ಶಿಕ್ಷೆ ವಿಚಿತ್ರ … ಆದರೆ ಶಿಕ್ಷೆಯ ನಂತರ ಕಾನೂನಿನ ಅಡಿಯಲ್ಲಿ ರಾಹುಲ್‌ ಗಾಂಧಿ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿದ್ದಾರೆ: ಕಪಿಲ್ ಸಿಬಲ್

ನವದೆಹಲಿ : ಗುಜರಾತ್‌ನ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ರಾಹುಲ್ ಗಾಂಧಿ ಸ್ವಯಂಚಾಲಿತವಾಗಿ ಲೋಕಸಭೆ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ ಎಂದು ಖ್ಯಾತ ವಕೀಲ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗಾಗಿ ಗುಜರಾತ್‌ನ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರಿಗೆ ಜಾಮೀನು ನೀಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಶಿಕ್ಷೆಯು ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿತ್ತದೆಯೇ ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಈ ಮಧ್ಯೆ ಕಬಿಲ್‌ ಸಿಬಲ್‌ ಅವರು ಎನ್‌ಡಿಟಿವಿ ಜೊತೆ ಮಾತನಾಡುವಾಗ ಹೀಗೆ ಹೇಳಿದ್ದಾರೆ.
ಕಾಂಗ್ರೆಸ್‌ನ ಮಾಜಿ ನಾಯಕ ಮತ್ತು ದೇಶದ ಪ್ರಮುಖ ವಕೀಲರಲ್ಲಿ ಒಬ್ಬರಾದ ಕಪಿಲ್‌ ಸಿಬಲ್ ಅವರು ರಾಹುಲ್‌ ಗಾಂಧಿ ಕಾನೂನಿನ ಅಡಿಯಲ್ಲಿ ಅನರ್ಹರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಶಿಕ್ಷೆಯೇ “ವಿಚಿತ್ರ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದು (ನ್ಯಾಯಾಲಯ) ಶಿಕ್ಷೆಯನ್ನು ಅಮಾನತುಗೊಳಿಸಿದರೆ ಸಾಕಾಗುವುದಿಲ್ಲ. ಅಮಾನತು ಅಥವಾ ಶಿಕ್ಷೆಗೆ ತಡೆ ನೀಡಬೇಕಾಗುತ್ತದೆ. ಶಿಕ್ಷೆಗೆ ತಡೆ ನೀಡಿದರೆ ಮಾತ್ರ ಅವರು (ರಾಹುಲ್ ಗಾಂಧಿ) ಸಂಸತ್ತಿನ ಸದಸ್ಯರಾಗಿ ಉಳಿಯಬಹುದು ಎಂದು ಕಪಿಲ್‌ ಸಿಬಲ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಯಾವುದೇ ಅಪರಾಧದಲ್ಲಿ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದರೆ ಆ ಸ್ಥಾನ ಖಾಲಿ ಇರುತ್ತದೆ ಎಂದು ಕಾನೂನು ಹೇಳುತ್ತದೆ. ಕಾನೂನಿಗೆ ಅದು ಅಗತ್ಯವಾಗಿರುತ್ತದೆ ಮತ್ತು ಸ್ವಾಭಾವಿಕವಾಗಿ ಸ್ಪೀಕರ್ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ” ಎಂದು ಅವರು ಹೇಳಿದರು.
2013 ರಲ್ಲಿ ಲಿಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, “ಯಾವುದೇ ಸಂಸದರು, ಶಾಸಕರು ಅಥವಾ ವಿಧಾನ ಪರಿಷತ್‌ ಸದಸ್ಯರು ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮತ್ತು ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದರೆ ತಕ್ಷಣವೇ ಜಾರಿಗೆ ಬರುವಂತೆ ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ನ್ಯಾಯಾಲಯವು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ಅನ್ನು ರದ್ದುಗೊಳಿಸಿದೆ, ಇದು ಚುನಾಯಿತ ಪ್ರತಿನಿಧಿಗಳು ತಮ್ಮ ಅಪರಾಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳು ಅವಕಾಶ ಮಾಡಿಕೊಟ್ಟಿತ್ತು ಮತ್ತು ಸುಪ್ರೀಂ ಕೋರ್ಟ್‌ ಅದನ್ನು “ಅಸಂವಿಧಾನಿಕ” ಎಂದು ಕರೆದಿದೆ.
“ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ, ಅವರನ್ನು ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸುವುದು – ಇದು ಸಂಪೂರ್ಣವಾಗಿ ವಿಚಿತ್ರವಾಗಿದೆ ಎಂದು ಕಪಿಲ್‌ ಸಿಬಲ್‌ ಹೇಳಿದ್ದಾರೆ. ರಾಹುಲ್‌ ಗಾಂಧಿಯವರ ಹೇಳಿಕೆಯು ಜಾತಿ ಮತ್ತು ಸಮುದಾಯಕ್ಕೆ ವಿರುದ್ಧವಾಗಿದೆ ಎಂಬ ಬಿಜೆಪಿ ನಿಲುವಿನ ಬಗ್ಗೆ ಕೇಳಿದಾಗ, “ಯಾವ ಸಮುದಾಯ? ಅದು ವ್ಯಕ್ತಿಯ ವಿರುದ್ಧದ ಹೇಳಿಕೆ. ಬಿಜೆಪಿಯವರು ಏನು ಬೇಕಾದರೂ ಹೇಳಬಹುದು, ಆದರೆ ನಾನು ನಿಮಗೆ ಹೇಳುತ್ತಿದ್ದೇನೆ ಅದು ವ್ಯಕ್ತಿಯ ವಿರುದ್ಧವಾಗಿತ್ತು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

ತನ್ನ ತೀರ್ಪಿನಲ್ಲಿ, ಸೂರತ್ ನ್ಯಾಯಾಲಯವು ಗಾಂಧಿಯನ್ನು “ಸುಪ್ರೀಂಕೋರ್ಟ್ ಎಚ್ಚರಿಸಿದ್ದರೂ ಮತ್ತು ಸಲಹೆ ನೀಡಿದ್ದರೂ”, ಅವರ ನಡವಳಿಕೆಯಲ್ಲಿನ ಬದಲಾವಣೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಆರೋಪಿಯು ಸಂಸದನ ಸಾಮರ್ಥ್ಯದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ಮತ್ತು ಸಮಾಜದ ಬಹುಭಾಗದ ಮೇಲೆ ಪರಿಣಾಮ ಬೀರುವ ಸಂಸದನಾಗಿದ್ದಾನೆ ಮತ್ತು ಆದ್ದರಿಂದ ಈ ಅಪರಾಧದ ಪರಿಣಾಮಗಳು ಈ ಪ್ರಕರಣದಲ್ಲಿ ಹೆಚ್ಚು ಸಮಗ್ರವಾಗಿವೆ. ಆತನಿಗೆ ಕಡಿಮೆ ಶಿಕ್ಷೆಯನ್ನು ನೀಡುವುದು ಕೆಟ್ಟ ಪರಂಪರೆಗೆ ಕಾರಣವಾಗುತ್ತದೆ. ಸಮಾಜಕ್ಕೆ ಋಣಾತ್ಮಕ ಸಂದೇಶ ನೀಡುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಆರೋಪಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಎಲ್ಲ ಕಳ್ಳರೂ ಮೋದಿ ಎಂಬ ಸಾಮಾನ್ಯ ಸರ್‌ನೇಮ್ ಹೊಂದಿರುವುದು ಹೇಗೆ?” ಎಂದು ಕುಚೋದ್ಯ ಮಾಡಿದ್ದರು. ಈ ಮೂಲಕ ನೀರವ್ ಮೋದಿ, ಲಲಿತ್ ಮೋದಿ ಅವರ ಜತೆ ಪ್ರಧಾನಿ ನರೇಂದ್ರ ಮೊದಿ ಅವರೂ ಸೇರಿಸಿದ್ದಾರೆ ಎಂದು ಟೀಕಿಸಿದ್ದರು.
ನನ್ನ ಬಳಿ ಒಂದು ಪ್ರಶ್ನೆ ಇದೆ. ನೀರವ್ ಮೋದಿ ಇರಬಹುದು, ಲಲಿತ್ ಮೋದಿ ಇರಬಹುದು ಅಥವಾ ನರೇಂದ್ರ ಮೋದಿ ಇರಬಹುದು. ಎಲ್ಲ ಕಳ್ಳರ ಹೆಸರಿನಲ್ಲಿಯೂ ಮೋದಿ ಎಂದು ಏಕೆ ಇದೆ? ಅಂತಹ ಇನ್ನೂ ಎಷ್ಟು ಮೋದಿಗಳು ಹೊರಗೆ ಬರಬಹುದು ಎಂದು ನಮಗೆ ಗೊತ್ತಿಲ್ಲ” ಎಂದು ಲೇವಡಿ ಮಾಡಿದ್ದರು.
ಈ ತೀರ್ಪಿನ ವಿರುದ್ಧ ಗಾಂಧಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. 20 ನಿಮಿಷಗಳ ವಿಚಾರಣೆಯ ನಂತರ ನ್ಯಾಯಾಲಯವು ಹೇಗೆ ಕಠಿಣ ಶಿಕ್ಷೆಯನ್ನು ನೀಡುತ್ತದೆ ಎಂದು ಪಕ್ಷವು ಪ್ರಶ್ನಿಸಿದೆ.

ಪ್ರಮುಖ ಸುದ್ದಿ :-   ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ...! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement