬ್ಬರ ಮದುವೆಗೆ ಖಮ್ಮಂಗೆ ಬಂದಿದ್ದರು. ರಾಣಿ ಇತರ ಸಂಬಂಧಿಕರೊಂದಿಗೆ ಡಿಜೆ ಸಂಗೀತಕ್ಕೆ ನೃತ್ಯ ಮಾಡಿದಳು.
ವಧುವನ್ನು ತನ್ನ ಪತಿಯೊಂದಿಗೆ ಮನೆಗೆ ಕಳುಹಿಸುವ ಆಚರಣೆಯಾದ ‘ಅಪ್ಪಗಿಂಥಳು’ ಸಮಾರಂಭದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗ ರಾಣಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಆಕೆಯ ಕುಸಿತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಭಾರೀ ಡಿಜೆ ಸೌಂಡ್‌ ಕಾರಣಕ್ಕೆ ಾದರಿಂದ ಹೊರಹೊಮ್ಮುವ ಭಾರೀ ವೈಬ್ರೇಶನ್‌ಗೆ ಮೆದುಳಿನ ಪಾರ್ಶ್ವವಾಯುವಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

https://twitter.com/RameshVaitla/status/1637407833393070081?ref_src=twsrc%5Etfw%7Ctwcamp%5Etweetembed%7Ctwterm%5E1637407833393070081%7Ctwgr%5Ea2f646e7278f9df50b78fb268755dd8e63ee4766%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbrainstroke-to-the-word-dj-woman-dies-after-collapsing-while-dancing%2F

ಈಗ ಯಾವುದೇ ಸಮಾರಂಭದಲ್ಲಿ ಡಿಜೆ ಸೌಂಡ್‌ ಹಾಕುವುದು ವಾಡಿಕೆಯಾಗಿದೆ. ಮದುವೆ ಮೆರವಣಿಗೆಯಲ್ಲಿ ಡಿಜೆ ಕಡ್ಡಾಯವಾಗಿದೆ. ಅನೇಕರು ಡಿಜೆ ಬಾಕ್ಸ್‌ಗಳ ಮುಂದೆ ತಮ್ಮನ್ನು ತಾವು ಮರೆತು ಕುಣಿದು ಕುಪ್ಪಳಿಸಿತ್ತಾರೆ. ಸಂಗೀತ ಎಷ್ಟೇ ಚೆನ್ನಾಗಿದ್ದರೂ ಮಿತಿ ಮೀರಿ ವಾಲ್ಯೂಮ್ ಹೆಚ್ಚಿಸಿದರೆ ಅದು ಮಾರಕವಾಗಬಹುದು. ಯಾಕೆಂದರೆ ಅದರ ತರಂಗಗಳು ವಿಶೇಷವಾಗಿ ಹೃದಯಕ್ಕೆ ಹಾನಿಕಾರಕವಾಗಬಹುದಾಗಿದೆ. ಯಕೆಂದರೆ ಇಂಥದ್ದೇ ಘಟನೆಯಲ್ಲಿ ಅತಿಯಾಗಿ ಡಿಜೆ ಸೌಂಡ್‌ ಹಾಕಿದ ನಂತರ ಉತ್ತರ ಪ್ರದೇಶದಲ್ಲಿ ವರನೊಬ್ಬ ಮದುವೆ ಮಂಟಪದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದ. ಆತ ತನಗೆ ತೊಂದರೆಯಾಗುತ್ತಿದೆ ಎಂದು ಡಿಜೆ ಸೌಂಡ್‌ಗೆ ಆಕ್ಷೇಪ ವ್ಯಕ್ತಪಡಿಸಿದರೂ ಆತನ ಮಾತನ್ನು ಯಾರೂ ಕೇಳಲಿಲ್ಲ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement