ಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ತೇಜಸ್ವಿ ಯಾದವ್

ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇಂದು, ಶನಿವಾರ ದೆಹಲಿಯಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಸಿಬಿಐ ಪ್ರಧಾನ ಕಚೇರಿಗೆ ಆಗಮಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ತಿಂಗಳು ಯಾದವ್ ಅವರನ್ನು ಬಂಧಿಸುವುದಿಲ್ಲ ಎಂದು ಸಿಬಿಐ ಕಳೆದ ವಾರ ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು.
ತೇಜಸ್ವಿ ಯಾದವ್‌ ಅವರ ವಕೀಲ ಮಣಿಂದರ್ ಸಿಂಗ್ ಪ್ರಕಾರ, ನಡೆಯುತ್ತಿರುವ ಬಿಹಾರ ವಿಧಾನಸಭೆ ಅಧಿವೇಶನವು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿರುವುದರಿಂದ ಯಾದವ್ ಅವರು ಫೆಡರಲ್ ಏಜೆನ್ಸಿಗೆ ಹಾಜರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದರು. ಮಾರ್ಚ್ 25 ರಂದು ಬೆಳಿಗ್ಗೆ 10:30 ಕ್ಕೆ ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ತನಿಖಾಧಿಕಾರಿಯ ಮುಂದೆ ತೇಜಸ್ವಿ ಯಾದವ್ ಹಾಜರಾಗಲಿದ್ದಾರೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಶನಿವಾರದಂದು ವಿಧಾನಸಭೆಯನ್ನು ಕರೆಯಲಾಗುವುದಿಲ್ಲ ಮತ್ತು ಯಾದವ್ ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾರ್ಚ್‌ನಲ್ಲಿ ಯಾವುದೇ ಶನಿವಾರದಂದು ಏಜೆನ್ಸಿಯ ಮುಂದೆ ಹಾಜರಾಗಬಹುದು ಎಂದು ಸಿಬಿಐ ಪರ ವಕೀಲ ಡಿಪಿ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು. ತೇಜಸ್ವಿ ಯಾದವ್‌ ಅವರು ತನ್ನ ವಿರುದ್ಧ ಫೆಬ್ರವರಿ 28, ಮಾರ್ಚ್ 4 ಮತ್ತು ಮಾರ್ಚ್ 11 ರಂದು ನೀಡಲಾದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.
ಉದ್ಯೋಗಕ್ಕಾಗಿ ಭೂ ಹಗರಣದ ಪ್ರಕರಣದಲ್ಲಿ ಮಾರ್ಚ್ 15 ರಂದು, ವಿಶೇಷ ಸಿಬಿಐ ನ್ಯಾಯಾಲಯವು ಯಾದವ್ ಅವರ ತಂದೆ ಲಾಲು ಪ್ರಸಾದ್, ತಾಯಿ ರಾಬ್ರಿ ದೇವಿ -ಸಹೋದರಿ ಮಿಸಾ ಭಾರತಿ ಮತ್ತು ಇತರರಿಗೆ ಜಾಮೀನು ನೀಡಿತು.
ಏಜೆನ್ಸಿಯ ನಡೆಯುತ್ತಿರುವ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಹೊಸ ಒಳಹರಿವಿನ ಆಧಾರದ ಮೇಲೆ “ಹೆಚ್ಚಿನ ತನಿಖೆ” ಯ ಭಾಗವಾಗಿ ಆರೋಪಿಗಳ ಹೊಸ ಸುತ್ತಿನ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2004 ರಿಂದ 2009 ರ ಯುಪಿಎ ಸರ್ಕಾರದಲ್ಲಿ ಲಾಲು ಪ್ರಸಾದ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆ ಇಲ್ಲದೆ, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ನೆಚ್ಚಿನ ಅಭ್ಯರ್ಥಿಗಳನ್ನು ರೈಲ್ವೆಯಲ್ಲಿ ನೇಮಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ರೈಲ್ವೆ ಉದ್ಯೋಗದ ಸಲುವಾಗಿ ಅಭ್ಯರ್ಥಿಗಳು ನೇರವಾಗಿ ಅಥವಾ ಅವರ ಹತ್ತಿರದ ಕುಟುಂಬದ ಸದಸ್ಯರ ಮೂಲಕ ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement