
ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ (NCLAT) ನ್ಯಾಯಮಂಡಳಿ ಮಾರ್ಚ್ 29 ರಂದು ಬುಧವಾರ ಗೂಗಲ್ ವಿರುದ್ಧ ಸ್ಪರ್ಧಾತ್ಮಕ ಆಯೋಗ (CCI) ನೀಡಿದ್ದ ಆಂಡ್ರಾಯ್ಡ್ ಪ್ರಾಬಲ್ಯದ ಆದೇಶವನ್ನು ಭಾಗಶಃ ಎತ್ತಿಹಿಡಿದಿದೆ. ಸಿಸಿಐ ವಿಧಿಸಿರುವ 1338 ಕೋಟಿ ರೂ. ದಂಡದ ಆದೇಶವನ್ನು ನ್ಯಾಯಮಂಡಳಿ ಎತ್ತಿ ಹಿಡಿದಿದೆ. ಹಾಗೂ ದಂಡವನ್ನು ಪಾವತಿಸಲು ಮತ್ತು ಆದೇಶವನ್ನು ಜಾರಿಗೆ ತರಲು ಗೂಗಲ್‌ಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಸಿಸಿಐನ ಆದೇಶವು ಯಾವುದೇ ಪಕ್ಷಪಾತದಿಂದ ಕೂಡಿಲ್ಲ. ಗೂಗಲ್ ನಡೆ ಬಗ್ಗೆ ಸಿಸಿಐ ನಡೆಸಿದ್ದ ತನಿಖೆಯಲ್ಲಿ ಸಹಜ ನ್ಯಾಯದ ತತ್ವಗಳ ಉಲ್ಲಂಘನೆಯಾಗಿಲ್ಲ ಎಂದು ಎನ್‌ಸಿಎಎಲ್‌ಟಿ ತಿಳಿಸಿದೆ. ಅಲ್ಲದೆ, ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಂಪೂರ್ಣ ಗೂಗಲ್ ಮೊಬೈಲ್ ಸೇವೆಗಳ (ಜಿಎಂಎಸ್) ಪೂರ್ವ-ಸ್ಥಾಪನೆಯು ಅನ್ಯಾಯದ ಬಳಕೆಗೆ ಕಾರಣವಾಗುತ್ತದೆ ಎಂದು ಆದೇಶ ಹೇಳಿದೆ. ಆದಾಗ್ಯೂ ಸಿಸಿಐ ನೀಡಿರುವ ನಾಲ್ಕು ನಿರ್ದೇಶನಗಳನ್ನು ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾ. ಅಶೋಕ್ ಭೂಷಣ್, ತಾಂತ್ರಿಕ ಸದಸ್ಯ ಡಾ. ಅಲೋಕ್ ಶ್ರೀವಾಸ್ತವ ಅವರಿದ್ದ ಪೀಠ ಬದಿಗೆ ಸರಿಸಿದೆ.

ಬಳಕೆದಾರರು ನೇರವಾಗಿ ವೆಬ್‌ಸೈಟ್‌ನಿಂದ ಅಥವಾ ಅಜ್ಞಾತ ಮೂಲದಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಎಚ್ಚರಿಕೆಗಳನ್ನು (ಸೈಡ್‌ಲೋಡಿಂಗ್) ಕಳುಹಿಸುವಲ್ಲಿ ಗೂಗಲ್ (Google) ನ್ಯಾಯಯುತವಾಗಿದೆ.
ಗೂಗಲ್‌ನಲ್ಲಿ ತನ್ನ ಸ್ವಾಮ್ಯದ ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್ಫೇಸ್ (API) ಅನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ.
ಮಾಲ್‌ವೇರ್ ಅನ್ನು ತಪ್ಪಿಸಲು ತನ್ನ ಪ್ಲೇ ಸ್ಟೋರ್‌ಗಳಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಸ್ಟೋರ್‌ಗಳನ್ನು ಗೂಗಲ್ ಅನುಮತಿಸದಿರುವುದು ಸರಿಯಾಗಿದೆ.
ಹಾಗೂ ಆಂಡ್ರಾಯ್ಡ್ (Android) ಫೋನ್‌ಗಳಲ್ಲಿ ಗೂಗಲ್ ಸೂಟ್ ಅಪ್ಲಿಕೇಶನ್‌ಗಳ ಅಸ್ಥಾಪನೆಯನ್ನು ಗೂಗಲ್ ನಿರ್ಬಂಧಿಸಬಹುದು ಎಂದು ಎನ್‌ಸಿಎಲ್‌ಎಟಿ ಹೇಳಿದೆ.
ದಂಡವನ್ನು ಪಾವತಿಸಲು ಮತ್ತು ಆದೇಶವನ್ನು ಜಾರಿಗೆ ತರಲು ಗೂಗಲ್‌ಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಟೆಕ್ ದೈತ್ಯ ಈಗ ಸುಪ್ರೀಂ ಕೋರ್ಟ್‌ನಲ್ಲಿ ಆದೇಶವನ್ನು ಪ್ರಶ್ನಿಸಬಹುದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ