ಜಿಯೋ ಫೈಬರಿನಿಂದ ಹೊಸ ಬ್ರಾಡ್‌ಬ್ಯಾಂಡ್ ಬ್ಯಾಕ್-ಅಪ್ ಪ್ಲಾನ್ ಬಿಡುಗಡೆ

ಮುಂಬೈ : ಹೊಸ ಹೋಮ್ ಬ್ರಾಡ್‌ಬ್ಯಾಂಡ್ “ಬ್ಯಾಕ್-ಅಪ್ ಪ್ಲಾನ್” ಅನ್ನು ಜಿಯೋ ಘೋಷಿಸಿದೆ. ಈ ಬ್ಯಾಕಪ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಲೈವ್ ಸ್ಪೋರ್ಟ್ಸ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಮುಂಬರುವ ಟಾಟಾ ಐಪಿಎಲ್ ಪಂದ್ಯಾವಳಿಯ ತಡೆರಹಿತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.
ಬಳಕೆದಾರರು ಒಂದು ಬಟನ್‌ನ ಕ್ಲಿಕ್‌ನಲ್ಲಿ 1/2/7 ದಿನದ ಆಯ್ಕೆಗಳೊಂದಿಗೆ ಮತ್ತು ಅಗತ್ಯವಿರುವಾಗ ವೇಗವನ್ನು (10 MBPS ನಿಂದ 30 / 100 MBPS ವರೆಗೆ) ಅಪ್‌ಗ್ರೇಡ್ ಮಾಡಲು ಆಯ್ಕೆ ಹೊಂದಿರುತ್ತಾರೆ.
ಈ ಯೋಜನೆಯು, ಯಾವಾಗಲೂ ಬ್ಯಾಕಪ್ ಸಂಪರ್ಕವನ್ನು ಒದಗಿಸುವ ಮೂಲಕ ಮನೆಗಳಿಗೆ 24*7 ವಿಶ್ವಾಸಾರ್ಹ ಸಂಪರ್ಕವನ್ನು ನೀಡುತ್ತದೆ. ಈ ಯೋಜನೆಯು ಸಂಪರ್ಕವಿಲ್ಲದ ಮನೆಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಕಲಿಕೆ, ಕೆಲಸ, ಮನರಂಜನೆ ಮತ್ತು ಇತರೆ ವಿಷಯಗಳಲ್ಲಿ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ.
ಈ ಯೋಜನೆಯ ಕುರಿತು ಮಾತನಾಡಿದ ಜಿಯೋ ವಕ್ತಾರರು, “ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಜಿಯೋ ಫೈಬರ್ ಬ್ಯಾಕಪ್‌ನೊಂದಿಗೆ, ನಾವು ಮನೆಗಳಿಗೆ ಪರ್ಯಾಯ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಬ್ಯಾಕ್-ಅಪ್ ಸಂಪರ್ಕದ ಈ ಹೊಸ ಪರಿಕಲ್ಪನೆಯು ಮನೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ಖಚಿತವಾದ ಡೇಟಾ ಪೂರೈಕೆಯೊಂದಿಗೆ ಪರ್ಯಾಯ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಲು ಅವಕಾಶ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
-ಗ್ರಾಹಕರು ಹೆಚ್ಚಿನ ವೇಗಕ್ಕೆ ಅಪ್‌ಗ್ರೇಡ್ ಮಾಡಬಹುದು.
– ಅನಿಯಮಿತ ಡೇಟಾ ಮತ್ತು ವಾಯ್ಸ್ ಕಾಲಿಂಗ್- ಗ್ರಾಹಕರು ತಿಂಗಳಿಗೆ 198 ರೂ.ದರದಲ್ಲಿ 10 MBPS ಅನಿಯಮಿತ ಹೋಮ್ ಬ್ರಾಡ್‌ಬ್ಯಾಂಡ್ ಅನ್ನು ಪಡೆಯಬಹುದು ಮತ್ತು ಅನಿಯಮಿತವಾಗಿ ಸ್ಥಿರ ದೂರವಾಣಿ ಕರೆಗಳನ್ನು ಮಾಡಬಹುದು.
– ಒಂದು-ಕ್ಲಿಕ್ ಸ್ಪೀಡ್ ಅಪ್‌ಗ್ರೇಡ್- ಗ್ರಾಹಕರು ತಮ್ಮ ಬ್ರಾಡ್‌ಬ್ಯಾಂಡ್ ವೇಗವನ್ನು ಒಂದು ಕ್ಲಿಕ್‌ನಲ್ಲಿ ಅದೂ ತಕ್ಷಣವೇ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. 1 / 2 / 7 ದಿನದ ವೇಗ-ಅಪ್‌ಗ್ರೇಡ್ ವೋಚರ್‌ಗಳು ದಿನಕ್ಕೆ 21 ರೂ.ಗಳಿಂದ ಪ್ರಾರಂಭವಾಗುತ್ತವೆ.
– ಅನಿಯಮಿತ ಮನರಂಜನೆ- ಗ್ರಾಹಕರು ತಿಂಗಳಿಗೆ ಕೇವಲ 100/200 ರೂ. ಹೆಚ್ಚುವರಿಯಾಗಿ ಪಾವತಿಸಿ ಅನಿಯಮಿತ ಮನರಂಜನೆಗೆ ಅಪ್‌ಗ್ರೇಡ್ ಆಗಬಹುದು. ಜೊತೆಗೆ ಜಿಯೋ ಸಿನಿಮಾ ದೊಂದಿಗೆ ಲೈವ್ ಮತ್ತು ಉಚಿತವಾಗಿ ಟಾಟಾ IPL ಅನ್ನು ಬಹು ಕ್ಯಾಮೆರಾ ಕೋನಗಳಿಂದ ವೀಕ್ಷಿಸುವ ಅವಕಾಶವೂ ದೊರೆಯುತ್ತದೆ. ಇದಲ್ಲದೆ 550+ ಲೈವ್ ಟಿವಿ ಚಾನೆಲ್‌ಗಳು, 14 OTT ಅಪ್ಲಿಕೇಶನ್‌, ಯುಟ್ಯುಬ್, ಗೇಮಿಂಗ್ ಹೀಗೆ ನೂರಾರು ಅಪ್ಲಿಕೇಶನ್‌ಗಳನ್ನು ಬಳಸಲು ಅವಕಾಶ ಇದೆ.
– ಎಲ್ಲಿಂದಲಾದರೂ ಬುಕ್ ಮಾಡಿ – ಈ ಯೋಜನೆಯನ್ನು ನಿಮ್ಮ ಹತ್ತಿರವಿರುವ ಯಾವುದೇ ಜಿಯೋ ಚಿಲ್ಲರೆ ವ್ಯಾಪಾರಿ ಅಥವಾ ಪಾಲುದಾರರೊಂದಿಗೆ ಕೇವಲ 99 ರೂ.ಗಳಲ್ಲಿ ಬುಕ್ ಮಾಡಿ ಅಥವಾ ಆನ್‌ಲೈನ್‌ನಲ್ಲಿ ಬುಕ್ ಮಾಡಲು 60008 60008 ಗೆ ಕರೆ ಮಾಡಿ ಅಥವಾ JIO.COM/FIBER ಗೆ ಭೇಟಿ ನೀಡಬಹುದು.
ಹೊಸ ಜಿಯೋ ಫೈಬರ್ ಬ್ಯಾಕ್-ಅಪ್ ಸಂಪರ್ಕವನ್ನು ಪಡೆಯುವುದು ಹೇಗೆ:
1. 490 ರೂ.ಗಳಲ್ಲಿ ಬ್ಯಾಕಪ್ ಯೋಜನೆ – 5 ತಿಂಗಳ-ಸೇವೆ (ರೂ. 990) ಮತ್ತು ಇನ್ಸ್ಟಾಲೇಶನ್ ಶುಲ್ಕ(ರೂ. 500)
2. ಮನರಂಜನಾ ಅಪ್‌ಗ್ರೇಡ್ 500 / 1,000 ರೂ.- 100 / 200 ರೂ. ಪ್ರತಿ ತಿಂಗಳು ಮುಂಬರುವ 5 ತಿಂಗಳಿಗೆ
3. GST ಅನ್ವಯಿಸುತ್ತದೆ
4. ಹೊಸ ಜಿಯೋ ಫೈಬರ್

ಪ್ರಮುಖ ಸುದ್ದಿ :-   ಭಗವದ್ಗೀತೆಯ ಪ್ರಧಾನ ವಿಷಯವೇ ಮೈಂಡ್ ಮ್ಯಾನೇಜ್ಮೆಂಟ್ : ಸ್ವರ್ಣವಲ್ಲೀ ಶ್ರೀಗಳು

1 / 5. 1

ಶೇರ್ ಮಾಡಿ :

  1. ಟೀಕಾಕಾರ

    ಅಪೂರ್ಣ ಮಾಹಿತಿ.
    ಸದ್ಯಕ್ಕೆ ಇದು ಕರ್ನಾಟಕದ ಯಾವ ಯಾವ ಊರುಗಳಲ್ಲಿ ಲಭ್ಯವಿದೆ ಎಂದು ತಿಳಿಸಿಕೊಟ್ಟಿದ್ದರೆ ಒಳ್ಳೆಯದಿತ್ತು.

ನಿಮ್ಮ ಕಾಮೆಂಟ್ ಬರೆಯಿರಿ

advertisement