ಖಾತೆಯನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಮೊದಲು ಸಾಲಗಾರರು ಹೇಳುವುದನ್ನೂ ಆಲಿಸಬೇಕು : ಸುಪ್ರೀಂ ಕೋರ್ಟ್

ನವದೆಹಲಿ : ಬ್ಯಾಂಕ್‌ಗಳು ಖಾತೆಗಳನ್ನು ವಂಚನೆ ಎಸಗಿರುವ ಖಾತೆ ಎಂದು ಘೋಷಿಸುವ ಮೊದಲು ಸಾಲಗಾರರ ಮಾತನ್ನೂ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು, ಸೋಮವಾರ ಹೇಳಿದೆ.
ಖಾತೆಯನ್ನು ವಂಚನೆ ಎಂದು ಘೋಷಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ, ಹಾಗೂ ಕೇಂದ್ರವು ಪ್ರಶ್ನಿಸಿದ 2020 ರ ತೆಲಂಗಾಣ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ಆದ್ದರಿಂದ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸ್ಟರ್ ಸುತ್ತೋಲೆಯ ಅಡಿಯಲ್ಲಿ ಬ್ಯಾಂಕ್‌ಗಳು ಸಾಲಗಾರರ ಹೇಳುವುದನ್ನು ಆಲಿಸಿಯೇ ಆದೇಶ ನೀಡಬೇಕು ಎಂಬ ಅಂಶವನ್ನು ಇಲ್ಲಿ ಅನ್ವಯಿಸಬೇಕು. ಸಾಲ ಪಡೆದಾತನ ಖಾತೆಗಳನ್ನು ನಿರ್ಬಂಧಿಸುವ ಮುನ್ನ ವಿಚಾರಣೆ ನಡೆಸುವ ಅಗತ್ಯವಿದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಹೇಳಿದೆ.

ನ್ಯಾಯಾಲಯವು “ಆಡಿ ಆಲ್ಟರ್ಮ್ ಪಾರ್ಟೆಮ್” ತತ್ವದ ಬಗ್ಗೆ ಒತ್ತಿಹೇಳಿತು, ಅಂದರೆ ಮಾಸ್ಟರ್ ಸುತ್ತೋಲೆಯೊಂದಿಗೆ ಇನ್ನೊಂದು ಪಕ್ಷವನ್ನು ಕೇಳಬೇಕು ಎಂದು ಅದು ಒತ್ತಿ ಹೇಳಿತು. ಸಾಂಸ್ಥಿಕ ಹಣ ಪಡೆಯದಂತೆ ಸಾಲಗಾರರಿಗೆ ನಿರ್ಬಂಧ ವಿಧಿಸುವುದು ಅವರ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಅವರನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ಇದು ಸಮನಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಂಚನೆ ಖಾತೆಗಳ ಕುರಿತಂತೆ ಸಾಲಗಾರನ ವಾದ ಆಲಿಸಿಯೇ ಆದೇಶ ನೀಡಬೇಕು ಎಂಬ ನೈಸರ್ಗಿಕ ನ್ಯಾಯ ತತ್ವವನ್ನು ಆರ್‌ಬಿಐ ಪ್ರಧಾನ ಸುತ್ತೋಲೆಯೊಟ್ಟಿಗೆ ಓದಬೇಕು ಎಂದು ಪೀಠ ತೀರ್ಪು ನೀಡಿತು. ಆದರೆ ಎಫ್‌ಐಆರ್‌ ದಾಖಲಿಸುವ ಮುನ್ನ ವಿಚಾರಣೆಗೆ ಯಾವುದೇ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿತು
ತೆಲಂಗಾಣ ಹೈಕೋರ್ಟ್ ತೀರ್ಪಿಗೆ ವಿರುದ್ಧವಾದ ಗುಜರಾತ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement