15 ವರ್ಷಗಳ ಹಿಂದಿನ ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಹಚ್ಚೆ

ಮುಂಬೈ: 15 ವರ್ಷಗಳಿಂದ ತಪ್ಪಿಸಿಕೊಂಡಿದ್ದ ಹಾಗೂ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ಒಂದೇ ಒಂದು ಸುಳುವಿನ ಮೇಲೆ ಪತ್ತೆ ಹಚ್ಚಿದ್ದಾರೆ…! ಆತನನ್ನು ಸೆರೆ ಹಿಡಿಯಲು ಹಚ್ಚೆ ಸಹಾಯ ಮಾಡಿದೆ.
63 ವರ್ಷದ ಆರ್ಮುಗಂ ಪಲ್ಲಸ್ವಾಮಿ ದೇವೇಂದ್ರ ಮುದಲಿಯಾರ 15 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ. ಈತನನ್ನು ದಕ್ಷಿಣ ಮುಂಬೈನಲ್ಲಿ ಬಂಧಿಸಲಾಗಿದೆ. ಈತ ನಕಲಿ ಗುರುತಿನ ಚೀಟಿ ಬಳಸಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಮುಂಬೈ ಮತ್ತು ಗುಜರಾತ್‌ನಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಕಳ್ಳತನಕ್ಕಾಗಿ 2008ರಲ್ಲಿ ರಫಿ ಅಹ್ಮದ್ ಕಿದ್ವಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಬೇಕಾಗಿದ್ದ. ಆದರೆ ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಸ್ಥಳೀಯ ನ್ಯಾಯಾಲಯವು ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಿತ್ತು.
ಆರಂಭದಲ್ಲಿ ಆತ ಮುಂಬೈ ತೊರೆದು ತಮಿಳುನಾಡಿಗೆ ಪರಾರಿಯಾಗಿದ್ದಾನೆ ಅಥವಾ ಸತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಆದರೂ ಪೊಲೀಸರು ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದರು. ಅವರು ಮಾಹಿಮ್, ಕಲ್ಯಾಣ್ ಮತ್ತು ಭಾಂಡೂಪ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆತನನ್ನು ಹುಡುಕಲು ಪ್ರಾರಂಭಿಸಿದರು.
ಹಿಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ತನಿಖಾಧಿಕಾರಿಗಳು ಮುದಲಿಯಾರ್ ಕೈಯಲ್ಲಿ ಹಚ್ಚೆ ಮತ್ತು ಆತನ ಸಹಿ ಇರುವುದನ್ನು ಪತ್ತೆ ಮಾಡಿದ್ದರು. ಈ ವಿವರಗಳೊಂದಿಗೆ ಆತನ ಹುಡುಕಾಟ ಆರಂಭಿಸಿದ ಅವರು ಆತನನ್ನು ಕೊನೆಗೂ ಪತ್ತೆಹಚ್ಚಿದರು ಮತ್ತು ಕೋಟೆ ಪ್ರದೇಶದಲ್ಲಿ ಬಂಧಿಸಿದರು. ಆತನ ಕೈ ಮೇಲಿದ್ದ ಟ್ಯಾಟೂ ಮತ್ತು ಸಹಿ ಎರಡನ್ನೂ ಪರಿಶೀಲಿಸಿದ ನಂತರ ಆತನನ್ನು ಕಂಬಿಗಳ ಹಿಂದೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement