‌ ಬಳ್ಳಾರಿ ಮೇಯರ್ ಆಗಿ ತ್ರಿವೇಣಿ ಆಯ್ಕೆ : ಇವರು ರಾಜ್ಯದ ಅತ್ಯಂತ ಕಿರಿಯ ಮೇಯರ್

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 23 ವರ್ಷದ ವರ್ಷದ ಡಿ.ತ್ರಿವೇಣಿ ಅವರು ಆಯ್ಕೆಯಾಗಿದ್ದು ಅವರು ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಪ ಮೇಯರ್ ಆಗಿ ಬಿ‌.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಇಂದು, ಬುಧವಾರ ಚುನಾವಣೆ ನಡೆಯಿತು‌. ಪಾಲಿಕೆಯಲ್ಲಿ 39 ಸದಸ್ಯರಿದ್ದು, ಸಂಸದರು, ಶಾಸಕರು ಸೇರಿ 44 ಮತಗಳು ಇದ್ದವು. ಬಿಜೆಪಿ 16 ಮತಗಳನ್ನು ಹೊಂದಿದ್ದರೆ ಕಾಂಗ್ರೆಸ್ 28 ಮತಗಳನ್ನು ಹೊಂದಿತ್ತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ, ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ನಿಗದಿಯಾಗಿತ್ತು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 35ನೇ ವಾರ್ಡಿನ ಸದಸ್ಯ ವಿ.ಕುಬೇರ, 7ನೇ ವಾರ್ಡಿನ ಉಮಾದೇವಿ ಶಿವರಾಜ್ ಮತ್ತು ಡಿ.ತ್ರಿವೇಣಿ ಅವರು, ಬಿಜೆಪಿಯಿಂದ 16ನೇ ವಾರ್ಡಿನ ನಾಗರತ್ನ ಅವರು ನಾಮ‌ಪತ್ರ ಸಲ್ಲಿಸಿದ್ದರು. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಕುಬೇರ ಮತ್ತು ಉಮಾದೇವಿ ನಾಮ ಪತ್ರ ವಾಪಸ್‌ ಪಡೆದ ನಂತರ ಡಿ.ತ್ರಿವೇಣಿ ಮತ್ತು ಬಿಜೆಪಿಯ ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಸದಸ್ಯರ ಪೈಕಿ ತ್ರಿವೇಣಿ 28 ಮತಗಳನ್ನು ಪಡೆದರೆ ನಾಗರತ್ನ ಅವರು 16 ಮತಗಳನ್ನು ಪಡೆದಿದ್ದರು.
ಪ್ಯಾರಾ ಮೆಡಿಕಲ್​ ವಿದ್ಯಾಭ್ಯಾಸ ಮಾಡಿರುವ ತ್ರಿವೇಣಿ ಅವರು ಅತಿ ಕಿರಿ ವಯಸ್ಸಿನಲ್ಲಿ ಮೇಯರ್ ಆಗುವ ಮೂಲಕ ರಾಜ್ಯದಲ್ಲೇ ದಾಖಲೆ ಬರೆದಿದ್ದಾರೆ. ಅವರ ತಾಯಿ ಸುಶೀಲಾ ಬಾಯಿ ಈ ಹಿಂದೆ ಬಳ್ಳಾರಿ ಪಾಲಿಕೆ ಮೇಯರ್ ಆಗಿದ್ದರು. 2022ರ ಮಾರ್ಚ್‌ನಲ್ಲಿ ಪಾಲಿಕೆಗೆ ಚುನಾವಣೆ ನಡೆದಿತ್ತು. ಈ ವೇಳೆ 4ನೇ ವಾರ್ಡ್​​ನಿಂದ ಸ್ಪರ್ಧಿಸಿದ್ದ ತ್ರಿವೇಣಿ 501 ಮತ ಪಡೆದು ಗೆಲುವು ಸಾಧಿಸಿ ಪಾಲಿಕೆ ಸದಸ್ಯರಾಗಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement