ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ರಾಜಕೀಯಕ್ಕೆ ಎಂಟ್ರಿ

ನವದೆಹಲಿ: ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ದೆಹಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಂಡಿದ್ದು, ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬಾನ್ಸುರಿ ಸ್ವರಾಜ್ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡುತ್ತಾರೆ. ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚದೇವ ಅವರು ರಾಜ್ಯ ಘಟಕದಲ್ಲಿ ತಮ್ಮ ಮೊದಲ ನೇಮಕಾತಿಯಲ್ಲಿ, ಪಕ್ಷದ ಪೂರ್ಣಾವಧಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಬಾನ್ಸುರಿ ಸ್ವರಾಜ್ ಅವರನ್ನು ಕಾನೂನು ಕೋಶದ ಸಹ ಸಂಚಾಲಕರನ್ನಾಗಿ ನೇಮಿಸಿದರು.
ಶುಕ್ರವಾರ ನೀಡಿದ ಪತ್ರದಲ್ಲಿ, ಸ್ವರಾಜ್ ಅವರ ನೇಮಕವು ತಕ್ಷಣದಿಂದ ಜಾರಿಗೆ ಬರಲಿದೆ ಮತ್ತು ಅವರು ಬಿಜೆಪಿಯನ್ನು ಬಲಪಡಿಸುತ್ತಾರೆ ಎಂದು ಆಶಿಸಿರುವುದಾಗಿ ಸಚದೇವ ಹೇಳಿದ್ದಾರೆ. ಅವರು ಅರ್ಹ ವಕೀಲರಾಗಿದ್ದಾರೆ ಮತ್ತು ಈ ಹಿಂದೆಯೂ ಕಾನೂನು ವಿಷಯಗಳಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತಿದ್ದರು ಎಂದು ಸ್ವರಾಜ್ ಹೇಳಿದರು.
ದೆಹಲಿ ಬಿಜೆಪಿಯ ಕಾನೂನು ವಿಭಾಗದ ಸಹ ಸಂಚಾಲಕನಾಗಿ ಪಕ್ಷಕ್ಕೆ ಹೆಚ್ಚು ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಔಪಚಾರಿಕವಾಗಿ ಅವಕಾಶ ನೀಡಲಾಗಿದೆ ಎಂದು ಬಾನ್ಸುರಿ ಸ್ವರಾಜ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ʼಒಂದು ವರ್ಷ ಶಾಂತಿ ಕದಡುವಂತಿಲ್ಲ’ : ಸಿಜೆಪಿಯ ಅಭಿಜೀತ ದೀಪ್ಕೆ, ಸೌರವ ದಾಸ್, ಅಶುತೋಷ ರಂಕಾಗೆ ಷರತ್ತುಬದ್ಧ ಬಿಡುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement